• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ರಸ್ತೆಗೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಒಪ್ಪಿಗೆ

|

ಬೆಂಗಳೂರು, ಆಗಸ್ಟ್ 22 : ಬೆಂಗಳೂರು ನಗರದ ರಸ್ತೆಯೊಂದಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಸ್ವಾಮೀಜಿಗಳ ಹೆಸರಿಡಲು ಒಪ್ಪಿಗೆ ಕೋರಿ ಬಿಬಿಎಂಪಿ ಮನವಿ ಸಲ್ಲಿಕೆ ಮಾಡಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಬಿಕೆ ಅವರು ಸರ್ಕಾರ ಒಪ್ಪಿಗೆ ನೀಡುವುದನ್ನು ಖಚಿತಪಡಿಸಿದ್ದಾರೆ. "ನಮ್ಮ ದೀರ್ಘ ಪ್ರಯತ್ನ ಸಫಲವಾಗಿದ್ದು, ಸರ್ಕಾರದ ಆದೇಶವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ" ಎಂದು ಹೇಳಿದ್ದಾರೆ.

ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀಗಳಿಗೆ ಟ್ವಿಟ್ಟರ್ ನಲ್ಲಿ ನಮನ

ಬಿಬಿಎಂಪಿ ವ್ಯಾಪ್ತಿಗೆ ಬರು ಗೊರಗುಂಟೇಪಾಳ್ಯದಿಂದ ಕೆನ್ನಾಮೆಟಲ್ ಕಾರ್ಖಾನೆವರೆಗಿನ ಮೇಲುಸೇತುವೆಗೆ ಮತ್ತು ಯಶವಂತಪುರ ವೃತ್ತದಿಂದ ಕೆನ್ನಾಮೆಟಲ್ ಕಾರ್ಖಾನೆವರೆಗಿನ ರಸ್ತೆಗೆ ಶಿವಕುಮಾರ ಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿತ್ತು.

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

"ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ" ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ನಮ್ಮ ದೀರ್ಘ ಪ್ರಯತ್ನ ಸಫಲವಾಗಿದ್ದು, ಸರ್ಕಾರದ ಆದೇಶವಾಗಿರುವುದಾಗಿ ತಿಳಿಸಲು ಹರ್ಷಿಸುತ್ತಿದ್ದೇನೆ ಎಂದು ಮೇಯರ್ ತಿಳಿಸಿದ್ದಾರೆ.

ಭಾರತ ಸಂಪರ್ಕಿಸುವ ಭಾರತಮಾಲಾ, ಸಾಗರಮಾಲಾಕ್ಕೆ ವೇಗ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷರಾದ ಶ್ರೀ ಸಿದ್ದಗಂಗಾಸ್ವಾಮಿ ಅವರ ಆಶೀರ್ವಾದ ಪಡೆದರು. ಸಚಿವರಾದ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Karnataka government approved for the BBMP proposal to name Samvidhana vrutha to Kennametal factory road of to be name after Yeshwanthpur Tumakuru Siddaganga mutt Shivakumar Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X