ರಾಜಗೋಪಾಲ ನಗರ, ಹೆಗ್ಗನಹಳ್ಳಿ ಇನ್ನೂ ಉದ್ವಿಗ್ನ

ಬೆಂಗಳೂರು, ಸೆ. 13: ಕಾವೇರಿ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ, ಹೆಗ್ಗನಹಳ್ಳಿ ಸೇರಿದಂತೆ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಗ್ಯಾಲರಿ: ಸುಟ್ಟು ಭಸ್ಮವಾದ ಬಸ್ಸು ಲಾರಿಗಳು

ಆದರೆ, ರಾಜಗೋಪಾಲನಗರದಲ್ಲಿ ಕರ್ಫ್ಯೂ ಆದೇಶ ಉಲ್ಲಂಘಿಸಿ ಲಾರಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.[ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]

Bengaluru : Rajagoplanagar Hegganahalli remains tense

ಇನ್ನೊಂದೆಡೆ ಹೆಗ್ಗನಹಳ್ಳಿಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿಮತ್ತೆ ಪ್ರತಿಭಟನೆ ಶುರುವಾಗಿದೆ. ಸಮೀಪದ ಪೀಣ್ಯದಲ್ಲಿ ಟೈರ್ ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಗುವಿನ ವಾತಾವರಣ ಉಂಟಾಗಿದೆ.[ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ]

ನಗರದಲ್ಲಿ ಕೆಲವೆಡೆ ಬಿಎಂಟಿಸಿ ಬಸ್ ಗಳ ಓಡಾಟ ಆರಂಭಗೊಂಡಿದೆ. ಮೆಟ್ರೋ ರೈಲುಗಳ ಓಡಾಟ ಎರಡನೇ ದಿನವೂ ರದ್ದಾಗಿದೆ.

ಈ ನಡುವೆ ನಿನ್ನೆ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳಿದ್ದರೆ ನಮಗೆ ಕಳಿಸಿ @BlrCityPolice ಗೆ ಕಳಿಸಿ ಅಥವಾ ವಾಟ್ಸಪ್ ನಂಬರ್ 9480801000 , ಇಮೇಲ್ : [email protected] ಮಾಡಿ ಎಂದು ಬೆಂಗಳೂರು ನಗರ ಪೊಲೀಸರು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+