ಲೋಕಸಭೆ ಚುನಾವಣೆ 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಸಲಿ ಫೈಟ್ ಈಗ ಶುರು!

ಲೋಕಸಭೆ ಚುನಾವಣೆ 2024ಕ್ಕೆ ಈಗ ನಿಜವಾದ ರಂಗು ಬಂದಿದೆ. ಯಾಕಂದ್ರೆ ಬಿಜೆಪಿ ಪಕ್ಷ ಇದೀಗ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು, ಕದನ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಸಲಿ ಫೈಟ್ ಈಗ ಶುರುವಾಗಿದೆ. ಅರೆ ಅದು ಹೇಗೆ ಅಂದ್ರಾ? ಹಾಲಿ ಸಂಸದರಾದ ಡಿ.ಕೆ. ಸುರೇಶ್ ಮತ್ತು ದೇವೇಗೌಡರ ಅಳಿಯ ಡಾ. ಮಂಜುನಾಥ್ ನಡುವೆ ಇದೀಗ ಹೇಗಿರಲಿದೆ ರಾಜಕೀಯ ಯುದ್ಧ? ಮುಂದೆ ಓದಿ.

2024 ರ ಲೋಕಸಭೆ ಚುನಾವಣೆಯ ಒನ್‌ಲೈನ್ ಅಜೆಂಡಾ ಗೆಲುವು. ಹೀಗಾಗಿಯೇ ಕಾಂಗ್ರೆಸ್ & ಬಿಜೆಪಿ ನಾಯಕರು ಪಕ್ಕಾ ಫೈಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಗೆಲುವಿಗೆ ಚೆಕ್‌ಮೇಟ್ ಹೇಳಿದ್ದಾರೆ. ಇಂತಹ ಕಷ್ಟದ ಸ್ಥಿತಿಯಲ್ಲಿ ಡಿಕೆ ಬ್ರದರ್ಸ್ ಹೊಸ ರಣತಂತ್ರ ರೂಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೇರೆಯದ್ದೇ ಆಟ ಶುರು ಮಾಡಲು ಬಿಜೆಪಿ & ಜೆಡಿಎಸ್ ಹಾಗೂ ಕಾಂಗ್ರೆಸ್ ಪಡೆ ಈಗ ತಯಾರಿ ನಡೆಸಿದೆ. ಈ ಸಂದರ್ಭದಲ್ಲೇ ಜಯದೇವ ಆಸ್ಪತ್ರೆಯ ಮಾಜಿ ವೈದ್ಯರಾದ, ಡಾ. ಮಂಜುನಾಥ್ ಅವರ ಅಖಾಡ ಪ್ರವೇಶ ಭಾರಿ ಸಂಚಲನ ಸೃಷ್ಟಿಸಿದೆ.

Bengaluru Rural Lok Sabha Constituency Will Witness For A Big Political Fight In Lok Sabha Election

ಸತತ 4 ಬಾರಿ ಡಿ.ಕೆ. ಸುರೇಶ್ ಗೆಲುವು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕುತೂಹಲದ ಕೇಂದ್ರವಾಗಿದೆ. ಇಲ್ಲಿ ಈಗ ಜಯ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಬೇಕು ಅನ್ನೋದು ಕಾಂಗ್ರೆಸ್ & ಬಿಜೆಪಿ ನಾಯಕರ ಗುರಿ. ಇಲ್ಲಿ ಸತತ 3 ಬಾರಿ ಗೆದ್ದಿರುವ ಡಿ.ಕೆ. ಸುರೇಶ್ ಅವರು ಈಗ ಮತ್ತೆ ಬೆಂಗಳೂರು ಗ್ರಾಮಾಂತರದ ಕ್ಷೇತ್ರದಿಂದ ಗೆದ್ದು ಬೀಗಿದರೆ 4ನೇ ಬಾರಿಗೆ ಗೆದ್ದಂತೆ ಆಗುತ್ತದೆ. ಈ ಮೂಲಕ ಸತತ 4 ಬಾರಿ ಗೆದ್ದ ಕೀರ್ತಿ ಡಿ.ಕೆ. ಸುರೇಶ್ ಅವರಿಗೆ ಸಲ್ಲುತ್ತದೆ. ಅಲ್ಲದೆ ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುತ್ತದೆ.

ಬೆಂಗಳೂರು ಗ್ರಾಂ. ಯಾರ ಪಾಲು?

ಆದರೆ ಬಿಜೆಪಿ & ಜೆಡಿಎಸ್ ನಡುವೆ ಇದೀಗ ಮೈತ್ರಿ ಆಗಿರುವ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ವಿರುದ್ಧ, ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥರಾದ ಡಾ. ಮಂಜುನಾಥ್ ಅವರನ್ನ ಬಿಜೆಪಿ ಚಿಹ್ನೆ ಅಡಿಯಲ್ಲಿ ಅಖಾಡಕ್ಕೆ ಇಳಿಸಿದ್ದಾರೆ. ಇದು ಭಾರಿ ದೊಡ್ಡ ತಿರುವು ನೀಡುವ ನಿರೀಕ್ಷೆ ಇದ್ದರೂ, ಡಿ.ಕೆ. ಸುರೇಶ್ ಅವರು ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಇದ್ದಾರೆ. ಹಾಗಾದ್ರೆ ಇಲ್ಲಿ ಪರಿಣಾಮ ಬೀರುವ ಅಂಶ ಯಾವುದು? ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಲೋಕಸಭೆ ಗೆಲುವಿಗೆ ಏನೇನು ಅಗತ್ಯ.? ಸ್ಥಳೀಯ ಮತದಾರರಿಗೆ ಯಾರ ಮೇಲೆ ಒಲವು ಇದೆ.? ಮುಂದೆ ಓದಿ.

ಡಿ.ಕೆ. ಸುರೇಶ್ ಅವರಿಗೆ ಹಿಡಿತ ಹೆಚ್ಚು

2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಚನೆ ಆಗಿತ್ತು. ಇಲ್ಲಿ ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಕೂಡುತ್ತವೆ. ಹೀಗೆ ಈ ಕ್ಷೇತ್ರಗಳಲ್ಲಿ ಅಕ್ಷರಶಃ ಕಾಂಗ್ರೆಸ್ ಹವಾ ಇದೆ ಎನ್ನಬಹುದು, ಯಾಕಂದ್ರೆ 2013 ರಿಂದ 2019ರ ತನಕ ಸತತ ಗೆಲುವು ಸಾಧಿಸಿ, ಇದೀಗ 4ನೇ ಬಾರಿಗೆ ಗೆಲ್ಲಲು ಸಜ್ಜಾಗಿದ್ದಾರೆ ಡಿ.ಕೆ. ಸುರೇಶ್ ಅವರು. ಮತ್ತೊಂದ್ಕಡೆ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರ ಗ್ರೌಂಡ್ ವರ್ಕ್ ಜಾಸ್ತಿ ಇದೆ.

Bengaluru Rural Lok Sabha Constituency Will Witness For A Big Political Fight In Lok Sabha Election

ಆದರೆ ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥ ಡಾ. ಮಂಜುನಾಥ್ ಅವರಿಗೆ ರಾಜಕೀಯ ಕ್ಷೇತ್ರವೇ ಹೊಸದಾಗಿದ್ದು, ಡಿ.ಕೆ. ಸುರೇಶ್ ಅವರ ಕ್ಷೇತ್ರದ ಜ್ಞಾನ ಕೂಡ ಸಹಾಯಕವಾದ ವಾತಾವರಣ ನಿರ್ಮಾಣ ಮಾಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಡಿ.ಕೆ. ಸುರೇಶ್ ಅವರು ಇಲ್ಲಿ ಸಂಸದರಾದ ಬಳಿಕ ಸಾಕಷ್ಟು ಅಭಿವೃದ್ಧಿ ಆಗಿದೆ ಎಂಬುದು ಸ್ಥಳೀಯರ ಮಾತು. ಹೀಗಾಗಿ ಮತ್ತೊಮ್ಮೆ ಡಿ.ಕೆ. ಸುರೇಶ್ ಗೆಲ್ಲಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದ್ರೆ ಇದಕ್ಕೆಲ್ಲಾ ಪಕ್ಕಾ ಉತ್ತರ ಸಿಗಲು ಚುನಾವಣೆ ಫಲಿತಾಂಶದ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+