ರಂಗಶಂಕರದಲ್ಲಿ ಭಾನುವಾರ ಎರಡು ನಾಟಕಗಳ ರಂಗು
ಬೆಂಗಳೂರು, ಮೇ 23: ರಂಗಶಂಕರದಲ್ಲಿ ನಾಟಕಗಳ ರಂಗಿಗೆ ಕೊನೆಯಿಲ್ಲ. ಭಾನುವಾರ ಮೇ 24 ರಂದು ಶ್ರದ್ಧ ಮತ್ತು 'ಸ್ಟೇನ್ ಲೆಸ್ ಸ್ಟೀಲ್' ಪಾತ್ರೆಗಳು ಎಂಬ ನಾಟಕಗಳ ಪ್ರದರ್ಶನ ನಡೆಯಲಿವೆ.
ಶ್ರೀನಿವಾಸ ವೈದ್ಯ ಮತ್ತು ವಸುಧೇಂದ್ರ ಅವರ ಕತೆ ಆಧಾರಿತ ನಾಟಕ ಪ್ರದರ್ಶನ ಮಧ್ಯಾಹ್ನ 3.30 ಮತ್ತು ಸಂಜೆ 7.30ರವರೆಗೆ ನಡೆಯಲಿದೆ. ಗಣೇಶ್ ಶಣೈ, ಪ್ರಾಚೀ ದೇಶಪಾಂಡೆ, ಕೀರ್ತಿಭಾನು, ಹರೀಶ್ ಸೋಮಯಾಜಿ, ಕಿರಣ್ ವಟಿ ಮುಂತಾದವರ ಅಭಿನಯವನ್ನು ಕಣ್ಣು ತುಂಬಿಕೊಳ್ಳಬಹುದು.

3.30ಕ್ಕೆ ಶ್ರದ್ಧ ನಾಟಕ ಆರಂಭವಾಗಲಿದೆ. ಶ್ರೀನಿವಾಸ್ ವೈದ್ಯ ಅವರ ಕತೆ ಆಧಾರಿತ ನಾಟಕದಲ್ಲಿ ಮಕ್ಕಳು ಮತ್ತು ತಂದೆತಾಯಿಯೊಂದಿಗಿನ ಭಾವನಾತ್ಮಕ ಸಂಬಂಧಗಳ ಮೌಲ್ಯಮಾಪನ ಮಾಡಲಾಗಿದೆ. ಸ್ಟೇನ್ ಲೆಸ್ ಸ್ಟೀಲ್' ಪಾತ್ರೆಗಳು ನಾಟಕ ಕೂಡಾ ಇದೇ ಬಗೆಯ ಕತೆ ಆಧಾರಿತವಾಗಿದ್ದು ವ್ಯಕ್ತಿಯೊಬ್ಬನ ಪ್ರವಾಸ ಕಥನವನ್ನು ಸಾರುತ್ತದೆ.
ಬುಕ್ ಮೈ ಶೋ ದ ಮೂಲಕವೂ ಟಿಕೆಟ್ ಬುಕ್ ಮಾಡಬಹುದಾಗಿದ್ದು ವಾರಾಂತ್ಯದಲ್ಲಿ ಎರಡು ಸಾಮಾಜಿಕ ನಾಟಕಗಳನ್ನು ಸವಿಯಲು ಅಡ್ಡಿ ಇಲ್ಲ.













Click it and Unblock the Notifications