Bengaluru Rent: ಬೆಂಗಳೂರಿಗೆ ಹೋಲಿಸಿದರೆ ಪುಣೆಯಲ್ಲಿ ಮನೆ ಬಾಡಿಗೆ ಇಷ್ಟು ಕಡಿಮೆಯೇ? ಟೆಕ್ಕಿ ಪೋಸ್ಟ್ ವೈರಲ್
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಅಲ್ಲದೆ, ಬೆಂಗಳೂರಿನ ಪ್ರಾಪರ್ಟಿಗೂ ಬಂಗಾರದ ಬೆಲೆ ಇದೆ. ಆದರೆ ಬೆಂಗಳೂರಿನಂತೆಯೇ ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ, ಮುಂಬೈ ಮತ್ತು ಪುಣೆಯಲ್ಲೂ ಬಾಡಿಗೆ ಮನೆಗಳ ಬೆಲೆ ಹೆಚ್ಚಾಗಿದೆ ಎನ್ನುವ ಅಭಿಪ್ರಾಯ ಇದೆ. ಆದರೆ, ಬೆಂಗಳೂರಿಗೆ ಹೋಲಿಕೆ ಮಾಡಿದರೆ ಭಾರತದ ವಿವಿಧ ನಗರಗಳಲ್ಲಿ ಮನೆ ಬಾಡಿಗೆ ಬೆಲೆಯು ಕಡಿಮೆ ಇದೆ ಎನ್ನುವ ವಿಷಯವು ಇದೀಗ ರಿವೀಲ್ ಆಗಿದೆ. ಬೆಂಗಳೂರು - ಮುಂಬೆ ಹಾಗೂ ದೆಹಲಿ - ಎನ್‌ಸಿಆರ್ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದ ಭಾಗದಲ್ಲಿ ಬಾಡಿಗೆ ಮನೆಯ ಬೆಲೆಯು ಕಡಿಮೆ ಇದೆ ಎನ್ನುವುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಪುಣೆ Vs ಬೆಂಗಳೂರಿನಲ್ಲಿ ಫ್ಲಾಟ್ ಹಾಗೂ ಮನೆಗಳ ಬಾಡಿಗೆ ಬೆಲೆ ಎಷ್ಟಾಗಿದೆ ಎನ್ನುವ ವಿಚಾರವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಂಜಿನಿಯರ್‌ವೊಬ್ಬರು ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಪ್ರಮುಖ ಐಟಿ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗೆ ಸಂಬಂಧಿಸಿದಂತೆ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ rajneee (@misalpavv) ಎನ್ನುವ ಖಾತೆಯಿಂದ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.

ಈ ಪೋಸ್ಟ್‌ನಲ್ಲಿ ಸಂಪೂರ್ಣವಾಗಿ ಸುಸಜ್ಜಿತವಾದ 3BHK ಫ್ಲಾಟ್‌ನಲ್ಲಿ ರೂಮ್ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಟೆಕ್ಕಿ ಬೆಲೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಶ್ಚರ್ಯಕರವಾಗಿ ಕಡಿಮೆ ಬಾಡಿಗೆಯ ಜೊತೆಗೆ, ಮಲಗುವ ಕೋಣೆ ವಿಶಾಲವಾಗಿತ್ತು, ಎರಡು ದೊಡ್ಡ ಕಿಟಕಿಗಳು ಮತ್ತು ಹಸಿರು ಪ್ರದೇಶ ಕಾಣಿಸುವ ಬಾಲ್ಕನಿಯನ್ನು ಹೊಂದಿತ್ತು ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಮಾದರಿಯ ಮನೆ ತುಂಬಾನೇ ದುಬಾರಿ, ಪುಣೆಯಲ್ಲಿ ಇಷ್ಟೊಂದು ಕಡಿಮೆ ಇದೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ ಅಂತ ಹೇಳಿದ್ದಾರೆ. ಟೆಕ್ಕಿ ತಿಂಗಳಿಗೆ ಕೇವಲ 9,000 ರೂ. ಬಾಡಿಗೆ ಎಂದು ಉಲ್ಲೇಖಿಸಿದ್ದರೂ, ಪಟ್ಟಿಯ ಪ್ರಕಾರ, ಮಾಸಿಕ ಬಾಡಿಗೆ ಸುಮಾರು 15,500 ರೂ.ಗಳಾಗಿರುತ್ತದೆ, ಇದರಲ್ಲಿ ಸೇವಕಿ, ಅಡುಗೆಯವರು, ವಾಷಿಂಗ್ ಮೆಷಿನ್, ಫ್ರಿಡ್ಜ್ ಇತ್ಯಾದಿಗಳು ಸೇರಿವೆ, ಕೆಲವು ಬಳಕೆದಾರರ ಪ್ರಕಾರ ಇದು ಇನ್ನೂ ಉತ್ತಮ ಆಯ್ಕೆ ಅಂತಲೂ ಹೇಳಿದ್ದಾರೆ.
ಈ ಪೋಸ್ಟ್‌ನ್ನು ರೀಶೇರ್ ಮಾಡಿಕೊಳ್ಳಲಾಗಿದ್ದು, ಟೆಕ್ಕಿ ನನ್ನ ಬೆಂಗಳೂರಿನ ಮೆದುಳು ಬಫರ್ ಆಯಿತು, ಕ್ರ್ಯಾಶ್ ಆಯಿತು ಮತ್ತು ಸುರಕ್ಷಿತ ಮೋಡ್‌ನಲ್ಲಿ ಮರುಪ್ರಾರಂಭಿಸಿತು ಎಂದು ತಮಾಷೆಯಾಗಿ ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದುಬಾರಿ ನಗರಗಳಲ್ಲಿ ವಾಸಿಸುವ ಅನೇಕ ಐಟಿ ಉದ್ಯೋಗಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Bengaluru Rent: ನೆಟ್ಟಿಗರು ಹೇಳಿದ್ದೇನು ?
ನೆಟ್ಟಿಗರೊಬ್ಬರು ಪೋಸ್ಟ್ ಅರ್ಥ ಮಾಡಿಕೊಳ್ಳಿ, 3BHK ನಲ್ಲಿ ಒಂದು ಕೋಣೆಗೆ 9 ಸಾವಿರ. ಆದ್ದರಿಂದ ಬಾಡಿಗೆ ವಾಸ್ತವವಾಗಿ ತಿಂಗಳಿಗೆ 27 ಸಾವಿರ ರೂ. ಮತ್ತು ಅದರಲ್ಲಿ ಒಂದೇ ಮಲಗುವ ಕೋಣೆಗೆ 9 ಸಾವಿರ ರೂ. ನ್ಯಾಯಯುತ ಬೆಲೆಯಂತೆ ತೋರುತ್ತದೆ. ನಾನು ಪುಣೆಯ ಉಂಡ್ರಿಯಲ್ಲಿ 2BHK ನಲ್ಲಿ 16 ಸಾವಿರ ರೂ.ಗೆ ವಾಸಿಸುತ್ತಿದ್ದೇನೆ, ಈಜುಕೊಳ ಮತ್ತು ಜಿಮ್‌ನಂತಹ ಉಚಿತ ಸೌಲಭ್ಯಗಳಿವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಬಾಡಿಗೆ ನೋಡಿ, ಮನೆ ನಡೆಸೋಕೆ ನನ್ನ ಮೂತ್ರಪಿಂಡವನ್ನೇ ಮಾರಬೇಕು ಅನಿಸುತ್ತಿದೆ ಎಂದೂ ಕೆಲವರು ವ್ಯಂಗ್ಯವಾಡಿದ್ದಾರೆ.
Saw a Reddit post: "This room in a 3BHK in #pune and Guess the rent."
— rajneee (@misalpavv) September 23, 2026
Big room. Two windows. Attached balcony with a glass railing. Green view.
Rent: ₹9,000 for a room in 3bhk *
My Bengaluru brain buffered, crashed, and restarted in safe mode. pic.twitter.com/0ina2E7wAS


Click it and Unblock the Notifications
