Bengaluru Rent: ಬಾಡಿಗೆ ಮನೆ ಖಾಲಿ ಮಾಡಿದ 30 ದಿನಗಳ ಬಳಿಕ ಅಡ್ವಾನ್ಸ್ ವಾಪಸ್; 2 ತಿಂಗಳ ಬಾಡಿಗೆಗೆ ಹೊಸ ಷರತ್ತು!

Bengaluru Rent: ಬೆಂಗಳೂರಿನ ಬಾಡಿಗೆ ಮನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಸ್ವರೂಪದ ಚರ್ಚೆ ನಡೆದಿದೆ. ಬೆಂಗಳೂರು ನಗರಕ್ಕೆ ಹೊಸದಾಗಿ ಬಂದ ಬಾಡಿಗೆದಾರರೊಬ್ಬರು, ಫ್ಲಾಟ್ ಖಾಲಿ ಮಾಡಿದ 30 ದಿನಗಳ ನಂತರ ಭದ್ರತಾ ಠೇವಣಿ ಮರುಪಾವತಿ ಮಾಡಲಾಗಿದೆ. ಅಲ್ಲದೆ 30 ದಿನಗಳ ಬಾಡಿಗೆಗೆ ಸಮಾನವಾದ ಪೇಂಟಿಂಗ್ ಶುಲ್ಕಗಳು ಸೇರಿದಂತೆ ಬಾಡಿಗೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಕೆಲವು ಷರತ್ತುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಬೆಂಗಳೂರಿನಲ್ಲಿ ಆಸ್ತಿ ಮಾಲೀಕರು ಬಾಡಿಗೆ ಮೊತ್ತದ ಎರಡು ತಿಂಗಳ ಹಣ ಅಥವಾ ಎರಡು ತಿಂಗಳ ಮುಂಗಡ ಹಣವನ್ನು ಮಾತ್ರ ಪಡೆಯಬೇಕು ಎಂದು ಕರ್ನಾಟಕ ಸರ್ಕಾರವು ನಿಯಮ ರೂಪಿಸಿದೆ. ಆದರೆ, ಈ ನಿಯಮವು ಕಾಗದದ ಮೇಲಷ್ಟೇ ಇದೆ ಉಳಿದಿದೆ. ಇಂದಿಗೂ ಬೆಂಗಳೂರಿನಲ್ಲಿ ಬಹುತೇಕ ಮನೆಯ ಮಾಲೀಕರು ಹೆಚ್ಚು ಮುಂಗಡ ಹಣ (Advance Rent Amount) ಪಡೆಯುತ್ತಿದ್ದಾರೆ.

Bengaluru Rent Advance Refunded 30 Days After Vacating New 2-Month Rent Condition Sparks Debate

ಇದೀಗ ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ಹಾಗೂ ಮನೆ ಖಾಲಿ ಮಾಡುವಾಗ ದುಬಾರಿ ಹಣವನ್ನು ಕಡಿತ ಮಾಡುತ್ತಿರುವುದು ಸಹ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್‌ನಲ್ಲಿ ಬೆಂಗಳೂರಿನ ಬಾಡಿಗೆ ಮನೆಗಳಿಗೆ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಆಸ್ತಿಗೆ ಹಾನಿ ಮಾಡಿದರೆ ಎರಡು ದಿನದ ಒಳಗೆ ಆಸ್ತಿಯನ್ನು ಖಾಲಿ ಮಾಡಬೇಕು. ಹೆಚ್ಚುವರಿ ಅವಧಿಗೆ ಉಳಿದರೆ, ದಿನದ ಲೆಕ್ಕದಲ್ಲಿ ಮಾಸಿಕ ಬಾಡಿಗೆಯ ಎರಡು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ ಎಂದೂ ಹೇಳಲಾಗಿದೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಒಪ್ಪಂದದಲ್ಲಿನ ಬಾಡಿಗೆ ಮನೆಗೆ ಇರುವ ವಿವಿಧ ನಿಯಮಗಳನ್ನು ನೋಡಿ ಆರ್ಶ್ಚಯಕ್ಕೆ ಒಳಗಾದೆ. ನಗರದಲ್ಲಿ ಬಾಡಿಗೆ ಮಾರುಕಟ್ಟೆಯಲ್ಲಿ ಅಂತಹ ಷರತ್ತುಗಳು ಸಾಮಾನ್ಯವಾಗಿದೆಯೇ ಎಂದು ಬಾಡಿಗೆದಾರರು ಪ್ರಶ್ನಿಸಿದ್ದಾರೆ. ಬಾಡಿಗೆದಾರರು ಮನೆಯನ್ನು ಖಾಲಿ ಮಾಡಿದ 30 ದಿನಗಳ ನಂತರ ಭದ್ರತಾ ಠೇವಣಿ (ಅಡ್ವಾನ್ಸ್‌) ಹಣ ಮರುಪಾವತಿ ಮಾಡಲಾಗುತ್ತದೆ ಎನ್ನುವ ನಿಯಮವೂ ಸಹ ಬಾಡಿಗೆ ಒಪ್ಪಂದದಲ್ಲಿದೆ ಎಂದು ಹೇಳಿದ್ದಾರೆ.

Bengaluru Rent: ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಸಂಕಷ್ಟ

ಇನ್ನು ಬಾಡಿಗೆ ಒಪ್ಪಂದದಲ್ಲಿದ್ದ ಮತ್ತೊಂದು ಷರತ್ತೆಂದರೆ, ಬಾಡಿಗೆದಾರರು ಮನೆ ಖಾಲಿ ಮಾಡುವ ಮೊದಲು ಎರಡು ತಿಂಗಳ ಮುಂಚಿತವಾಗಿ ಹೇಳಬೇಕು. ಮನೆ ಪೇಂಟಿಂಗ್ ಮತ್ತು ಮನೆಯ ಕ್ಲಿನಿಂಗ್‌ಗೆ ನೋಟಿಸ್ ಅವಧಿ ಮತ್ತು ಬಾಡಿಗೆ ಕಡಿತ ಮಾಡುವುದು ಒಪ್ಪಂದಗಳಲ್ಲಿ ಸಾಮಾನ್ಯವಾಗಿದ್ದರೂ, ಇತರ ಕೆಲವೊಂದು ಷರತ್ತು

ಗಳು ತೀರ ಹೊಸದಾಗಿವೆ. ಈ ರೀತಿಯೂ ಆಸ್ತಿ ಮಾಲೀಕರು ತಮಗೆ ಇಷ್ಟ ಬಂದಂತೆ ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆಯೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಉದಾಹರಣೆಗೆ ಓವರ್‌ಸ್ಟೇ ಷರತ್ತು, ಬಾಡಿಗೆದಾರರು ಮನೆ ಖಾಲಿ ಮಾಡಲು ಒಪ್ಪಿದ ದಿನಾಂಕದ ನಂತರವೂ ಅದೇ ಮನೆಯಲ್ಲಿದ್ದರೆ ಅಥವಾ ಮುಂದುವರಿದರೆ, ಭೂಮಾಲೀಕರಿಗೆ ದೈನಂದಿನ ಆಧಾರದ ಮೇಲೆ ಮಾಸಿಕ ಬಾಡಿಗೆಯ ಎರಡು ಪಟ್ಟು ಶುಲ್ಕ ವಿಧಿಸಲು ಅವಕಾಶ ಇರಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಕೆಲವು ಆಸ್ತಿ ಮಾಲೀಕರು ತಮ್ಮ ಮನಸ್ಸಿಗೆ ಬಂದಂತೆ ಬಾಡಿಗೆ ಹಾಗೂ ನಿಯಮಗಳನ್ನು ರೂಪಿಸುತ್ತಿದ್ದಾರೆ. ಸರ್ಕಾರವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಬಾಡಿಗೆ ಒಪ್ಪಂದವನ್ನು ಕಟ್ಟು ನಿಟ್ಟಾಗಿ ನಿಯಮ ರೂಪಿಸುವುದರೊಂದಿಗೆ ಅದನ್ನು ಜಾರಿಯೂ ಮಾಡಬೇಕು ಎಂದು ಹಲವು ನೆಟ್ಟಿಗರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+