Bengaluru: ಐಎಎಫ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು; ಆರೋಪಿ ಬಂಧಿಸಿದ ಪೊಲೀಸರು

ಭಾನುವಾರ ಸಂಜೆ ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಅವರ ಪತ್ನಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವಿಂಗ್ ಕಮಾಂಡರ್ ಆದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ದಂಪತಿಗಳು ಸಿವಿ ರಾಮನ್ ನಗರದ ಡಿಆರ್‌ಡಿಒ ಕಾಲೋನಿಯಿಂದ ತಮ್ಮ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ವಿಂಗ್ ಕಮಾಂಡರ್ ಆದಿತ್ಯ ಬೋಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಾಳಿಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಒಬ್ಬ ಬೈಕ್ ಸವಾರ ತಮ್ಮ ವಾಹನಕ್ಕೆ ಅಡ್ಡಗಟ್ಟಿದ್ದು ಕನ್ನಡದಲ್ಲಿ ನಿಂದಿಸಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಿದ್ದರು.

bengaluru road rage case iaf officer probe accused arrested

ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ವಿಂಗ್ ಕಮಾಂಡರ್ ಬೋಸ್ ಅವರ ಮುಖ ಮತ್ತು ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿತ್ತು. ಬೈಕ್ ಸವಾರ ಇದ್ದಕ್ಕಿದ್ದಂತೆ ತಮ್ಮ ಕಾರಿನ ಮುಂದೆ ತನ್ನ ವಾಹನವನ್ನು ನಿಲ್ಲಿಸಿ ಕನ್ನಡದಲ್ಲಿ ನಿಂದಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ. ತಮ್ಮ ಕಾರಿನ ಮೇಲೆ ಡಿಆರ್‌ಡಿಒ ಸ್ಟಿಕ್ಕರ್ ನೋಡಿದ ಬಳಿಕ ಇನ್ನಷ್ಟು ನಿಂದಿಸಿದ್ದು, ತನ್ನ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಬೋಸ್ ಹೇಳಿದ್ದರು.

ಬೈಕ್ ಸವಾರನ ಜೊತೆ ಮಾತನಾಡಲು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಆತ ಬೈಕ್‌ ಕೀನಿಂದ ಅವರ ಹಣೆಗೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಬೈಕ್ ಸವಾರ ತಮ್ಮ ವಾಹನದ ಮೇಲೆ ಕಲ್ಲು ಎಸೆದಿದ್ದಾನೆ, ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದರು.

ಸುಳ್ಳು ಆರೋಪ ಮಾಡಿದ ಅಧಿಕಾರಿ

ಆದರೆ ಇದು ಕನ್ನಡದ ವಿಚಾರಕ್ಕೆ ಆಗಿರುವ ಜಗಳವಲ್ಲ ಎಂದು ವರದಿಯಾಗಿದೆ. ಸ್ಥಳೀಯರ ಪ್ರಕಾರ ವಿಂಗ್ ಕಮಾಂಡರ್ ಕೂಡ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ, ಇದು ರಸ್ತೆಯಲ್ಲಿ ನಡೆಯುವ ಜಗಳವಾಗಿದ್ದು, ವಿಂಗ್ ಕಮಾಂಡರ್ ಸಿಂಪತಿ ಗಳಿಸಲು ಭಾಷೆಯ ವಿಚಾರವನ್ನು ಮಧ್ಯೆ ತಂದಿರುವುದಾಗಿ ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಆದಿತ್ಯ ಬೋಸ್ ಮೊದಲು ಬೈಕ್ ಸವಾರನಿಗೆ ಹೊಡೆದರು, 20-30 ಬಾರಿ ಪಂಚ್ ಮಾಡಿದರು. ಆತ ತುಂಬಾ ಕೋಪಗೊಂಡಿದ್ದ, ಇದು ರಸ್ತೆಯಲ್ಲಿ ವಾಹನಗಳಿಗೆ ಜಾಗ ಬಿಡದ ಕಾರಣಕ್ಕೆ ನಡೆದ ಜಗಳ, ಆದರೆ ಕೆಲವು ಉತ್ತರ ಭಾರತೀಯರು ಇದು ಕನ್ನಡದ ವಿಚಾರಕ್ಕಾಗಿ ನಡೆದಿರುವ ಜಗಳ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸದ್ಯ ಬೈಕ್ ಸವಾರನನ್ನು ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಗಳಿಂದ ಕೇಸ್‌ಗೆ ಟ್ವಿಸ್ಟ್

ಇದೀಗ ಘಟನೆ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾಗಿದೆ. ಐಎಎಫ್ ಅಧಿಕಾರಿಯೇ ಡೆಲಿವರಿ ಬಾಯ್‌ಗೆ ಥಳಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಅಧಿಕಾರಿಯನ್ನು ತಡೆಯಲು ಹೋದರೂ ಆತನೇ ಹದ್ದು ಮೀರಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+