Get Updates
Get notified of breaking news, exclusive insights, and must-see stories!

2022 ರಲ್ಲಿ ಅತಿ ಹೆಚ್ಚು ವಿವಾಹಗಳು ನಡೆದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 2 ನೇ ಸ್ಥಾನ, ಮೊದಲು ಯಾವುದು ತಿಳಿಯಿರಿ

ಬೆಂಗಳೂರು, ಜನವರಿ 20: 2022 ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ಭಾರತದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್ 'ವೆಡ್ಡಿಂಗ್ ವೈರ್‌'ನ ವಾರ್ಷಿಕ ವರದಿ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂರನೇ ಸ್ಥಾನದಲ್ಲಿದೆ.

ವೆಡ್ಡಿಂಗ್ ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ವೆಡ್ಡಿಂಗ್ ಛಾಯಾಗ್ರಾಹಕರು ಮತ್ತು ಮೇಕಪ್ ಮ್ಯಾನ್‌ಗಳ ನಂತರ ಸ್ಥಳ ಬಾಡಿಗೆದಾರರು ಹೆಚ್ಚಾಗಿ ಬೇಡಿಕೆಯಲ್ಲಿದ್ದರು. 2022 ರಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳ ಸಂಖ್ಯೆಯು ಹೆಚ್ಚಾಯಿತು. ಉದಯಪುರ ಮತ್ತು ಗೋವಾ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದೆ. ನಂತರದ ಸ್ಥಾನದಲ್ಲಿ ಜೈಪುರವಿದೆ. ಅಂತರಾಷ್ಟ್ರೀಯ ನಗರಗಳ ವಿಷಯಕ್ಕೆ ಬಂದರೆ, ಸಿಂಗಾಪುರ, ಅಬುಧಾಬಿ ಮತ್ತು ನ್ಯೂಯಾರ್ಕ್ ಭಾರತೀಯರ ನೆಚ್ಚಿನ ವಿವಾಹ ತಾಣಗಳಾಗಿವೆ.

21.5 ರಷ್ಟು ವಿವಾಹಗಳು ಡಿಸೆಂಬರ್‌ನಲ್ಲಿ ನಡೆದಿವೆ. ಈ ತಿಂಗಳು ಗರಿಷ್ಠ ಸಂಖ್ಯೆಯ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ವರದಿಯು ಬಹಿರಂಗಪಡಿಸಿದೆ. ಫೆಬ್ರವರಿಯಲ್ಲಿ 15.49 ರಷ್ಟು ವಿವಾಹಗಳು ನಡೆದಿವೆ. 2022 ರಲ್ಲಿ ಡಿಸೆಂಬರ್ 2 ರಂದು 2022 ರಲ್ಲಿ ಅತಿ ಹೆಚ್ಚು ವಿವಾಹಗಳು ನಡೆದಿವೆ. ವಾರಾಂತ್ಯದ ವಿವಾಹಗಳು ಜನಪ್ರಿಯತೆಯ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಸ್ಥಾನವನ್ನು ಪಡೆದಿರುವುದು ಮುಂದುವರಿದಿದೆ. ಏಕೆಂದರೆ ಹೆಚ್ಚಿನ ಜೋಡಿಗಳು ಭಾನುವಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Bengaluru ranks 2nd in the list of cities that hosted highest weddings in 2022

ಏತನ್ಮಧ್ಯೆ, ತ್ರಿಪುರಾ, ಸಿಕ್ಕಿಂ ಮತ್ತು ಇಂಫಾಲ್‌ನಲ್ಲಿ ಕಡಿಮೆ ಸಂಖ್ಯೆಯ ವಿವಾಹಗಳಾಗಿವೆ. ಲಕ್ನೋ, ಜೈಪುರ್ ಮತ್ತು ಗುರ್ಗಾಂವ್ ವಿವಾಹಗಳ ವಿಷಯದಲ್ಲಿ ಎರಡನೇ ಟೈರ್‌ನ ಅಗ್ರ ಮೂರು ನಗರಗಳಾಗಿವೆ.

ದೇಶದಲ್ಲಿ ಕೋವಿಡ್ ನಿರ್ಬಂಧಗಳಿಂದಾಗಿ 2020 ಮತ್ತು 2021 ರಲ್ಲಿ ಮದುವೆ ಮಾರುಕಟ್ಟೆಯು ಕಳೆಗುಂದಿತು. 2022 ರಲ್ಲಿ ನಿರ್ಬಂಧಗಳನ್ನು ತೆಗೆದುಹಾಕಲಾಯಿತು, ಮದುವೆ ಉದ್ಯಮವು ಮತ್ತೆ ಚೇತರಿಸಿಕೊಂಡಿದೆ.

ಬೆಂಗಳೂರಿನಲ್ಲಿರುವ ಅತ್ಯುತ್ತಮ ವಿವಾಹ ಸ್ಥಳಗಳು ಮತ್ತು ರೆಸಾರ್ಟ್‌ಗಳು:

1. THE TAMARIND TREE
2- TAJ WEST END
3- THE LEELA PALACE BENGALURU
4- GANJAM MANTAPA
5- PANCHAVATI THE PAVILION
6. ITC GARDENIA
7- JW MARRIOTT HOTEL
8. BANGALORE PALACE
9. AADYA FARMS & LEISURE
10. JAYAMAHAL PALACE HOTEL
11. BUNGALOW 7
12. EBISU CONVENTION CENTER
13. SHIBRAVYI COURTYARD
14. MLR CONVENTION CENTRE
15- HOTEL ROYAL ORCHID BANGALORE
16. SIGNATURE CLUB RESORT
17. BALAN FARM CONVENTION CENTER
18. GAYATRI VIHAR - PALACE GROUNDS BANGALORE
19. WHITE PETALS, PALACE GROUNDS
20. TAMARA WEDDINGS AND EVENTS VENUE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+