Viral Road Rage: ಶಾಲಾ ಮಕ್ಕಳಿದ್ದ ವಾಹನ ತಡೆದು ಕಿಡಿಗೇಡಿಗಳ ಪುಂಡಾಟ, ವಿಡಿಯೋ ವೈರಲ್

ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರಿನಲ್ಲಿ ಇದುವರೆಗೆ ಜರುಗಿದ ಬಹುತೇಕ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗಿ ರಾತ್ರಿ ವರದಿ ಆಗಿದ್ದವು. ಇದೀಗ ಕಳೆದ ಸೋಮವಾರ ಮಟ ಮಟ ಮಧ್ಯಾಹ್ನವೇ ರೋಡ್ ರೇಜ್ ನಡೆದಿದೆ. ಶಾಲಾ ವಾಹನವನ್ನು ತಡೆದು, ಚಾಲಕನನ್ನು ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಈ ಪ್ರಕರಣದ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ತಿಳಿಸಿರುವ ಪೊಲೀಸರು ಇಂತಹ ಸಂದರ್ಭದಲ್ಲಿ ಅಗತ್ಯ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

ಒಂದಲ್ಲಾ ಒಂದು ಕಡೆ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣ ವರದಿ ಆಗುತ್ತಿವೆ. ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ಸಮೀಪ ಶಾಲಾ ಮಕ್ಕಳಿದ್ದ ವಾಹನ ಚಾಲಕನನ್ನು ಹೊರಗೆಳೆದ ಸ್ಕಾರ್ಪಿಯೋ ಕಾರಿನಲ್ಲಿದ್ದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

Bengaluru Road Rage Miscreants attack on School Bus Driver near Electronic city

ತಮ್ಮ ಸ್ಕಾರ್ಪಿಯೋ ಕಾರಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಶಾಲಾ ವಾಹನ ಅಡ್ಡಗಟ್ಟಿ ಕೃತ್ಯ ಎಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಕಬ್ಬಿಣದ ಸರಳಿನಿಂದ ಶಾಲಾ ವಾಹನದ ಕಿಟಿ ಗಾಜು ಒಡೆದು ಬಲವಂತದಿಂದ ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಕ್ಕಳು ಭಯದಿಂದ ಚಿರಾಡಿದ್ದು ಕಂಡು ಬಂದಿದೆ. ನೋಡ ನೋಡುತ್ತಲೇ ರಸ್ತೆ ಅಕ್ಕ ಪಕ್ಕದ ಜನರು ಕೂಡಿದ್ದಾರೆ. ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ, ಆಗಿದ್ದೇನು?

ಈ ವಾಹನ ಟಿರ್ಮಿಶ್ ಶಾಲೆಗೆ ಸೇರಿದ ವಾಹನವಾಗಿದೆ. ಎಂದಿನಂತೆ ಕಳೆದ ಸೋಮವಾರ ಸಹ ಮಕ್ಕಳನ್ನು ಕರೆದುಕೊಂಡು ಬರುತ್ತಿದೆ. ಈ ವೇಳೆ ಹಿಂದಿನಿಂದ ಈ ಕಿಡಿಗೇಡಿಗಳು ಇದ್ದ ಸ್ಕಾರ್ಪಿಯೋ ವಾಹನವು ಬಂದಿದೆ. ಕಿಡಿಗೇಡಿಗಳು ದಾರಿಯಲ್ಲಿ ಸೈಡ್ ಸರಿಯುವಂತೆ ಹಾರ್ನ್ ಹಾಕಿದ್ದಾರೆ. ಈ ವೇಳೆ ಶಾಲಾ ವಾಹನ ದಾರಿ ಕೊಡುವುದು ತಡವಾಗಿದೆ.

ಅಷ್ಟಕ್ಕೆ ಆಕ್ರೋಶಗೊಂಡ ಈ ಸ್ಕಾರ್ಪಿಯೋ ಪುಂಡರು ಮುಂದೆ ಬಂದ ಶಾಲಾ ವಾಹನ ಅಡ್ಡಗಟ್ಟಿದ್ದಾರೆ. ನೋಡ ನೊಡುತ್ತಿದ್ದಂತೆ ವಾಹನ ಚಾಲಕ ಜೇಮ್ಸ್ ಧೋನ್ ಎಂಬುವವರನ್ನು ಬಲವಂತದಿಂದ ಹೊರಕ್ಕೆ ಎಳೆದು ಹಲ್ಲೆ ಮಾಡಿದ್ದಾರೆ. ನೂಕಾಡಿರುವ ದೃಶ್ಯಗಳು ಬೇರೆಯವರು ಕಾರಿನ ಡ್ಯಾಶ್‌ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಗಳ ವಿರುದ್ಧ ದೂರು ದಾಖಲು

ಘಟನೆ ಬಳಿಕ ಶಾಲಾ ವಾಹನ ಚಾಲಕ ಜೇಮ್ಸ್ ಧೋನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತ ವಿಡಿಯೋ ಹಾಗೂ ಪೋಟೋಗಳನ್ನು ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ಪ್ರಯಾಣಿಕರು, ವಾಹನ ಸವಾರರು ಬೆಂಗಳೂರಿನಲ್ಲಿ ಓಡಾಡುವಾಗ ಇಂತಹ ಸಂದರ್ಭಗಳಲ್ಲಿ ಅಗತ್ಯ ಎಚ್ಚರಿಕೆ ವಹಿಸಿ. ಮಾತಿಗೆ ಮಾತು ಕೊಡುವ ಬದಲು ಸಹಾಯವಾಣಿ 112 ಗೆ ಕರೆ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+