Bengaluru rains: ಅಂಡರ್‌ಪಾಸ್ ಜಲಾವೃತದಿಂದ ಟೆಕ್ಕಿ ಸಾವು ಘಟನೆ: ಬೊಮ್ಮಾಯಿ ಪ್ರತಿಕ್ರಿಯೆ ಏನು?
ಬೆಂಗಳೂರು ಮೇ 22: ಬಿಜೆಪಿ ಸರ್ಕಾರ ಇದ್ದಾಗಲೂ ಭಾರೀ ಮಳೆಗೆ ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
#WATCH | Heavy rains and underpass waterlogging happened earlier also but I don't remember any death happening before...this (death) could have been avoided and timely action by BBMP could have saved the life. There are some lapses, needs to look into it...": Former Karnataka CM… pic.twitter.com/5Ye4yMN6cQ
— ANI (@ANI) May 22, 2023
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರೀ ಮಳೆ ಮತ್ತು ಅಂಡರ್‌ಪಾಸ್ ಜಲಾವೃತ ಈ ಹಿಂದೆಯೂ ಸಂಭವಿಸಿದೆ. ಆದರೆ ಈ ಹಿಂದೆ ಯಾವುದೇ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ. ಇದನ್ನು (ಸಾವು) ತಪ್ಪಿಸಬಹುದಿತ್ತು ಮತ್ತು ಬಿಬಿಎಂಪಿಯ ಸಕಾಲಿಕ ಕ್ರಮವು ಜೀವವನ್ನು ಉಳಿಸಬಹುದಿತ್ತು. ಕೆಲವು ಲೋಪಗಳಿವೆ, ಅದನ್ನು ಪರಿಶೀಲಿಸಬೇಕಾಗಿದೆ' ಎಂದು ಅಂಡರ್‌ಪಾಸ್‌ನಲ್ಲಿ ಜಲಾವೃತದಿಂದ ಟೆಕ್ಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷವನ್ನು ಕುಟುಕಿದ್ದಾರೆ.

ಕಳೆದ ದಿನ ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು, ಮನೆಗಳಿಗೆ ಮಳೆ ನೀರು ನುಗ್ಗಿದೆ. ಕೆಆರ್ ವೃತ್ತದ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತಲೆ ಎತ್ತರಕ್ಕೆ ಶೇಖರಣೆಗೊಂಡು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ. ಈ ವೇಳೆ ನೀರೊಳಗೆ ಕಾರು ಸಿಲುಕಿ ಅದರೊಳಗಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಇದು ಕಾಂಗ್ರೆಸ್ ಮೇಲೆ ಬಿಜೆಪಿ ವಾಗ್ದಾಳಿ ಮಾಡಲು ಕಾರಣ ಸಿಕ್ಕಂತಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಅಂಡರಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ. ಇದರಿಂದ ಕೆಆರ್ ವೃತ್ತದ ಅಂಡರ್‌ಪಾಸ್‌ನಲ್ಲಿ ಮಳೆ ನೀರಿಗೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಇದರಿಂದ ಎಚ್ಚತ್ತುಕೊಂಡ ಸರ್ಕಾರ ಅಪಾಯ ತಂದೊಡ್ಡುವ ಅಂಡರ್‌ಪಾಸ್‌ಗಳ ಪಟ್ಟಿಯನ್ನು ಬಿಬಿಎಂಪಿಗೆ ಕೇಳಿದೆ. ಬೆಂಗಳೂರಿನಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುವ 20 ಅಂಡರ್‌ಪಾಸ್‌ಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ. ಕೆಆರ್ ವೃತ್ತದ ಅಂಡರ್‌ಪಾಸ್ ನಲ್ಲಿ ದುರಂತ ಸಾವು ಸಂಭವಿಸಿದ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೆಆರ್ ವೃತ್ತದ ಅಂಡರಪಾಸ್‌ಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ನಿನ್ನೆ ಮಧ್ಯಾಹ್ನ ಮೂರು ಗಂಟೆ ವೇಳೆ ಭರ್ಜರಿ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಕಪ್ಪು ಕಾರ್ಮೋಡಗಳು ಕವಿದು ಭರ್ಜರಿ ಮಳೆಯಾದ ಕಾರಣ ವಾಹನ ಸವಾರರು ದಾರಿ ಕಣದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಆಗಿತ್ತು.

ಬೆಂಗಳೂರು 33 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ನಂದಿನ ಲೇಔಟ್ 48 ಮಿಮೀ, ಪುಲಕೇಶಿ ನಗರ 44 ಮಿಮೀ, ರಾಜಾಜಿನಗರ 37 ಮಿಮೀ, ಕುಶಾಲ್ ನಗರ 35 ಮಿಮೀ, ವಿದ್ಯಾರಣ್ಯಪುರ 25, ಕೆ ಆರ್ ಪುರ 36, ಕೊಟ್ಟೆಗಾರಪಾಳ್ಯ 33, ಚಾಮರಾಜಪೇಟೆ 28, ಬಸವನಪುರ 25, ನಾಯಂಡಳ್ಳಿ 20, ವಿವಿ ಪುರ 20, ಆಜನೇಯಪುರ 19 ಮಿಮೀ, ಆರ್ ಆರ್ ನಗರ 18 ಮಿಮಿಮೀ, ಕಾಟನ್‌ಪೇಟೆ 33 ಮಿಮೀ, ಸಂಪಗಿನಗರದಲ್ಲಿ 31ಮಿಮೀ, ವಿಜಯನಗರ 17 ಮಿಮೀ ಮಳೆಯಾಗಿದೆ.
ನಗರದ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಟೆಕ್ಕಿ ಭಾನುರೇಖಾ ಸಾವನ್ನಪ್ಪಿದ ಬಳಿಕ ಇದೀಗ ದುರ್ಘಟನೆ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಭಾರೀ ಮಳೆಗೆ ಅಂಡರ್ ಪಾಸ್‌ನಲ್ಲಿ ಒಂದು ಸಾವಾದ ಬಳಿಕ ಬಿಬಿಎಂಪಿ ಇದೀಗ ನಗರದ ಅಂಡರ್ ಪಾಸ್‌ಗನ್ನು ಮುಚ್ಚಿಸುತ್ತಿದೆ. ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿಯ ಅಂಡರ್ ಪಾಸ್‌ನಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಲ್ಲಿ ಒಳ ಭಾಗದಲ್ಲಿ ಭಾರೀ ಮಳೆಯ ಹಿನ್ನೆಲೆ ನೀರು ನಿಂತಿದೆ. ಸದ್ಯ ನೀರು ಹೆಚ್ಚಿರುವ ಕಾರಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೋಮವಾರ ಅಂಡರ್ ಪಾಸ್‌ಗಳ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕಾವೇರಿ ಜಂಕ್ಷನ್ ಕ್ಲೋಸ್ ಮಾಡಿ ಬಿಬಿಎಂಪಿ ಸಿಬ್ಬಂದಿ ಕಸ ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛತಾಕಾರ್ಯ ನಡೆಸುತ್ತಿದ್ದಾರೆ.












Click it and Unblock the Notifications