ಬೆಂಗಳೂರು: ಟ್ಯಾಂಕರ್ ಹರಿದು ಸೆಂಟ್ ಕ್ಯಾಥರೀನ್ ಶಾಲೆ ಶಿಕ್ಷಕಿ ಸಾವು
ಬೆಂಗಳೂರು, ಆಗಸ್ಟ್, 26: ಬೆಂಗಳೂರಿನಲ್ಲಿ ಮುಂಜಾನೆಯೇ ಅವಘಡ ಸಂಭವಿಸಿದೆ. ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ದಾರುಣ ಸಾವಿಗೀಡಾಗಿದ್ದಾರೆ.
ಬಿನ್ನಿಪೇಟೆ ನಿವಾಶಿ ಅಶ್ವಿನಿ(21) ಅವರ ಮೇಲೆ ಗಂಡನೊಂದಿಗೆ ಹೊಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದ ಅಶ್ವಿನಿ ಅವರಿಗೆ ಹಿಂದಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿದೆ.[ಮೈದಾನದಲ್ಲೇ ಡಿಕ್ಕಿಯಾದ ಕ್ರಿಕೆಟಿಗರು]

ಸೆಂಟ್ ಕ್ಯಾಥರೀನ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಅಶ್ವಿನಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದರು. ಅವರ ಗಂಡ ಆಕ್ಟೀವಾ ಚಲಾಯಿಸುತ್ತಿದ್ದು ಅಶ್ವಿನಿ ಹಿಂದೆ ಕುಳಿತುಕೊಂಡಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿದೆ.
ನಿಯಂತ್ರಣ ತಪ್ಪಿದ ಬೈಕ್ ಕೆಳಕ್ಕೆ ಉರುಳಿದ್ದು ಅಶ್ವಿನಿ ನೆಲಕ್ಕೆ ಬಿದ್ದಿದ್ದಾರೆ. ಗ್ಯಾಸ್ ಚಕ್ರ ಅಶ್ವಿನಿ ಅವರ ಮೇಲೆ ಹರಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.












Click it and Unblock the Notifications