Bengaluru: 3 BHK ಫ್ಲಾಟ್‌ಗೆ ಬರೋಬ್ಬರಿ 16,883 ರೂ. ಕರೆಂಟ್ ಬಿಲ್, ಬೆಚ್ಚಿಬಿದ್ದ ಬೆಂಗಳೂರಿಗ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ, ದಿನಸಿ, ಮತ್ತು ದಿನನಿತ್ಯದ ಜೀವನ ನಿರ್ವಹಣಾ ವೆಚ್ಚಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದೀಗ ಬೆಂಗಳೂರಿನ 3 ಬಿಎಚ್‌ಕೆ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಬಂದಿರುವ ವಿದ್ಯುತ್ ಬಿಲ್ (Electricity Bill) ಮೊತ್ತವನ್ನು ಕಂಡು ಕೇವಲ ಆ ವ್ಯಕ್ತಿ ಮಾತ್ರವಲ್ಲ, ನೆಟ್ಟಿಗರು ಕೂಡ ಬೆಚ್ಚಿಬಿದ್ದಿದ್ದಾರೆ.

ಸಾಮಾನ್ಯವಾಗಿ ಮೂರು ಬೆಡ್‌ರೂಮ್‌ಗಳಿರುವ ಮನೆಯ ವಿದ್ಯುತ್ ಬಿಲ್ ಕೆಲವು ಸಾವಿರ ರೂಪಾಯಿಗಳು ಬರಬಹುದು ಎಂದು ಊಹಿಸಬಹುದು. ಆದರೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈ ವ್ಯಕ್ತಿಗೆ ಬರೋಬ್ಬರಿ 16,883 ರೂಪಾಯಿಗಳ ಬಿಲ್ ನೀಡಿದೆ. ಫೆಬ್ರವರಿ 18ರ ಒಳಗೆ ಈ ಮೊತ್ತವನ್ನು ಪಾವತಿಸುವಂತೆ ಬೆಸ್ಕಾಂ ಆ್ಯಪ್‌ನಲ್ಲಿ ತೋರಿಸಿರುವ ಸ್ಕ್ರೀನ್‌ಶಾಟ್ ಅನ್ನು ಆತ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ (Reddit) ಹಂಚಿಕೊಂಡಿದ್ದು, ಸದ್ಯ ಇದು ಭಾರಿ ವೈರಲ್ ಆಗುತ್ತಿದೆ.

Bengaluru

ಪೋಸ್ಟ್‌ನಲ್ಲಿ ಏನಿದೆ ?

"ಬೆಂಗಳೂರಿನಲ್ಲಿ ಇಷ್ಟೊಂದು ವಿದ್ಯುತ್ ಬಿಲ್ ಬರುವುದು ಸಾಮಾನ್ಯವೇ?" ಎಂದು ಪ್ರಶ್ನಿಸಿರುವ ಅವರು, ತನ್ನ ಮನೆಯ ದೈನಂದಿನ ವಿದ್ಯುತ್ ಬಳಕೆಯ ವಿವರಗಳನ್ನು ಬಿಚ್ಚಿಟ್ಟಿದ್ದಾನೆ. "ನಾನು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಮನೆಯಲ್ಲಿ ಒಟ್ಟು ನಾಲ್ಕು ಜನರಿದ್ದೇವೆ. ನಮ್ಮ ಮನೆಯಲ್ಲಿರುವುದು ಕೇವಲ ಒಂದೇ ಒಂದು ಎಸಿ (AC), ಅದನ್ನು ದಿನಕ್ಕೆ ಗರಿಷ್ಠ 5 ರಿಂದ 7 ಗಂಟೆಗಳ ಕಾಲ ಬಳಸುತ್ತೇವೆ. ಇದರ ಜೊತೆಗೆ ಒಂದು 650w ಗೇಮಿಂಗ್ ಪಿಸಿ, ಸಣ್ಣ ಅಡುಗೆ ಇಂಡಕ್ಷನ್ ಒಲೆ, ಒಂದು ಏರ್ ಫ್ರೈಯರ್ ಮತ್ತು ಹಗಲಿಡೀ 4 ಫ್ಯಾನ್‌ಗಳು ಓಡುತ್ತವೆ. ಇಷ್ಟೇ ನಮ್ಮ ವಿದ್ಯುತ್ ಬಳಕೆ" ಎಂದು ಆತ ಬರೆದುಕೊಂಡಿದ್ದಾನೆ.

ಸಾಮಾನ್ಯವಾಗಿ ತಮ್ಮ ಮನೆಯ ವಿದ್ಯುತ್ ಬಿಲ್ ಐದರಿಂದ ಒಂಬತ್ತು ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಬರುತ್ತಿತ್ತು ಎಂದು ತಿಳಿಸಿರುವ, ಅವರು "ಬಳಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಏಕಾಏಕಿ 16 ಸಾವಿರಕ್ಕೂ ಅಧಿಕ ಬಿಲ್ ಬಂದಿರುವುದು ಅಚ್ಚರಿ ಮೂಡಿಸಿದೆ. ಇದು ಖಂಡಿತಾ ಇಷ್ಟೊಂದು ಬರುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಎಲ್ಲಿ ದೂರು ನೀಡಬೇಕು?" ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ಪೋಸ್ಟ್ ನೋಡಿದ ತಕ್ಷಣ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ. ಒಬ್ಬ ಬಳಕೆದಾರರು, "ನಾವು ನಾಲ್ಕು ಜನ ಇದ್ದೇವೆ. ಬೇಸಿಗೆಯಲ್ಲಿ ಮಾತ್ರ ಎಸಿ ಬಳಸುತ್ತೇವೆ, ಜೊತೆಗೆ ವಾಟರ್ ಹಿಟರ್‌ ಕೂಡ ಇದೆ. ನಮಗೆ 2,000ರೂ. ಬಿಲ್ ಬಂದರೆ ಅದೇ ಹೆಚ್ಚು ಎಂದುಕೊಳ್ಳುತ್ತಿದ್ದೆವು. ಆದರೆ ನಿಮ್ಮ ಬಿಲ್ ನೋಡಿ ನಮಗೆ ಶಾಕ್ ಆಯ್ತು" ಎಂದಿದ್ದಾರೆ.

ಮತ್ತೊಬ್ಬ ಪ್ರತಿಕ್ರಿಯಿಸಿ, "ಇದು ಖಂಡಿತಾ ಸಾಮಾನ್ಯವಲ್ಲ. ನಿಮ್ಮ ಜೊತೆಗಿರುವ ಫ್ಲಾಟ್‌ಮೇಟ್‌ಗಳು ಅದೆಷ್ಟು ಕರೆಂಟ್ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಗಮನವಿಡಿ" ಎಂದು ಎಚ್ಚರಿಸಿದ್ದಾನೆ. ಇನ್ನೊಬ್ಬ, "ನೀವು ನೀಡಿರುವ ಬಳಕೆಯ ವಿವರಗಳನ್ನು ನೋಡಿದರೆ ಗರಿಷ್ಠ 4,000ರೂ. ಬಿಲ್ ಬರಬಹುದು. ಕಳೆದ ತಿಂಗಳ ಬಿಲ್ ಎಷ್ಟಿತ್ತು ಎಂಬುದನ್ನು ಒಮ್ಮೆ ಪರಿಶೀಲಿಸಿ" ಎಂದು ಸಲಹೆ ನೀಡಿದ್ದಾನೆ. ಮತ್ತೊಬ್ಬರಂತೂ ವ್ಯಂಗ್ಯವಾಗಿ, "ಇಡೀ ಬಿಲ್ಡಿಂಗ್‌ನ ಕರೆಂಟ್ ಬಿಲ್ ಅನ್ನು ನೀವೊಬ್ಬರೇ ಕಟ್ಟುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ, ಮೀಟರ್‌ಗಳ ಅಳವಡಿಕೆ ಮತ್ತು ವಿದ್ಯುತ್ ದರ ಏರಿಕೆಯ ನಡುವೆ, ಬೆಸ್ಕಾಂನಿಂದ ಬರುತ್ತಿರುವ ಇಂತಹ ಅಚ್ಚರಿಯ ಬಿಲ್‌ಗಳು ಗ್ರಾಹಕರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+