Weather of Bengaluru: ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾದ ಭಾರಿ ಮಳೆ, 3 ದಿನ ಮಳೆ ಬಿಡಲ್ಲ
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ಟೊಬರ್ 31ರ ಗುರುವಾರದಿಂದ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಎಲ್ಲಡೆ ಹಬ್ಬದಾಚರಣೆ ನಡೆಯುತ್ತಿದ್ದು, ಆಗಾಗ ಮಳೆಯ ದರ್ಶನವು ಆಗಿದೆ. ಬೆಂಗಳೂರಿಲ್ಲಿ ಬೆಳಗ್ಗೆಯಿಂದಲೇ ಅಲ್ಲಲ್ಲಿ ಮಳೆ ಸುರಿಯುವ ಮೂಲಕ ಹಬ್ಬದ ಖುಷಿಗೆ ಅಡ್ಡಿಯಾಯಿತು. ಪ್ರಮುಖ ರಸ್ತೆಗಳು ಜಲಾವೃತವಾಯಿತು. ಸಂಜೆ ಕಾಡುಗೋಡಿಯಲ್ಲಿ ಬರೋಬ್ಬರಿ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕೆಲವು ಬಡಾವಣೆಗಳಲ್ಲಿ ತಡರಾತ್ರಿವರೆಗೂ ಮಳೆ ಮುಂದುವರಿಯಲಿದೆ.
ನಗರದಲ್ಲಿ ಹಿಂಗಾರು ಮಳೆ ಮತ್ತೆ ಸಕ್ರಿಯವಾಗಿದೆ. ನಗರದ ಉತ್ತರ, ದಕ್ಷಿಣ ಹಾಗೂ ವಾಯುವ್ಯ ಭಾಗದ ಬಡಾವಣೆಗಳಲ್ಲಿ ಗುರುವಾರ ಸಂಜೆಯ ಜೋರು ಗಾಳಿ ಗುಡುಗು ಸಮೇತ ಮಳೆ ಆರ್ಭಟಿಸಿತು. ದೀಪಾವಳಿ ಸಡಗರದಲ್ಲಿರುವ ಜನರಿಗೆ ಸಂಜೆ ಪಟಾಕಿ ಹೊಡೆಯಲು, ಹಬ್ಬದ ಸಂಭ್ರಮಕ್ಕೆ ಮಳೆ ಕಿರಿ ಕಿರಿ ಉಂಟು ಮಾಡಿತು.

ಸಹಕಾರನಗರ, ಕೋರಮಂಗಳ, ಕೆ.ಆರ್. ಮಾರುಕಟ್ಟೆ, ಎಚ್‌ಎಸ್ ಆರ್ ಬಡಾವಣೆ, ಮಡಿವಾಳ, ಸರ್ಜಾಪುರ, ಮಾರತ್ತಹಳ್ಳಿ, ಬೆಳ್ಳಂದೂರು, ಹೀಗೆ ವಿವಿಧ ಬಡಾವಣೆಗಳಲ್ಲಿ ಆಗಾಗ ಉತ್ತಮ ಮಳೆ ಆಗಿದೆ. ಮಧ್ಯಾಹ್ ದಿಢೀರ್ ಬಂದ್ ಮಳೆಗೆ ಕೆ.ಆರ್. ಮಾರುಕಟ್ಟೆ, ಬಿಬಿಎಂಪಿ ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ನಿಂತದ್ದು ಕಂಡು ಬಂತು. ಹೊಸರೂ ರಸ್ತೆಯ ಒಂದೆರೆಡು ಕಡೆಗಳಲ್ಲಿ ವಾಟರ್ ಲಾಗಿಂಗ್ ಸಮಸ್ಯೆ ಕಂಡು ಬಂದಿದೆ.
ಸಂಜೆ ಕಾಡುಗೋಡಿಯಲ್ಲಿ 17 ಮಿ.ಮೀ, ಹೋಡಿ 15.5ಮಿ.ಮೀ, ದೊಡ್ಡಾನೆಕ್ಕುಂದಿ 13.5 ಮಿ.ಮೀ, ವಿದ್ಯಾರಣ್ಯಪುರ ಮತ್ತು ಎಚ್‌ಎಎಲ್ ಏರ್‌ಪೋರ್ಟ್ 13ಮಿ.ಮೀ, ಮಾರತ್ತಹಳ್ಳಿ 12.5ಮಿ.ಮೀ, ನಂದಿನಿ ಬಡಾವಣೆ 12, ಶೆಟ್ಟಿಹಳ್ಳಿ 11.5 ಮಿ.ಮೀ, ಗರುಡಾಚಾರಪಾಳ್ಯ 11ಮಿ.ಮೀ, ಮಳೆ ಆಗಿದೆ.
ಮಳೆಯಲ್ಲಿಯೇ ದೀಪಾವಳಿ ಸಂಭ್ರಮಕ್ಕೆ ಸಜ್ಜಾಗಿ
ಕಲವೇ ನಿಮಿಷಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇದೇ ರೀತಿ ಮಳೆ ಆಗಲಿದೆ. ದೀಪಾವಳಿ ಹಬ್ಬ ಪೂರ್ತಿ ಮಳೆಯಲ್ಲಿ ಮಾಡಬೇಕಾದ ಸ್ಥಿತಿ ಇದೆ. ಹೌದು, ನವೆಂಬರ್ 3ರವರೆಗೂ ಮಳೆ ಬಿಡುವ ಲಕ್ಷಣಗಳು ಇಲ್ಲ.
ಆಗಾಗ ಜೋರು ಗಾಳಿ ಮತ್ತು ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗುವ ಸಾಧ್ಯತೆಗಳು ಹೆಚ್ಚಿವೆ. ಬೆಳ್ಗೆಯಿಂದ ಮಬ್ಬು ವಾತಾವರಣ ಕಂಡು ಬಂದರೆ, ಸಂಜೆ ಜೋರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications