Power Cut: ಮಂಗಳವಾರದವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್; ಮಾಹಿತಿ, ವಿವರ
ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಬೆಂಗಳೂರು ನಗರದಲ್ಲಿ ಹಲವು ನಿರ್ವಹಣಾ ಕಾರ್ಯಗಳು, ದುರಸ್ಥಿ ಮತ್ತು ಉನ್ನತೀಕರಣ ಕೆಲಸ ಮಾಡುವ ಕಾರಣ ಭಾನುವಾರ (ಆಗಸ್ಟ್ 18) ದಿಂದ ಮಂಗಳವಾರದವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗುವ ಸಾಧ್ಯತೆ ಇದೆ. ವಿವಿಧ ಪ್ರದೇಶಗಳ ವಸತಿ ಮತ್ತು ಕೈಗಾರಿಕಾ ಪ್ರದೇಶಗಳ ಮೇಲೆ ವಿದ್ಯುತ್ ವ್ಯತ್ಯಯ ಪರಿಣಾಮ ಬೀರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಹುತೇಕ ಕಡೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ನಡುವೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇಂದು (ಭಾನುವಾರ) ಮಧ್ಯಾಹ್ನ 3.30ರವರೆಗೆ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ರಾಜಗೋಪಾಲನಗರ, ಜಿಕೆಡಬ್ಲ್ಯೂ ಲೇಔಟ್, ಕಸ್ತೂರಿ ಲೇಔಟ್, ಇಎಸ್‌ಐ ಆಸ್ಪತ್ರೆ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ, ಚಾಮುಂಡಿಪುರ, ಗಣಪತಿ ನಗರ ಮುಖ್ಯರಸ್ತೆ, ಎಚ್‌ಎಂಟಿ ರಸ್ತೆ, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಎಂಇಸಿ ಲೇಔಟ್, ಕೆಎಚ್‌ಬಿ ರಾಜೇಶ್ವರಿ ನಗರ, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ಟೆಲಿಫೋನ್ ಎಕ್ಸ್‌ಚೇಂಜ್ ಮತ್ತು ಪಕ್ಕದಲ್ಲಿ ಪ್ರದೇಶಗಳಲ್ಲಿ ಸಮಸ್ಯೆಯಾಗಲಿದೆ.
ಆಗಸ್ಟ್ 19ರ ಸೋಮವಾರ
ಬಿಡಬ್ಲ್ಯುಎಸ್‌ಎಸ್‌ಬಿ ಎಸ್‌ಟಿಪಿ, ಜಕ್ಕಸಂದ್ರ, ಎಚ್‌ಎಸ್‌ಆರ್ 5 ವಲಯ, ಶಿಕ್ಷಕರು ಕಾಲೋನಿ, ವೆಂಕಟಾಪುರ ಭಾಗಗಳು, ಕೆಎಂಎಫ್ ಮದರ್ ಡೈರಿ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್‌ಇಎಸ್ ರಸ್ತೆ, ಸಿಎಂ ಎನ್‌ಕ್ಲೇವ್, ಮಾತೃ ಲೇಔಟ್, ಸೋಮೇಶ್ವರ ನಗರ, ಕನಕ ನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಬಿಬಿಎಂಪಿ ಬಂಡ್ ರಸ್ತೆ, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆಗಸ್ಟ್ 20 ಮಂಗಳವಾರ
ಸೇಂಟ್ ಜಾನ್ಸ್ ಆಸ್ಪತ್ರೆ, ಹಳೆ ಮಡಿವಾಳ, ಒರಾಕಲ್, ಮಡಿವಾಳ, ಚಿಕ್ಕ ಆಡುಗೋಡಿ, ಬಿಗ್ ಬಜಾರ್, ಆಕ್ಸೆಂಚರ್, ಕೆಎಂಎಫ್ ಗೋಡೌನ್, ಆವಲಹಳ್ಳಿ, ಶ್ರೀನಿಧಿ ಲೇಔಟ್ ಮತ್ತು ಅಕ್ಕಪಕ್ಕದ ಪ್ರದೇಶಗಳು, ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಆಡುಗೋಡಿ, ಸಲಾರ್‌ಪುರಿಯ ಟವರ್, ನಿಮ್ಹಾನ್ಸ್ ಅಡ್ಮಿನ್ ಬ್ಲಾಕ್, ಎನ್‌ಡಿಆರ್‌ಐ-ಪೊಲೀಸ್ ಕ್ವಾರ್ಟರ್ಸ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಬೆಂಗಳೂರು ಡೈರಿ, ಫೋರಂ ಮಾಲ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಕೋರಮಂಗಲ 3, 4, 5, 6, 7 , 8 ಬ್ಲಾಕ್‌ಗಳು, ಎನ್‌ಡಿಆರ್‌ಐ, ಎನ್‌ಐಎಎನ್‌ಪಿ, ಕೃಷ್ಣ ನಗರ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮೂಲಸೌಕರ್ಯ ನವೀಕರಣಗಳು, ಲೈನ್ ಆಧುನೀಕರಣ, ನಿರ್ವಹಣೆ, ಕೇಬಲ್‌ಗಳನ್ನು ಬದಲಾಯಿಸುವುದು, ಕಂಬಗಳ ಸ್ಥಳಾಂತರ, ರಿಂಗ್ ಮುಖ್ಯ ಘಟಕ (RMU) ನಿರ್ವಹಣೆ, ಮರದ ರೆಂಬೆ ಕೊಂಬೆ ಕತ್ತರಿಸುವುದು ನೀರು ಸರಬರಾಜು ಸುಧಾರಣೆಯಂತಹ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications