Bengaluru IRR: ಒಆರ್‌ಆರ್, ಪಿಆರ್‌ಆರ್ ಆಯ್ತು ಈಗ 210 ಕಿಮೀ IRR ರಸ್ತೆಗೆ ಮರುಜೀವ, ಯೋಜನೆ ವಿವರ
ಬೆಂಗಳೂರು: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿವೆ. ಇತ್ತೀಚೆಗೆ ಬೆಂಗಳೂರು ಕೈಗಾರಿಕಾ ಕಾರಿಡಾರ್ (PRR/BBC) ಯೋಜನೆಗೆ ಇತ್ತೀಚೆಗೆ ಟೆಂಡರ್ ಕರೆಯಲಾಗಿದೆ. ಅದರ ಬೆನ್ನಲ್ಲೆ ಸುಮಾರು 30 ವರ್ಷಗಳ ಹಿಂದಿನ ಮಹತ್ವದ ರಸ್ತೆ ಅಭಿವೃದ್ಧಿ ಯೋಜನೆಗೆ ಸರ್ಕಾರ ಮರುಜೀವ ನೀಡಿದೆ. ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‌ಡಿಎ) ಈ ಯೋಜನೆ ಜಾರಿಗೊಳಿಸುತ್ತಿದೆ.
ಮೂರು ದಶಕಗಳಷ್ಟು ಹಳೆಯದಾದ ರಸ್ತೆ ಯೋಜನೆ ಇದಾಗಿದ್ದು, ಇದಕ್ಕೆ ಮಧ್ಯಂತರ ವರ್ತುಲ ರಸ್ತೆ (IRR Project) ಯೋಜನೆ ಎಂದು ಕರೆಯಲಾಗುತ್ತಿದೆ. ರಾಜಧಾನಿಯ ಉಪನಗರಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ಈ ರಸ್ತೆ ನಿರ್ಮಾಣಕ್ಕೆ 2007ರಲ್ಲಿ ಸರ್ಕಾರ ಮುಂದಾಗಿತ್ತು. ಆದರೆ ಭೂಮಿ ಸ್ವಾಧೀನ, ಇನ್ನಿತರ ಕಾನೂನು ತೊಡಕುಗಳಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅದಕ್ಕೀಗ ಸರ್ಕಾರ ಮರುಜೀವ ನೀಡಿ ಯೋಜನೆ ಆರಂಭಕ್ಕೆ ಇಚ್ಛಾಶಕ್ತಿ ವ್ಯಕ್ತಪಡಿಸಿದೆ. ಮತ್ತೊಂದೆಡೆ ಹಾಲಿ ಯೋಜನೆಗಳೇ ಕುಂಟುತ್ತಿರುವಾಗ ಮೂಲೆ ಸೇರಿದ್ದ ಬಹುಕೋಟಿ ವೆಚ್ಚದ ಯೋಜನೆ ಆರಂಭಿಸುವ ಅಗತ್ಯವಿದಿಯಾ? ಎಂಬ ಪ್ರಶ್ನೆ ಉದ್ಭವಿಸಿದೆ.

12 ಉಪನಗರಗಳ ಸಂಪರ್ಕ ಜಾಲ ವೃದ್ಧಿ
ಬೆಂಗಳೂರು ಹೊರವಲಯದ ಹಾರೋಹಳ್ಳಿ, ಬಿದದಿ, ಕನಕಪುರದ ತಟ್ಟೆಕೆರೆ, ತಾವರೆಕೆರೆ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ದೊಡ್ಡಮಸಂದ್ರ ಹಾಗೂ ಆನೇಕಲ್ ಸೇರಿದಂತೆ 12 ಉಪನಗರಗಳನ್ನು ಸಂಪರ್ಕಿಸಿ ಪ್ರಮುಖ ಸಾರಿಗೆ ಜಾಲ ನಿರ್ಮಾಣ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಈ ಐಆರ್‍ಆರ್ ಯೋಜನೆಗೆ 2022ರ ಆಗಸ್ಟ್ ಹೈಕೋರ್ಟ್ ಮಾರ್ಗ ಬದಲಾವಣೆಗೆ ನಿರ್ದೇಶನ ನೀಡಿತು. ಬಳಿಕ ಪ್ರಾಧಿಕಾರವು 2023ರ ಮಾರ್ಚ್ ತಿಂಗಳಲ್ಲಿ ಪರಿಷ್ಕೃತ ಯೋಜನೆ ತಯಾರಿಸಿತ್ತು ಎಂದು ನಗರ ಅಭಿವೃದ್ಧಿ ಇಲಾಖೆ ತಿಳಿಸಿದೆ.
ಯೋಜನೆ ಮುನ್ನ ಸಮೀಕ್ಷೆ ನಡೆಸದೇ ರೂಪಿಸಿದ ಈ ಮಾರ್ಗವು ಅಸ್ತಿತ್ವದಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ರಸ್ತೆಗಳ ಮೂಲಕ ಸಾಗುವ ಪ್ರಸ್ತಾವಿತ್ತು. ಮೂಲ 90 ಮೀಟರ್ ರಸ್ತೆಗೆ ಬದಲಾಗಿ 9 ರಿಂದ 30 ಮೀಟರ್‌ವರೆಗೆ ರಸ್ತೆಯು ಅಸಮಂಜಸ ಅಗಲ ಹೊಂದಿದೆ ಎಂದು ಪುನರ್ ವಿಮರ್ಶೆ, ಪರಿಷ್ಕರಣೆ ಮಾಡಲಾಗಿತ್ತು.
ಸದರಿ ಯೋಜನೆಗೆ ಸಂಬಂಧಿಸಿದಂತೆ 2025ರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ, ಬಿಎಂಆರ್‌ಡಿಎ ಐಆರ್‍ಆರ್ ಯೋಜನೆಗೆ ಮಾರ್ಪಾಡು ತರುವುದಾಗಿ ತಿಲಿಸಿದೆ. ಮೂಲ ನಕ್ಷೆ ಈಗಾಗಲೇ ಪ್ರಾಧಿಕಾರಗಳು ಮಾಸ್ಟರ್ ಪ್ಲಾನ್ ರೂಪಿಸಿದವು. ಇದರಿಂದ ಯಾವುದೇ ತೊಂದರ ಆಗದು ಎಂದು ಅಧಿಕಾರಿಗಳು ತಿಳಿದ ಬೆನ್ನಲ್ಲೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದೆ.
ಸ್ಯಾಟ್‌ಲೈಟ್ ಟೌನ್ ರಿಂಗ್ ರಸ್ತೆಗೆ ಸಂಪರ್ಕ
ಪರಿಷ್ಕೃತ ನಕ್ಷೆ ಬಿಟ್ಟು ಅಸ್ತಿತ್ವದಲ್ಲಿರುವ ಪ್ರದೇಶಗಳಿಗೆ ಅಡ್ಡಿಯಾಗುವ ಹಾಗೂ ಪ್ರಾದೇಶಿಕ ರಸ್ತೆ ಜಾಲಗಳೊಂದಿಗೆ ಹೊಂದಿಕೊಳ್ಳುವ ಹೊಸ ಮಾರ್ಗದ ರೂಪರೇಷೆಗಳನ್ನು ತಯಾರಿಸಲಾಗಿದೆ. ನೆಲಮಂಗಲ ಟೌನ್ ರಿಂಗ್ ರೋಡ್ ಮತ್ತು ಆನೇಕಲ್-ಹೊಸಕೋಟೆ ಮಾರ್ಗದಲ್ಲಿನ ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್ (STRR) ನೊಂದಿಗೆ IRR ವಿಲೀನಗೊಳ್ಳುವಂತೆ ಮಾಡಲಾಗಿದೆ. ಇದರಿಂದ ಹೊರವಲಯದ ರಸ್ತೆ ಜಾಲಗಳು ಒಂದಕ್ಕೊಂದು ಸಂಪರ್ಕ ಸಾಧಿಸಲಿವೆ.
ತಗ್ಗಲಿದೆ ಭೂಮಿ ಸ್ವಾಧೀನ ಹೊರೆ
ಈ ಯೋಜನೆಯಿಂದ ಒಂದಷ್ಟು ಆರ್ಥಿಕ ಲಾಭಗಳಿವೆ. ಸರ್ಕಾರ ಅನುಮೋದಿತ ಬಡಾವಣೆಗಳಲ್ಲಿ ಭೂಮಿಯನ್ನು ಡೆವಲಪರ್‌ಗಳು ಅಭಿವೃದ್ಧಿ ಅನುಮೋದನೆ ಪಡೆಯುವಾಗ ನೋಂದಾಯಿತ ಹಕ್ಕು ಬಿಟ್ಟುಕೊಡುವ ದಾಖಲೆಗಳ ಮೂಲಕ ಸರ್ಕಾರಕ್ಕೆ ಉಚಿತವಾಗಿ ಹಸ್ತಾಂತರಿಸಲಿದ್ದಾರೆ. ಇದು ಸರ್ಕಾರದ ಮೇಲಿನ ಭೂಸ್ವಾಧೀನ ಹೊರೆ ತಗ್ಗಿಸುತ್ತದೆ. "ಐಆರ್‌ಆರ್, ಎಸ್‌ಟಿಆರ್‌ಆರ್ ಮತ್ತು ಪಿಆರ್‌ಆರ್ ನಡುವಿನ ವಿಶಾಲ ಪ್ರದೇಶಗಳನ್ನು ಸಂಪರ್ಕಿಸುವಿದರಿಂದ ಸುಮಾರ 12 ಉಪನಗರಗಳ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕಿದೆ 175 ಎಕರೆ ಭೂಮಿ
ಐಆರ್‍ಆರ್ ಯೋಜನೆಗಾಗಿ ಸರ್ಕಾರದ ಬಳಿಕ 175 ಎಕರೆ ಭೂಮಿ ಇದೆ. ಹೆಚ್ಚುವರಿ ಅಗತ್ಯ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ಇನ್ನೇನು ಚಾಲನೆ ಸಗಿಲಿದೆ. ಅಗತ್ಯ ಹಣಕಾಸು ಹೊಂದಿಸಲು ಸರ್ಕಾರ ಸಜ್ಜಾಗಿದೆ. ಸ್ಯಾಟ್‌ಲೈಟ್ ಟೌನ್ ರಿಂಗ್ ರಸ್ತೆ ಜಾಲ 228 ಕಿ.ಮೀ. ಉದ್ದವಿದ್ದು, 17,000 ಕೋಟಿ ವಚ್ಚದಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ ಬೆಂಗಳೂರು 27,000 ಕೋಟಿ ವೆಚ್ಚದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಾಗೂ 13,500 ಕೋಟಿ ರೂ. ವೆಚ್ಚದ 75 ಕಿ.ಮೀ. ಉದ್ದದ 11 ಮೂಲಸೌಕರ್ಯ ಕಾರಿಡಾರ್‌ಗಳ ಯೋಜನೆಗಳೂ ನಿರ್ಮಾಣ ಹಂತದಲ್ಲಿವೆ. ಇದೀಗ ಐಆರ್‍ಆರ್ ರಸ್ತೆ ಯೋಜನೆ ಸಹ ವೇಗ ಪಡೆದುಕೊಳ್ಳುವ ನಿರೀಕ್ಷೆಗಳು ಕಾಣುತ್ತಿವೆ.














Click it and Unblock the Notifications