Trains: ಕರ್ನಾಟಕದ ಈ ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಣೆ: ಬೆಂಗಳೂರಿನಿಂದ ವಿಶೇಷ ರೈಲು ಸೇವೆ, ವೇಳಾಪಟ್ಟಿ
ಬೆಂಗಳೂರು: ದಸರಾ, ದೀಪಾವಳಿ, ಛತ್ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆಯು ಬೆಂಗಳೂರು- ರಂಗಪಾರಾ ನಾರ್ತ್ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಇದರೊಂದಿಗೆ ಕರ್ನಾಟಕದ ವಿವಿಧ ಎಕ್ಸ್‌ಪ್ರೆಸ್ ರೈಲುಗಳು (06559/06560) ತಾತ್ಕಾಲಿಕ ನಿಲುಗಡೆಯನ್ನು ಹಬ್ಬದ ದಟ್ಟಣೆ ಕಾರಣಕ್ಕಾಗಿ, ಪ್ರಯಾಣಿಕರ ಹಿತದೃಷ್ಟಿಯಿಂದ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಿಂದ ವಿಶೇಷ ರೈಲು ಸೇವೆ
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ರಂಗಪಾರಾ ನಾರ್ತ್ (ಅಸ್ಸಾಂ) ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (06559) ಸಂಚಾರ ಸೇವೆಯು ಇದೇ ಅಕ್ಟೋಬರ್ 20 ರಿಂದ 24 ರವರೆಗೆ ಲಭ್ಯವಿರಲಿದೆ.

* ಬೆಂಗಳೂರು SMVT-ರಂಗಪಾರಾ ನಾರ್ತ್ ರೈಲು (06559) ಪ್ರತಿ ಮಂಗಳವಾರ ರಾತ್ರಿ 23:40 ಗಂಟೆಗೆ SMVT ಬೆಂಗಳೂರಿನಿಂದ ಹೊರಟು ಮಾರನೇ ದಿನ ಶುಕ್ರವಾರ ಬೆಳಗ್ಗೆ 06:30 ಗಂಟೆಗೆ ರಂಗಪಾರಾ ನಾರ್ತ್ ನಿಲ್ದಾಣಕ್ಕೆ ತಲುಪಲಿದೆ.
* ಮರಳಿ ಅದೇ ದಿಕ್ಕಿನಲ್ಲಿ ರಂಗಪಾರಾ ನಾರ್ತ್-ಬೆಂಗಳೂರು SMVT ರೈಲು (06560) ರಂಗಪಾರಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಅಕ್ಟೋಬರ್ 24 ರಿಂದ 28ರವರೆಗೆ ಸಂಚರಿಸಲಿದೆ. ರೈಲು ಪ್ರತಿ ಶನಿವಾರ ಬೆಳಗ್ಗೆ 04:30 ಗಂಟೆಗೆ ರಂಗಪಾರಾ ನಾರ್ತ್‌ನಿಂದ ಹೊರಟು, ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿಗೆ ಬರಲಿದೆ.
ರೈಲಿನ ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣಗಳು
ಎರಡು ದಿಕ್ಕಿನಲ್ಲಿ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಟಪಾಡಿ, ರೇಣಿಗುಂಟಾ, ಗುಡೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಖುರ್ದಾ, ಕಟಕ್, ಭುವನೇಶ್ವರ, ಖುರಕಪುರ, ಬಕಲ್, ಕಟಕ್ ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹ್ಯಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರ್ಸೋಯ್ ಜಂ., ಕಿಶನ್‌ಗಂಜ್, ಅಲುಬಾರಿ ರಸ್ತೆ, ನ್ಯೂ ಜಲ್ಪೈಗುರಿ ಜೂ., ಜಲ್ಪೈಗುರಿ ರಸ್ತೆ, ನ್ಯೂ ಕೂಚ್ ಬೆಹಾರ್, ನ್ಯೂ ಅಲಿಪುರ್ದುವಾರ್, ಹೊಸ ಬೊಂಗೈಗಾಂವ್ ಜಂ, ಬಾರ್ಪೇಟಾ ರಸ್ತೆ ಮತ್ತು ರಂಗಿಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.
23 ಬೋಗಿಗಳ ರೈಲು
ಈ ರೈಲುಗಳು 1 ಎಸಿ 2-ಟೈರ್ ಕೋಚ್, 6 ಎಸಿ 3-ಟೈರ್ ಕೋಚ್‌ಗಳು, 10 ಸ್ಲೀಪರ್ ಕ್ಲಾಸ್ ಕೋಚ್‌ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ದಿವ್ಯಾಂಗಜನ ಸ್ನೇಹಿ ಕಂಪಾರ್ಟ್‌ಮೆಂಟ್ ಸೇರಿ ಒಟ್ಟು 23 ಕೋಚ್‌ಗಳನ್ನು ಒಳಗೊಂಡಿರುತ್ತವೆ.
ವಿವಿಧ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಣೆ
ರೈಲ್ವೆ ಅಧಿಕಾರಿಗಳು ವಿವಿಧ ನಿಲ್ದಾಣಗಳಲ್ಲಿ ಕೆಲವು ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಿಸಿದ್ದಾರೆ. ಈ ಹಿಂದೆ ಅಕ್ಟೋಬರ್ 15 ಸೂಚಿಸಲಾಗಿದ್ದ ಈ ತಾತ್ಕಾಲಿಕ ನಿಲುಗಡೆಗಳನ್ನು 2027ರ ಏಪ್ರಿಲ್ 15ರವರೆಗೆ ವಿಸ್ತರಣೆ ಆಗಿದೆ. ಯಾವೆಲ್ಲ ರೈಲುಗಳು ಎಲ್ಲೆಲ್ಲಿ ನಿಲುಗಡೆ ನೀಡಲಿವೆ ಎಂಬ ಮಾಹಿತಿ ಇಲ್ಲಿದೆ.
ರೈಲುಗಳ ಪಟ್ಟಿ
* ಕೆಎಸ್ಆರ್ ಬೆಂಗಳೂರು-ಸಿಂಧನೂರು-ಕೆಎಸ್ಆರ್ ಬೆಂಗಳೂರು ಎಕ್ಸ್'ಪ್ರೆಸ್ ರೈಲು (17391/17392) ರಾಮಗಿರಿ ಮತ್ತು ಚಳಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಸಲಿದೆ.
* ಯಶವಂತಪುರ-ಬಿಕಾನೇರ್-ಯಶವಂತಪುರ ಎಕ್ಸ್'ಪ್ರೆಸ್ ರೈಲುಗಳು (16587/16588) ಬೀರೂರು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
* ಕೆಎಸ್ಆರ್ ಬೆಂಗಳೂರು-ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಎಕ್ಸ್'ಪ್ರೆಸ್ ರೈಲು (20651/20652) ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ನಿಲ್ಲುವುದನ್ನು ಮುಂದುವರಿಯಲಿದೆ.
* ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್'ಪ್ರೆಸ್ ರೈಲು (20689/20690) ಚಿಕ್ಕಬಾಣಾವರ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
* ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್'ಪ್ರೆಸ್ ರೈಲು (16595/16596) ಕುಣಿಗಲ್ ನಿಲ್ದಾಣದಲ್ಲಿ ನಿಲ್ಲುವುದನ್ನು ಮುಂದುವರಿಸಲಿದೆ.
* ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್'ಪ್ರೆಸ್ ರೈಲು (16239/16240) ಸಂಪಿಗೆ ರೋಡ್ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
* ತಾಳಗುಪ್ಪ-ಮೈಸೂರು ಎಕ್ಸ್'ಪ್ರೆಸ್ ರೈಲು (16228) ಮಲ್ಲೇಶ್ವರಂ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
* ಮೈಸೂರು-ತಿರುವನಂತಪುರಂ ಉತ್ತರ-ಮೈಸೂರು ಎಕ್ಸ್'ಪ್ರೆಸ್ ರೈಲು (16315/16316) ಮದ್ದೂರು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
* ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು (66553) ಕೃಷ್ಣದೇವರಾಯ ಹಾಲ್ಟ್ ನಿಲ್ದಾಣದಲ್ಲಿ ನಿಲ್ಲುವುದನ್ನು ಮುಂದುವರಿಸಲಿದೆ.
* ಮರಿಕುಪ್ಪಂ-ಕೆಎಸ್ಆರ್ ಬೆಂಗಳೂರು-ಮರಿಕುಪ್ಪಂ ಮೆಮು ರೈಲು (66519/66520) ದೇವನಗೊಂದಿ ನಿಲ್ದಾಣದಲ್ಲಿ ನಿಲ್ಲುವುದನ್ನು ಮುಂದುವರಿಸಲಿದೆ.
* ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ರೈಲು (16521) ದೇವನಗೊಂದಿ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.22


Click it and Unblock the Notifications
