Bengaluru Rains: ನಗರದಲ್ಲಿಂದು ವ್ಯಾಪಕ ಮಳೆ, ತಂಪಾಯಿತು ವಾತಾವರಣ! 3 ದಿನದ ಹವಾಮಾನ ಮುನ್ಸೂಚನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಇತ್ತೀಚೆಗೆ ಉಂಟಾಗಿದ್ದ ಬಿಸಿಲಿನ ತಾಪ ಕಡಿಮೆ ಆಗಿದ್ದು, ವಾತಾವರಣ ತಂಪಾಗಿದೆ. ನಗರಾದ್ಯಂತ ವಿವಿಧ ಕಡೆಗಳಲ್ಲಿ ಹಗುರದಿಂದ ಜೋರು ಮಳೆ ಆಗಿದ್ದು, ವಾಹನ ಸಂಚಾರದ ಮೇಲೆ ಪರಿಣಾಮ ಬೀರಿತು. ಹೊರ ವರ್ತುಲ ರಸ್ತೆ (ORR), ಏರ್ ಪೋರ್ಟ್ ರಸ್ತೆ, ನಗರದ ಪಶ್ಚಿಮ ಭಾಗದ ಬಡಾವಣೆಗಳಲ್ಲಿ ಜಿಟಿ ಜಿಟಿ ಮಳೆ ದಾಖಲಾಗಿದೆ. ಯಲಹಂಕ ಭಾಗದಲ್ಲಿ ವ್ಯಾಪಕ ಮಳೆ ದಾಖಲಾಗಿದೆ.

ನಗರದಲ್ಲಿ ಕೆಲವು ದಿನಗಳಿಂದ ಮಳೆ ಇಲ್ಲದೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಇಂದು ಸೋಮವಾರ (ಸೆಪ್ಟೆಂಬರ್ 28) ಸಹ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿತ್ತು. ಆದರೆ ಸಂಜೆ ಹೊತ್ತಿಗೆ ಎಂದಿನಂತೆ ಹಲವು ಬಡಾವಣೆಗಳಲ್ಲಿ ಮಬ್ಬು ಕವಿದು ದಿಢೀರ್ ಮಳೆ ಸುರಿಯಿತು. ಇದರಿಂದಾಗಿ ಬಿಸಿಲಿಗೆ ಕಂಗೆಟ್ಟಿದ್ದ ಬೆಂಗಳೂರಿಗರು ತುಸು ಸಮಾಧಾನಗೊಂಡಿದ್ದಾರೆ ಎನ್ನಬಹುದು.

Bengaluru Rains

ಈ ಭಾಗಗಳಲ್ಲಿ ಸುರಿದ ಜೋರು ಮಳೆ

ಹೆಬ್ಬಾಳ, ಯಲಹಂಕ, ಏರ್ ಪೋರ್ಟ್ ರಸ್ತೆಯಲ್ಲಿ ಜೋರು ಮಳೆ ಆಗಿದೆ. ಇನ್ನೂ ಹೊರ ವರ್ತುಲ ರಸ್ತೆ, ದೇವೇಗೌಡ ಪೆಟ್ರೋಲ್ ಬಂಕ್, ಜೆಪಿ ನಗರ, ಸಿಲ್ಕ್‌ ಬೋರ್ಡ್, ಎಚ್‌ಆರ್ ಬಡಾವಣೆ ಸೇರಿದಂತೆ ಹೊರ ವರ್ತುಲ ರಸ್ತೆಯ ಕೆಲವೆಡೆ, ಕೋರಮಂಗಲ, ಮಡಿವಾಳ, ಈಜಿಪುರ ಸಿಗ್ನಲ್, ಇಂದಿರಾನಗರ, ಗೊಟ್ಟಿಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಇನ್ನೂ ಕೆಲವೆಡೆ ಸಾಮಾನ್ಯ ಎಂಬಂತೆ ಜಿಟಿ ಜಿಟಿ ಮಳೆ ಆಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ಮಾರೇನಹಳ್ಳಿಯಲ್ಲಿ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 57 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇನ್ನುಳಿದಂತೆ ಮಾರತ್ತಹಳ್ಳಿ, ವೈಟ್‌ಫಿಲ್ಡ್, ಕೆ.ಆರ್.ಪುರಂ, ಮಹದೇವಪುರ, ಜಕ್ಕೂರು, ಹೆಬ್ಬಾಳದಲ್ಲೂ ಅಧಿಕ ಮಳೆ ಆಗಿದೆ. ಈ ಭಾಗದ ಪ್ರಮುಖ ರಸ್ತೆಗಳು, ರಸ್ತೆ ಜಂಕ್ಷನ್‌ಗಳಲ್ಲಿ ಅಲ್ಲಲ್ಲಿ ನೀರು ನಿಂತದ್ದು ಕಂಡು ಬಂತು. ಇಲ್ಲಿ ಹಾಗೂ ಓ ಆರ್ ಆರ್ ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿತು.

ಇಂದಿನ ಗರಿಷ್ಠ ತಾಪಮಾನ: 3 ದಿನ ಮಳೆ ಎಚ್ಚರಿಕೆ

ಉದ್ಯಾನ ನಗರಿ ಬೆಂಗಳೂರು ಬೇಸಿಗೆಗೂ ಮುನ್ನ ಈ ವರ್ಷ ಮಳೆಗಾದಲ್ಲೇ ತೀವ್ರ ಬಿಸಿಲಿಗೆ ಸಾಕ್ಷಿಯಾಗಿದೆ. ಇಂದು ಬೆಂಗಳೂರು ಇಂಟರ್‍‌ನ್ಯಾಷನಲ್ ಏರ್ ಪೋರ್ಟ್‌ ಪ್ರದೇಶದಲ್ಲಿ 32 ಡಿಗ್ರಿ ಸೆಲ್ಸಿಯಸ್, ನಗರ ವ್ಯಾಪ್ತಿಯಲ್ಲಿ 31.7 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎ ಎಲ್ ಏರ್‍‌ ಪೋರ್ಟ್ ವ್ಯಾಪ್ತಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ ಮೂರು ದಿನ ನಗರದಲ್ಲಿ ಹಗಲು ಸ್ವಚ್ಛ ಆಕಾಶ ಇರಲಿದ್ದು, ತಾಪಮಾನ ಹೆಚ್ಚಿರಲಿದೆ. ಸಂಜೆ ಹೊತ್ತಿಗೆ ಜೋರು ಮಳೆಯ ನಿರೀಕ್ಷೆ ಇದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+