Land Price: ಬೆಂಗಳೂರಲ್ಲಿ ಭೂಮಿ ಬೆಲೆ ಹೆಚ್ಚಳಕ್ಕೆ ಇದೇ ಕಾರಣ: ತೇಜಸ್ವಿ ಸೂರ್ಯ
ಬೆಂಗಳೂರು, ಜುಲೈ 28: ಬೆಂಗಳೂರು ಕಳೆದ ಒಂದೂವರೆ ದಶಕದಲ್ಲಿ ವ್ಯಾಪಕವಾಗಿ ವಿಸ್ತರಣೆ ಆಗುತ್ತಿದೆ. ಇದರಿಂದ ನಗರದ ಒಳಗಿನ ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ. ಕೈಗಾರಿಕೆ, ಅಭಿವೃದ್ಧಿ, ಮೂಲಸೌಕರ್ಯ ಹೆಚ್ಚಿಸಲು ಕೃಷಿ ಭೂಮಿ, ರೈತರ ಮಧ್ಯ ಸಂಘರ್ಷ ನಡೆಯುತ್ತಲೇ ಇದೆ. ಇದರಿಂದ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವುದು ಸವಾಲಾಗಿದೆ. ದೇವನಹಳ್ಳಿಯಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಜಮೀನು ವಶಕ್ಕೆ ಮುಂದಾದ ಬಳಿಕ ವ್ಯಾಪಕ ಆಕ್ರೋಶ ಉಂಟಾಯಿತು. ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶದಿಂದ ಎಲ್ಲವು ಸರಿಹೋಯಿತು. ನಗರೀಕರಣ ಪ್ರಭಾವ ಹೆಚ್ಚಾಗಿದೆ.
ಇದೇ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ನಗರ ವಿಸ್ತರಣೆ ಆಗುತ್ತಿರುವುದು ಒಂದು ಪ್ರಮುಖ ಸಮಸ್ಯೆಯೇ ಆಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ, ವಿಸ್ತರಣೆಗೆ ಬಿಬಿಎಂಪಿ ಕೈಗೊಂಡ ನಿರ್ಧಾರಗಳ, ಅದರಿಂದ ಭೂಮಿ, ಆಸ್ತಿಗಳ ಮೇಲಿನ ಬೆಲೆ ಏರಿಕೆಯನ್ನು ಅವರು ವಿವರಿಸಿದ್ದಾರೆ.

ಸುಮಾರು ಒಂದೂವರೆಗೆ ದಶಕದ ಹಿಂದೆ (15 ವರ್ಷಗಳ ಹಿಂದೆ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರವನ್ನು 250 ಚದರ ಕಿಲೋ ಮಿಟರ್‌ನಿಂದ 780 ಚದರ ಕಿಲೋ ಮೀಟರ್‌ಗೆ ವಿಸ್ತರಣೆ ಮಾಡಿತು. ಈ ಕಾರಣದಿಂದ ನಗರದ ಮಧ್ಯಭಾಗದೊಳಗಿನ ಭೂಮಿಯ ಬೆಲೆಗಳನ್ನು ಅಸಮಂಜಸ ಮಟ್ಟಕ್ಕೆ ಏರಿಸುವುದರ ಜೊತೆಗೆ ಹೊಸ ಪ್ರದೇಶಗಳಿಗೆ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸುತ್ತದೆ ಎಂದಿದ್ದಾರೆ.
ನಾವು ಮಾಡುತ್ತಿರುವ ನಗರೀಕರಣದ ಬಗ್ಗೆ ಹಲವು ಹಂತಗಳಲ್ಲಿ ಪುನರ್ವಿಮರ್ಶೆ ಅಗತ್ಯವಿದೆ. ಏಕೆಂದರೆ ಈಗಾಗಲೇ ಕೈಗಾರಿಕೆ ಉದ್ದೇಶದಿಂದ ನಾವು ಕೃಷಿ ಜಮೀನು ವಶಕ್ಕೆ ಪಡೆಯಲು ಮುಂದಾಗಿದ್ದು, ರೈತರ ಹೋರಾಟಗಳನ್ನು ನೋಡಿದ್ದೇವೆ. ಈ ವಿಚಾರದಲ್ಲಿ ಸಂಘರ್ಷ ಉಂಟಾಗುತ್ತಿದೆ. ನಗರದ ಒಳಗಡೆ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾರಿಗೆ, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸುವುದು ಸವಾಲಾಗಿದೆ ಎಂದು ಅವರ ಕಳವಳ ವ್ಯಕ್ತಪಡಿಸಿದ್ದಾರೆ. ಆತ್ಮ ವಿಮರ್ಶೆಯ ಮಾತುಗಳನ್ನಾಗಿದ್ದಾರೆ.
ಬೆಂಗಳೂರಿನಲ್ಲಿ ಭೂಮಿಗೆ ಆಗಾಧ ಬೇಡಿಕೆ
ದೇವನಹಳ್ಳಿಯಲ್ಲಿ 1,777 ಎಕರೆ ಭೂಮಿ ಸ್ವಾಧೀನ ಪ್ರಕರಣೆ, ಪ್ರತಿಭಟನೆ ಸಿಎಂ ಮಧ್ಯಸ್ತಿಕೆಯಿಂದ ಶಾಂತಯುತವಾಯಿತು. ಇಂತಹ ಅನೇಕ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ದೇಶದ ಲಘು ನಗರೀಕರಣ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ, ನಗರ ಭೂಮಿಗೆ ಅಗಾಧ ಬೇಡಿಕೆ ಉಂಟು ಮಾಡಿದೆ. ಅಗತ್ಯದಷ್ಟು ಭೂಮಿ ಸಿಗದಂತಾಗಿದೆ. ಬೆಂಗಳೂರು ನಗರಾಭಿವೃದ್ಧಿ (ಬಿಡಿಎ), ಕೆಐಎಡಿಬಿ ಮತ್ತು ಕಂದಾಯ ಇಲಾಖೆಯಂತಹ ಸರ್ಕಾರಿ ಸಂಸ್ಥೆಗಳು ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಮೂಲಸೌಕರ್ಯ ಉದ್ದೇಶಕ್ಕಾಗಿ ಭೂಮಿ ಸ್ವಾಧೀನ ಮುಂದುವರಿಸಿದೆ.
ರಿಯಲ್ ಎಸ್ಟೇಟ್‌ನಿಂದ ಕೃಷಿ ಭೂಮಿ ಪರಿವರ್ತನೆ
ಬೇಡಿಕೆ ಇರುವ ಭೂಮಿಯ ಬಹುಪಾಲು ಪುರಸಭೆಯ ಮಿತಿಗಳನ್ನು ಮೀರಿದೆ ಅಂದರೆ ನಗರದ ಹೊರಗಿನ ಭಾಗಕ್ಕೂ ಬೃಹತ್ ಪ್ರಮಾಣದ ಕೃಷಿ ಭೂಮಿಯನ್ನು ಒಳಗೊಂಡಿದೆ. ಇದರಿಂದ ಬೆಳೆ ಬೆಳೆಯುವ ರೈತರ ದೀರ್ಘಕಾಲದ ಭೂಮಿಯನ್ನು ವಶಕ್ಕೆ ಪಡೆಯುವುದು. ಜೊತೆಗೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕೃಷಿಭೂಮಿಗೆ ಮತ್ತು ನಗರೀಕರಣದಿಂದ ಹಸಿರು ಹೊದಿಕೆಯ ನಷ್ಟವಾಗುತ್ತದೆ. ರಿಯಲ್ ಎಸ್ಟೇಟ್‌ನಿಂದಾಗಿ, ಸರ್ಕಾರಿ ಸಂಸ್ಥೆಗಳಿಂದ ಕೃಷಿ ಭೂಮಿಗಳು ಪರಿವರ್ತನೆ ಆಗುತ್ತಿವೆ. ಅನಿಯಂತ್ರಿತ ನಗರೀಕರಣದಿಂದ ಭವಿಷ್ಯಕ್ಕೂ ತೊಂದರೆ ಎನ್ನಲಾಗಿದೆ.
ನಗರ ಬೆಳೆದಂತೆಲ್ಲ ಮಧ್ಯಮ ವರ್ಗದವರಿಗೆ ಮನೆ ಖರೀದಿಸಲಾಗುತ್ತಿಲ್ಲ. ಅಗತ್ಯ ಜನರಿಗೆ ನೀರು ಪೂರೈಕೆ ಸವಾಲು ಎದುರಾಗಿದೆ. ಎಲ್ಲವು ದುಬಾರಿ ಆಗುತ್ತಿದೆ. ಮೂಲಸೌಕರ್ಯ ಒದಗಿಸುವ ಸವಾಲು ಎದುರಾಗಿದೆ. ಜಲಮೂಲಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗೆ ಮುಂದುವರಿದರೆ ಸಾಕಷ್ಟು ಸಮಸ್ಯೆಗಳು ಉಲ್ಬಣಿಸಬಹುದಾಗಿದ್ದು, ಇದೆಲ್ಲ ನಿಯಂತ್ರಿಸಲು ಸರ್ಕಾರಗಳು ಅಗತ್ಯ ನೀತಿ ರೂಪಿಸಬೇಕು. ಜೊತೆಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.












Click it and Unblock the Notifications