Bengaluru Property: ಬೆಂಗಳೂರಿನ ಈ ಭಾಗದಲ್ಲಿ ಭೂಮಿ, ಆಸ್ತಿಗಳ ಬೆಲೆ ದಿಢೀರ್ ಇಳಿಕೆ: ರಿಯಲ್ ಎಸ್ಟೇಟ್‌ಗೆ ಶಾಕ್!

Bengaluru Property: ಬೆಂಗಳೂರಿನಲ್ಲಿ ಭೂಮಿ ಹಾಗೂ ಆಸ್ತಿಗೆ ಬಂಗಾರದ ಬೆಲೆ ಇದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಭೂಮಿ ಬೆಲೆ ತುಸು ಇಳಿಕೆ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಎಲ್ಲಿ ಭೂಮಿ ಬೆಲೆ ಹೆಚ್ಚಳವಾಗಿತ್ತೋ ಆ ಭಾಗದಲ್ಲಿ ಇದೀಗ ಭೂಮಿ ಬೇಡಿಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ರಿಯಲ್ ಎಸ್ಟೇಟ್‌ದಾರರಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಮುಖ ಕಾರಣಗಳಿಗೆ ಭೂಮಿಯ ಬೆಲೆ ಗಣನೀಯವಾಗಿ ಹೆಚ್ಚಳವಾಗುವುದಕ್ಕೆ ಪ್ರಾರಂಭವಾಗಿದೆ. ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳ ಭಾಗದಲ್ಲಿ ಭೂಮಿ. ಮನೆ ಖರೀದಿ ಮಾಡುವುದು ಹಾಗೂ ಆಸ್ತಿಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಭೂಮಿ ಬೆಲೆ ದಿಢೀರ್ ಕುಸಿತ ಕಂಡಿದೆ ಎಂದು HD ವರದಿ ಮಾಡಿದೆ. ಅದರ ಸಂಪೂರ್ಣ ವಿವರ ನೋಡೋಣ. ‌

Bengaluru Real Estate Shock Sudden Drop in Land and Property Prices in This Area Know More

ಬೆಂಗಳೂರಿನಲ್ಲಿ ಭೂಮಿ ಬೆಲೆ ಇಳಿಕೆಗೆ ಕಾರಣವೇನು ?

ದೇಶದಲ್ಲಿ ಚಿನ್ನದ ಬೆಲೆ ಹಾಗೂ ಬೆಂಗಳೂರಿನಲ್ಲಿ ಭೂಮಿ ಮತ್ತು ಆಸ್ತಿ ಬೆಲೆಯು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಏರಿಕೆಯ ಹಾದಿಯಲ್ಲೇ ಇದೆ. ಅದರಲ್ಲೂ ಆಸ್ತಿಗಳ ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದು ಹೆಚ್ಚಳವಾಗಿಯೇ ಇದೆ. ಬೆಂಗಳೂರಿನಲ್ಲಿ ಪ್ರಮುಖ ಐಟಿ ಕೇಂದ್ರಗಳ ಅಭಿವೃದ್ಧಿ ವಿಸ್ತರಣೆ ಹಾಗೂ ವಿವಿಧ ಪ್ರಮುಖ ಯೋಜನೆಗಳ ಜಾರಿ ಸೇರಿದಂತೆ ಹಲವು ಕಾರಣಗಳಿಗೆ ರಿಯಲ್ ಎಸ್ಟೇಟ್ ಬೂಸ್ಟ್ ಆಗಿದೆ. ಆದರೆ ಇದೀಗ ಈ ಲೆಕ್ಕಾಚಾರಗಳು ತಲೆಕೆಳಗಾಗಿವೆ ಎನ್ನಲಾಗುತ್ತಿದೆ.

ಎಐ ಶಾಕ್ ಸೇರಿದಂತೆ ಹಲವು ಕಾರಣಗಳಿಗೆ ಮುಖ್ಯವಾಗಿ ಬೆಂಗಳೂರಿನ ಟೆಕ್ ಕಾರಿಡಾರ್‌ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ ತುಸು ಡಲ್ ಆಗಿದೆ ಎಂದೇ ಹೇಳಲಾಗುತ್ತಿದೆ. ಕಳೆದ ಎರಡು ತಿಂಗಳುಗಳಲ್ಲಿ ಖರೀದಿದಾರರು ಐಟಿ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಮನೆಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚುತ್ತಿರುವ ಉದ್ಯೋಗ ಅನಿಶ್ಚಿತತೆ, ಬೆಂಗಳೂರು ಮೂಲಸೌಕರ್ಯ ಸಮಸ್ಯೆ ಚರ್ಚೆ ಹಾಗೂ ಆಸ್ತಿ ಬೆಲೆ ಹೆಚ್ಚಳ ಸೇರಿದಂತೆ ಹಲವು ಕಾರಣಕ್ಕೆ ರಿಯಲ್ ಎಸ್ಟೇಟ್‌ನ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ.

ಈ ಭಾಗಗಳಲ್ಲಿ ಭೂಮಿ ಬೆಲೆ ಭರ್ಜರಿ ಇಳಿಕೆ

ಬೆಂಗಳೂರಿ ದಕ್ಷಿಣ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬನ್ನೇರುಘಟ್ಟ ರಸ್ತೆಯಂತಹ ಕೆಲವೊಂದು ಪ್ರದೇಶಗಳು ಆರಂಭಿಕ ಟೆಕ್ ಪಾರ್ಕ್‌ಗಳಾಗಿವೆ. ಪೂರ್ವ ಐಟಿ ಕಾರಿಡಾರ್ ವೈಟ್‌ಫೀಲ್ಡ್, ಔಟರ್ ರಿಂಗ್ ರಸ್ತೆ, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆ ಸೇರಿದಂತೆ ಹಲವು ಭಾಗದಲ್ಲಿ ಐಟಿ ಕೇಂದ್ರಗಳಿವೆ. ಉತ್ತರ ಬೆಂಗಳೂರಿನ ಐಟಿ ಕಾರಿಡಾರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಬ್ಬಾಳ, ಯಲಹಂಕ ಮತ್ತು ದೇವನಹಳ್ಳಿ ಸುತ್ತಮುತ್ತಲಿನ ಮುಂಬರುವ ತಂತ್ರಜ್ಞಾನ ವಲಯಗಳು ಅಭಿವೃದ್ಧಿ ಹೊಂದಿವೆ. ಆದರೆ, ಈ ಭಾಗದಲ್ಲಿ ಈ ಹಿಂದೆ ಇದ್ದಂತಹ ಭೂಮಿಯ ಬಂಗಾರದ ಬೆಲೆಯು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್‌ ಇದ್ದರೂ ಮೊದಲಿನಷ್ಟು ಡಿಮ್ಯಾಂಡ್ ಇಲ್ಲ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ವೈಟ್‌ಫೀಲ್ಡ್‌ನಿಂದ ಸರ್ಜಾಪುರ ರಸ್ತೆಯವರೆಗೆ ಐಟಿ ಕಾರಿಡಾರ್‌ ಭಾಗದಲ್ಲಿ ಆಸ್ತಿಗಳ ಮಾರಾಟದ ಡಿಮ್ಯಾಂಡ್‌ನಲ್ಲಿ ಅಂದಾಜು ಶೇ 20 ರಿಂದ 25% ರಷ್ಟು ಕಡಿಮೆಯಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+