ಬೆಂಗಳೂರು: ಹಾಡಹಗಲೆ ಗುಂಡು ಹಾರಿಸಿ ಚಿನ್ನ ದರೋಡೆ
Recommended Video
ಬೆಂಗಳೂರು: ಹಾಡಹಗಲೆ ಗುಂಡು ಹಾರಿಸಿ ಚಿನ್ನ ದರೋಡೆ | Oneindia Kannada
ಬೆಂಗಳೂರು, ಆಗಸ್ಟ್ 21: ಹಾಡಹಗಲೇ ನಗರದ ವೈಯಾಲಿಕಾವಲ್‌ನಲ್ಲಿ ಗುಂಡು ಹಾರಿಸಿ ಚಿನ್ನ ದೋಚಿದ್ದಾರೆ ದರೋಡೆಕೋರರು.
ವಯ್ಯಾಲಿಕಾವಲ್‌ನ ಸಾಮ್ರಾಟ್ ಚಿನ್ನದ ಅಂಗಡಿಗೆ ಮಧ್ಯಾಹ್ನದ ವೇಳೆ ಬಂದ ಮೂವರು ವ್ಯಕ್ತಿಗಳು, ಮೊದಲಿಗೆ ಸಚಿನ್ ತೆಂಡೂಲ್ಕರ್ ಚೈನ್ ಕೇಳಿದ್ದಾರೆ. ಆ ನಂತರ ಏಕಾಏಕಿ ಬಂದೂಕು ತೆಗೆದು ಬೆದರಿಸಿದ್ದಾರೆ.
ಬಂದೂಕು ತೆಗೆಯುತ್ತಿದ್ದಂತೆ ಅಂಗಡಿ ಮಾಲಕಿಯು ಪಿಸ್ತೂಲು ತೋರಿದವರ ಮೇಲೆ ಚೇರು ಬಿಸಾಕಿ ಚೀರಿಕೊಂಡಿದ್ದಾರೆ. ಕೂಡಲೇ ದರೋಡೆಕೋರರು ಬಂದೂಕಿನಿಂದ ಅಂಗಡಿಗೆ ತಾರಸಿಗೆ ಶೂಟ್ ಮಾಡಿದ್ದಾರೆ. ಸುತ್ತ-ಮುತ್ತ ಜನರು ಸೇರುವಷ್ಟರಲ್ಲೇ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ. ಶೂಟ್ ಮಾಡಿದ್ದರಿಂದ ಯಾರಿಗೂ ಗಾಯಗಳಾಗಿರುವ ವರದಿ ಆಗಿಲ್ಲ.

ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿದ್ದಾರೆ. ಅಂಗಡಿಯಲ್ಲಿರುವ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ. ದರೋಡೆಕೋರರು ಮುಸುಕು ಹಾಕಿರಲಿಲ್ಲ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications