Bengaluru Cybercrime: ಬೆಂಗಳೂರಿನಲ್ಲಿ ಸೈಬರ್ ಕಳ್ಳರ ಹಾವಳಿ, ಸ್ಫೋಟಕ ಮಾಹಿತಿ ಬಯಲು...
ಬೆಂಗಳೂರು ಐಟಿ ತವರು, ಬೆಂಗಳೂರು ಇಡೀ ಜಗತ್ತನ್ನು ಆಕರ್ಶಣೆ ಮಾಡುತ್ತಿರುವ ನಗರ. ಹೀಗೆಲ್ಲಾ ದೊಡ್ಡ ಹೆಸರು ಮಾಡಿರುವ ನಮ್ಮ ಬೆಂಗಳೂರು ಭಾರತದ ಹೆಮ್ಮೆ ಕೂಡ. ಆದರೆ ಇದೇ ಬೆಂಗಳೂರು ಈಗ ಸೈಬರ್ ವಂಚಕರ ಹಾವಳಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ. ಇದೇ ಸಮಯದಲ್ಲಿ ಹೊಸ ಮಾಹಿತಿ ಒಂದು ಸಂಚಲನ ಸೃಷ್ಟಿ ಮಾಡಿದ್ದು, ಸೈಬರ್ ಕ್ರೈಂ ವಿಚಾರದಲ್ಲಿ ಸ್ಫೋಟಕ ಅಂಕಿ-ಅಂಶ ಇದೀಗ ಬಯಲಾಗಿದೆ.
ಹೌದು, ಕನ್ನಡಿಗರ ರಾಜಧಾನಿ ಬೆಂಗಳೂರು ಈಗ ಸೈಬರ್ ಅಪರಾಧಗಳ ಸುಳಿಗೆ ಸಿಲುಕಿದೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ವರದಿಯಾಗಿರುವ ಪ್ರಕರಣಗಳ ಪೈಕಿ ಶೇಕಡಾ 50ಕ್ಕೂ ಹೆಚ್ಚು ಪಾಲು ಈಗ ಬೆಂಗಳೂರು ನಗರದಲ್ಲೇ ವರದಿಯಾಗಿವೆ. ಈ ಬಗ್ಗೆ ಭಾರತದ ಪ್ರಮುಖ ಮಹಾ ನಗರಗಳಲ್ಲಿನ ಸೈಬರ್ ಅಪರಾಧಗಳು ತೀವ್ರವಾಗಿ ಹೆಚ್ಚಿರುವ ಸಂಗತಿ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) 2023 ವರದಿಯಲ್ಲಿ ತಿಳಿದು ಬಂದಿದೆ.

ಹೈದರಾಬಾದ್, ಮುಂಬೈ, ಚೆನ್ನೈ...
ಅಂದಹಾಗೆ ಇತ್ತೀಚಿನ ವರದಿ ಪ್ರಕಾರ, 19 ಅತ್ಯಂತ ದೊಡ್ಡ ದೊಡ್ಡ ನಗರಗಳಲ್ಲಿ ಸೈಬರ್ ಅಪರಾಧದ ಪ್ರಕರಣಗಳ ಸಂಖ್ಯೆ ಒಂದೇ ವರ್ಷದಲ್ಲಿ ಶೇಕಡಾ 39 ರಷ್ಟು ಹೆಚ್ಚಾಗಿರುವ ಮಾಹಿತಿಯು ಈಗ ಸಂಚಲನ ಸೃಷ್ಟಿಸಿದೆ. 2022ರಲ್ಲಿ 24,420, 2023ರಲ್ಲಿ 34,000 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆ ಮಾಡುವ ಆತಂಕವೂ ಇದೆ.
ಈ ಪ್ರಕರಣಗಳಲ್ಲಿ ಬೆಂಗಳೂರಲ್ಲೇ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ. ಜೊತೆಗೆ ಹೈದರಾಬಾದ್, ಮುಂಬೈ, ಚೆನ್ನೈ, ಲಖನೌ & ದೆಹಲಿ ನಗರಗಳು ಕೂಡ ಈ ಪಟ್ಟಿಯಲ್ಲಿವೆ. ಇನ್ನು ನಗರ ಪ್ರದೇಶಗಳಲ್ಲಿ ದಾಖಲಾದ ಬಹುತೇಕ ಪ್ರಕರಣಗಳು ಐಟಿ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿದ್ದು, ಸೈಬರ್ ವಂಚಕರ ಹಾವಳಿ ತಡೆಯಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ.












Click it and Unblock the Notifications