ಲಾಲ್‌ಬಾಗ್‌ಗೆ ಇನ್ನುಮುಂದೆ ಪರ್ಫ್ಯೂಮ್ ಹಾಕಿಕೊಂಡು ಹೋಗುವಂತಿಲ್ಲ!

Recommended Video

      ಬೆಂಗಳೂರಿನ ಲಾಲ್ ಬಾಗ್ ಗೆ ಹೋಗುವವರು ಹೀಗೆ ಮಾಡಬಾರದು | Oneindia Kannada

      ಬೆಂಗಳೂರು, ಏಪ್ರಿಲ್ 03: ಜೇನು ದಾಳಿಗೆ ತುತ್ತಾಗಿ ಪ್ರಾಣಕಳೆದುಕೊಂಡಿರುವ ಎಷ್ಟೋ ಘಟನೆಗಳಿಗೆ ಲಾಲ್‌ಬಾಗ್ ಸಾಕ್ಷಿಯಾಗಿತ್ತು. ಆದರೆ ಇನ್ನುಮುಂದೆ ಅಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಅಧಿಕಾರಿಗಳು ಉಪಾಯ ಮಾಡಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

      ಲಾಲ್‌ಬಾಗ್‌ಗೆ ತೆರಳುವವರು ಗಾಢ ಸುವಾಸನೆ ಬೀರುವ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವಂತಿಲ್ಲ. ಜೇನುನೊಣ ದಾಳಿ ನಡೆಸುವುದನ್ನು ತಪ್ಪಿಲು ತೋಟಗಾರಿಕೆ ಇಲಾಖೆ ಈ ಕ್ರಮ ಕೈಗೊಂಡಿದೆ.

      ಒಂದು ವೇಳೆ ಅತಿಯಾದ ವಾಸನೆ ಬೀರುವ ಪರ್ಫ್ಯೂಮ್ ಹಾಕಿಕೊಂಡು ಹೋದರೂ ಪ್ರವೇಶ ದ್ವಾರದಲ್ಲಿರುವ ಸಿಬ್ಬಂದಿಯು ಅಂತಹ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾರೆ. ಜೇನು ಗೂಡುಗಳು ಹೆಚ್ಚಾಗಿವೆ. ಹತ್ತಿರ ಸುಳಿದರೆ ದಾಳಿ ನಡೆಸುತ್ತವೆ. ಇದರಿಂದ ನಿಮಗೆ ಮಾತ್ರ ತೊಂದರೆಯಲ್ಲ ಇತರರಿಗೂ ತೊಂದರೆಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಹೇಳುತ್ತಿದ್ದಾರೆ.

      Bengaluru says no to strong perfume over bee attack fear

      ಲಾಲ್‌ಬಾಗ್‌ನಲ್ಲಿ ಸಾಕಷ್ಟು ಮರಗಳಲ್ಲಿ ಹೂವುಗಳು ಅರಳಿರುವುದರಿಂದ ಮಕರಂದ ಹೀರಲು ಜೇನುನೊಣಗಳು ಉದ್ಯಾನದ ಮರಗಳಲ್ಲಿಯೇ ಜೇನು ಕಟ್ಟಿಕೊಂಡಿದೆ. ಉದ್ಯಾನದಲ್ಲಿ ಮಕರಂದ ಹೀರಲು ಅತ್ತಿಂದತ್ತ ಸಂಚರಿಸುತ್ತಿರುವ ಜೇನು ನೊಣಗಳು ಮಳೆಗಾಲಕ್ಕೆ ಆಹಾರ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ. ಅದರಿಂದಾಗಿ ಕಪ್ಪು ಬಟ್ಟೆ ಹಾಗೂ ಸುಗಂಧ ದ್ರವ್ಯವನ್ನು ಆಕರ್ಷಿಸುತ್ತದೆ.

      ಬೇಸಿಗೆ ರಜೆಯಾಗಿರುವುದರಿಂದ ದಿನಕ್ಕೆ ಸಾವಿರಾರು ಮಂದಿ ಮಕ್ಕಳು ಪೋಷಕರೊಂದಿಗೆ ಭೇಟಿ ನೀಡುತ್ತಾರೆ. ಹೆಚ್ಚು ಜನಸಂದಣಿ ನಡುವೆ ಗಾಢ ಪರ್ಫ್ಯೂಮ್ ಬಳಸಿದವರು ನಡೆದರೆ ಆಗ ಜೇನು ನೊಣಗಳು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಈ ಎರಡನ್ನೂ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+