ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್‌ಗೆ ಪರಿಹಾರ: ಬೆಳ್ಳಂದೂರು ರಸ್ತೆ-ಕಾರ್ಮೆಲರಾಮ್ ಲೈನ್ ಡಬ್ಲಿಂಗ್ ಕಾಮಗಾರಿ ಪೂರ್ಣ- ವಿವರ

ಬೆಂಗಳೂರು, ನವೆಂಬರ್‌ 03: ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೊ ಮಾರ್ಗದ ಕಾರ್ಯಾರಂಭವನ್ನು ಬೆಂಗಳೂರಿನ ಜನರು ಎದುರು ನೋಡುತ್ತಿದ್ದಾರೆ. ಇದರ ಕಾರ್ಯಾಚರಣೆ ಶುರುವಾದ ನಂತರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳಿಗೆ ಟ್ರಾಫಿಕ್‌ ತಾಪತ್ರಯ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್‌ಗೆ ಇನ್ನೊಂದು ಪರಿಹಾರ ಇಷ್ಟರಲ್ಲೇ ದೊರೆಯುವಂತೆ ಕಾಣುತ್ತಿದೆ.

ಬೆಳ್ಳಂದೂರು ರಸ್ತೆ-ಕಾರ್ಮೆಲರಾಮ್ ಲೈನ್‌ ಡಬ್ಲಿಂಗ್‌ ( 48 ಕಿಮೀ ಉದ್ದದ ಡಬ್ಲಿಂಗ್ ಯೋಜನೆ ) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಎಲೆಕ್ಟ್ರಾನಿಕ್‌ ಸಿಟಿಗೆ ಭಾರೀ ಪರಿಹಾರ ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.

Bengaluru: Relief for Electronics City- Bellandur Road-Karmelaram doubling line works to end

ಇದು ಹೊಸೂರಿನಲ್ಲಿ ಕೊನೆಗೊಳ್ಳಲಿದೆ. ಹೀಲಲಿಗೆ ನಿಲ್ದಾಣವು ಚಂದಾಪುರದ ಸಮೀಪದಲ್ಲಿದ್ದು ಇದರ ಮೂಲಕ ರೈಲು ಸಂಚರಿಸಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಮತ್ತು ಎಲೆಕ್ಟ್ರಾನಿಕ್ ಸಿಟಿ-1 ರಿಂದ ಕ್ರಮವಾಗಿ 3 ಕಿಮೀ ಮತ್ತು 5 ಕಿಮೀ ದೂರದಲ್ಲಿದೆ.

ಬೈಯಪ್ಪನಹಳ್ಳಿಯಿಂದ ಬೆಳ್ಳಂದೂರು ರಸ್ತೆ, ಕಾರ್ಮೆಲರಾಮ್, ಹುಸ್ಕೂರು, ಹೀಲಳಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಮಾರ್ಗವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಹೊಸೂರಿನಲ್ಲಿ ಕೊನೆಗೊಳ್ಳುತ್ತದೆ. ಇದನ್ನು ರೂ 498.73 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಈ ಕುರಿತು 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ಮಾತನಾಡಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕೆ-ರೈಡ್) ಪ್ರಾಜೆಕ್ಟ್‌ಗಳ ನಿರ್ದೇಶಕ ಆರ್‌ಕೆ ಸಿಂಗ್, 'ಕಾರ್ಮೇಲರಂನಿಂದ ಹೀಲಲಿಗೆ ನಿಲ್ದಾಣಗಳವರೆಗಿನ 10.5 ಕಿ.ಮೀ ಮಾರ್ಗವು ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೊನೆಗೊಳ್ಳಲಿದೆ. ನಾವು ಬೆಳ್ಳಂದೂರು ರಸ್ತೆಯಿಂದ ಕಾರ್ಮೆಲಾರಂಗೆ 3.5 ಕಿಮೀ ದೂರವನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದು ಮಹತ್ವದ್ದಾಗಿದೆ. ಇದರ ಜೊತೆಗೆ ಆನೇಕಲ್ ಮತ್ತು ಮಾರನಾಯಕನಹಳ್ಳಿ ನಡುವಿನ 7 ಕಿ.ಮೀ ಮಾರ್ಗವೂ ಕೊನೆಗೊಳ್ಳಲಿದೆ' ಎಂದು ತಿಳಿಸಿದ್ದಾರೆ.

Bengaluru: Relief for Electronics City- Bellandur Road-Karmelaram doubling line works to end

'ಬೆಳ್ಳಂದೂರು ರಸ್ತೆಯಲ್ಲಿರುವ ಏಕ ರೈಲು ಹಳಿಯನ್ನು ಈಗ ನಾಲ್ಕು ಹಳಿಗಳೊಂದಿಗೆ ಹೆಚ್ಚಿಸಲಾಗುತ್ತಿದೆ. ಆ ಮೂಲಕ ಇಲ್ಲಿ ಐದು ಹಳಿಗಳನ್ನು ಹೊಂದಲು ನಮಗೆ ಅವಕಾಶ ಮಾಡಿಕೊಡಲಾಗಿದೆ. ಕಾರ್ಮೇಲರಂ ಮತ್ತು ಹೀಲಲಿಗೆ ನಡುವೆ ಹುಸ್ಕೂರಿನಲ್ಲಿ ಹೊಸ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಹೆಚ್ಚಿನ ರೈಲುಗಳನ್ನು ಓಡಿಸಲು ಮೂಲಸೌಕರ್ಯಗಳನ್ನು ನವೀಕರಿಸುವ ಕ್ರಮಗಳಾಗಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಾಲ್ಕು ಹೊಸ ಪ್ಲ್ಯಾಟ್‌ಫಾರ್ಮ್‌ ಅನ್ನು ನಿರ್ಮಿಸಲಾಗಿದೆ. ನೈಋತ್ಯ ರೈಲ್ವೆಯು ಮಾರ್ಚ್ 2024 ರಿಂದ ಕಂಟೋನ್ಮೆಂಟ್‌ನಿಂದ ಹೀಲಲಿಗೆ ಕಡೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲನ್ನು ಓಡಿಸಬಹುದು. ಈ ಟ್ರಿಪ್‌ಗಳನ್ನು ಚಲಾಯಿಸಲು ಎರಡು ಹೊಸ MEMU 8-ಕೋಚ್ ರೈಲುಗಳನ್ನು ಸಿದ್ಧಪಡಿಸಬೇಕಾಗಿದೆ.

ಡಬ್ಲಿಂಗ್ ಯೋಜನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವಿನ ಕೆಳ ಸೇತುವೆಯನ್ನು ಸಹ ವಿಸ್ತರಿಸಲಾಗುತ್ತಿದೆ.

ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಮಾತನಾಡಿ, 'ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಯೋಜನೆ ಮತ್ತು ಈ ದ್ವಿಗುಣಗೊಳಿಸುವ ಯೋಜನೆಯು ದೊಡ್ಡ ಬದಲಾವಣೆಯನ್ನು ತರಬಹುದು. ಚಂದಾಪುರ ಜಂಕ್ಷನ್ ಹೇಲಲಿಗೆ ನಿಲ್ದಾಣದ ಆಸುಪಾಸಿನಲ್ಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಗೆ ಸಮೀಪದಲ್ಲಿದೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ-1 ರಿಂದ 5 ಕಿ.ಮೀ ದೂರದಲ್ಲಿದೆ' ಎಂದು ಅವರು ಹೇಳಿದ್ದಾರೆ.

ಸರ್ಜಾಪುರಕ್ಕೆ, ಉದಾಹರಣೆಗೆ ವಿಪ್ರೋ ಕಚೇರಿಗೆ ಹೋಗುವವರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಆನೇಕಲ್ ಮತ್ತು ಕರ್ಮೇಲರಂಗೆ ಭೇಟಿ ನೀಡುವವರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ.

ಸಂಪೂರ್ಣ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಗೆ ಡಿಸೆಂಬರ್ 2024 ರ ಗಡುವು ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+