Bengaluru Roads: ಬೆಂಗಳೂರಲ್ಲಿ ರಸ್ತೆ ಅಗೆಯಲು ಇನ್ಮುಂದೆ ನಗರ ಪಾಲಿಕೆಯಿಂದ ಅನುಮತಿ ಕಡ್ಡಾಯ

Bengaluru Roads: ಬೆಂಗಳೂರಲ್ಲಿ ರಸ್ತೆ ಅಗೆಯುವುದು ಇನ್ಮುಂದೆ ಇನ್ನಷ್ಟು ಕಠಿಣವಾಗಲಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ, ಕೆಪಿಟಿಸಿಎಲ್, ಬಿಎಂಆರ್‌ಸಿಎಲ್‌, ಜಲಮಂಡಳಿ, ಗೇಲ್, ಒಎಫ್‌ಸಿ ಕೇಬಲ್ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ರಸ್ತೆಗಳನ್ನು ಕತ್ತರಿಸಿದ ನಂತರ ಸರಿಯಾಗಿ ಮರುಸ್ಥಾಪಿಸದಿರುವುದನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಇನ್ನಷ್ಟು ಬಿಗಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಸಂಬಂಧ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಲಾಗಿದೆ.

ಈ ಸಭೆಯಲ್ಲಿ ಬೆಸ್ಕಾಂ, ಜಲಮಂಡಳಿ, ಗೇಲ್‌ ಹಾಗೂ ಕೇಬಲ್ ಸಂಸ್ಥೆಗಳೊಂದಿಗೆ ಪರಸ್ಪರ ಸಮನ್ವಯತೆ ಸಾಧಿಸಿ ರಸ್ತೆ ಅಗೆಯುವುದನ್ನು ನಿಯಂತ್ರಿಸುವುದು, ಕತ್ತರಿಸಲಾದ ರಸ್ತೆಗಳನ್ನು ಸಕಾಲದಲ್ಲಿ ಮತ್ತು ಗುಣಮಟ್ಟದೊಂದಿಗೆ ರಸ್ತೆ ಪುನಃಸ್ಥಾಪಿಸುವುದು, ಕಾರ್ಯಕ್ಷಮತೆ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹೊಣೆಗಾರಿಕೆ ಹೊಂದಿರುವ ರಸ್ತೆ ಪುನರ್‌ಸ್ಥಾಪನಾ ಸಮಿತಿಯನ್ನು ರಚಿಸುವುದು ಹಾಗೂ ಸಂಘಟಿತ ಯೋಜನೆಯ ಮೂಲಕ ವಾಹನ ಸವಾರರು ಎದುರಿಸುತ್ತಿರುವ ಮೂಲಸೌಕರ್ಯ ತೊಂದರೆಗಳನ್ನು ತಪ್ಪಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಲಾಗಿದೆ.

Bengaluru Roads

ಸಮನ್ವಯದಿಂದ ಕೆಲಸ ಮಾಡಿ

ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಬೇಕು. ನಮ್ಮಿಂದ ನಿಮಗೆ ಅಗತ್ಯವಾದ ಸಹಕಾರ ಸಿಗುತ್ತದೆ. ನೀವು ಸರಿಯಾಗಿ ಕೆಲಸ ಮಾಡಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ಕೆಲಸ ಮಾಡಬೇಕಾದ ನೀವೆ ನಿರ್ಲಕ್ಷ ತೋರಬಾರದು. ನಾವೆಲ್ಲರೂ ಯೂನಿಟಿ ಟೀಮ್‌ ಆಗಿ ಕೆಲಸ ಮಾಡಬೇಕು. ಆ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಆಯಾ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳ ವಿಳಂಬ ಕುರಿತು ಯಾವುದೇ ಕಾರಣ ನೀಡುವಂತಿಲ್ಲ ಎಂದು ಹೆಚ್ಚುವರಿ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅಗತ್ಯ ಅನುಮತಿ ಪಡೆದ ಬಳಿಕವೇ ಕಾಮಗಾರಿ ಆರಂಭಿಸಿ

ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳ ಮಧ್ಯೆ ಸಮನ್ವಯ ಇಲ್ಲ. ಸಭೆ ಮಾಡಿದ ಬಳಿಕವೂ ಕ್ಷೇತ್ರದಲ್ಲಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಇದನ್ನು ಸರಿಪಡಿಸಿಕೊಳ್ಳಬೇಕು. ಪ್ರತಿಯೊಂದು ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಮುಂಚಿತವಾಗಿಯೇ ನಗರ ಪಾಲಿಕೆಗೆ ಸಲ್ಲಿಸಬೇಕು. ಒಂದೇ ರಸ್ತೆಯನ್ನು ಪದೇ ಪದೇ ಅಗೆಯುವುದನ್ನು ತಪ್ಪಿಸಲು ಡಾಂಬರೀಕರಣ, ವಿದ್ಯುತ್ ಕೇಬಲ್, ನೀರು ಸರಬರಾಜು, ಒಳಚರಂಡಿ, ಗ್ಯಾಸ್ ಪೈಪ್‌ಲೈನ್ ಹಾಗೂ ಒಎಫ್‌ಸಿ ಕೇಬಲ್ ಅಳವಡಿಸುವ ಇಲಾಖೆಗಳು ಒಟ್ಟಾಗಿ ಯೋಜನೆ ರೂಪಿಸಿ, ಅಗತ್ಯ ಅನುಮತಿ ಪಡೆದ ನಂತರವೇ ಕಾಮಗಾರಿ ಆರಂಭಿಸಬೇಕು ಎಂದಿದ್ದಾರೆ.

ಸಭೆಯಲ್ಲಿ ಹೆಚ್ಚುವರಿ ಆಯುಕ್ತರು ನೀಡಿದ ಪ್ರಮುಖ ನಿರ್ದೇಶನ

* ರಸ್ತೆ ಕತ್ತರಿಸಿ ಕಾಮಗಾರಿ ಪೂರ್ಣಗೊಂಡ ತಕ್ಷಣ, ನಿಗದಿತ ಮಾನದಂಡಗಳಂತೆ ರಸ್ತೆಯನ್ನು ಸಮರ್ಪಕವಾಗಿ ಪುನಃಸ್ಥಾಪಿಸುವುದು.

* ರಸ್ತೆ ಪುನಃಸ್ಥಾಪನೆ ಕಾಮಗಾರಿಯಲ್ಲಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದು

* ಕಾಮಗಾರಿ ಸ್ಥಳಗಳಲ್ಲಿ ಬ್ಯಾರಿಕೇಡ್‌, ಎಚ್ಚರಿಕೆ ಫಲಕ ಹಾಗೂ ರಾತ್ರಿ ವೇಳೆ ಅಗತ್ಯ ಬೆಳಕಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವುದು.

* ಕಾಮಗಾರಿಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಸೂಕ್ತ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸುವುದು.

* ಪ್ರಮುಖ ರಸ್ತೆಗಳು, ಮೆಟ್ರೋ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಹೆಚ್ಚಿನ ಸಂಚಾರವಿರುವ ಪ್ರದೇಶಗಳಲ್ಲಿ ಬಹಳ ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸುವುದು.

* ಕಾಮಗಾರಿಗಳು ಪೂರ್ಣಗೊಂಡ ಬಳಿಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಉಳಿಯುವ ಕಂಬಗಳು, ಕೊಳವೆಗಳು, ತಂತಿಗಳು, ಬಾಕ್ಸ್‌ಗಳು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸುವುದು.

* ಯಮಲೂರು-ಕೆಂಪಾಪುರ ಮಾರ್ಗದಲ್ಲಿ ಜಲಮಂಡಳಿಯಿಂದ ಕೈಗೊಳ್ಳಲಿರುವ ಸುಮಾರು 700 ಮೀಟರ್‌ ಪೈಪ್‌ಲೈನ್‌ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು.

* ಸೀಗೇಹಳ್ಳಿ ಮುಖ್ಯ ರಸ್ತೆಯಿಂದ ಬಸವನಪುರ ಮುಖ್ಯ ರಸ್ತೆಯವರೆಗೆ ಜಲಮಂಡಳಿ ವತಿಯಿಂದ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದ್ದು, ರಸ್ತೆ ಮರುಸ್ಥಾಪನೆ ಶುಲ್ಕವನ್ನು ಜಲಮಂಡಳಿ ವತಿಯಿಂದ ಪಾವತಿಸುವುದು.

* ಹೊರವರ್ತುಲ ರಸ್ತೆಯ ಉಡುಪಿ ಸನ್ನಿಧಿ ಹೋಟೆಲ್ ಬಳಿ ಅನುಮತಿ ಇಲ್ಲದೆ ರಸ್ತೆಯನ್ನು ಅಗೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ಅಗೆದಿರುವ ರಸ್ತೆಯನ್ನು ಶೀಘ್ರವೇ ಸರಿಪಡಿಸುವುದು.

* ಟ್ರಾನ್ಸ್‌ಮಿಷನ್ ಲೈನ್ ಕಾರಿಡಾರ್‌ನಿಂದ 2.8 ಮೀಟರ್ ಅಂತರ ಕಾಯ್ದುಕೊಳ್ಳದೆ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ಈ ಕಟ್ಟಡಗಳ ವಿರುದ್ಧ ಪಾಲಿಕೆ ಹಾಗೂ ಕೆಪಿಟಿಸಿಎಲ್ ಜಂಟಿ ತಂಡವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+