ಬೆಂಗಳೂರು ಗ್ರಾಮಾಂತರ ಲೋಕಸಭೆಯಲ್ಲಿ ಡಾ. ಮಂಜುನಾಥ್‌ಗೆ ಜಯ!
ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ, ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಗಿಟ್ಟಿಸಲು ದೊಡ್ಡ ಹೋರಾಟ ಶುರುವಾಗಿದೆ. ಹೀಗಿದ್ದಾಗ ಚುನಾವಣೆಯ ಅಸಲಿ ರಿಸಲ್ಟ್ ಏನು? ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ? ಬೆಂಗಳೂರು ಗ್ರಾಮಾಂತರ ಲೋಕಸಭೆ ಅಖಾಡದ ಇತಿಹಾಸ ಏನು? ಸಂಪೂರ್ಣ ಮಾಹಿತಿ ತಿಳಿಯೋಣ, ಆ ಮಾಹಿತಿಗಾಗಿ ಮುಂದೆ ಓದಿ.
2009ರ ತನಕ 'ಕನಕಪುರ ಲೋಕಸಭಾ ಕ್ಷೇತ್ರ' ಎಂಬ ಹೆಸರು ಹೊಂದಿದ್ದ ಈ ಕ್ಷೇತ್ರವನ್ನ 2009 ಲೋಕಸಭೆ ಚುನಾವಣೆ ಸಮಯದಲ್ಲಿ 'ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ' ಎಂದು ಮರು ನಾಮಕರಣ ಮಾಡಿದ್ದರು. 2009 ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿ ಆಯ್ಕೆ ಆಗಿದ್ದರು. ಹೀಗೆ ನಡೆದಿದ್ದ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದರೂ ಆ ನಂತರ ಸತತ ಸೋಲು ಕಂಡಿದೆ.

2013ರ ಉಪಚುನಾವಣೆ ಸಮಯದಲ್ಲಿ ಡಿ.ಕೆ. ಸುರೇಶ್ ಗೆದ್ದು ಬೀಗಿ ಈ ಮೂಲಕ 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದು ಸತತ 3 ಬಾರಿ ಡಿ.ಕೆ. ಸುರೇಶ್ ಸಂಸದರಾಗಿ ಆಯ್ಕೆ ಆಗಿದ್ದರು. ಈಗ 4ನೇ ಬಾರಿಗೆ ಆಯ್ಕೆ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾದ್ರೆ ಇದೀಗ, ಯಾವ ಪಕ್ಷಕ್ಕೆ ಮುನ್ನಡೆ ಸಿಕ್ಕಿದೆ? ಹಾಗೇ ಗೆಲ್ಲುವ ಕುದುರೆ ಯಾವ ಅಭ್ಯರ್ಥಿ? ಈ ಕುರಿತು ಪ್ರತಿಕ್ಷಣದ ಮಾಹಿತಿಗೆ ಮುಂದೆ ಓದಿ.
ಡಾ. ಮಂಜುನಾಥ್‌ಗೆ ಗೆಲುವು!
ಮತ ಎಣಿಕೆ ಆರಂಭದಲ್ಲೇ 4 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡ ಎನ್.ಡಿ.ಎ. ಅಭ್ಯರ್ಥಿ ಡಾ. ಮಂಜುನಾಥ್. ಅಂತಿಮವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ ಆಗಿದ್ದು, ಎನ್.ಡಿ.ಎ ಅಭ್ಯರ್ಥಿ ಡಾ. ಮಂಜುನಾಥ್ ಅವರಿಗೆ 6454 ಮತ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್‌ಗೆ 3135 ಮತ ಸಿಕ್ಕಿದೆ. ಅಂತಿಮವಾಗಿ ಡಾ. ಮಂಜುನಾಥ್ ಗೆದ್ದು ಬೀಗಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದೆ. ಜೆಡಿಸ್ & ಬಿಜೆಪಿ ಒಗ್ಗಟ್ಟಿನಿಂದ ಗೆಲುವು ಕಂಡಿವೆ. ಮತ್ತೊಂದು ಕಡೆ ಡಾ. ಮಂಜುನಾಥ್ ಹೊಸ ಮುಖವಾದರೂ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.












Click it and Unblock the Notifications