ಮಳೆ.. ಮಳೆ.. ಬೆಂಗಳೂರು ಮಳೆ ವಿಡಿಯೋ ಫುಲ್ ವೈರಲ್!
ಮಳೆ ಬಂದಿದೆ, ಮಂಜು ಕವಿದಿದೆ, ಬೇಸಿಗೆಯ ಬಿಸಿ ನಡುವೆ ಇದೀಗ ಬೆಂಗಳೂರು ಕೂಲ್.. ಕೂಲ್ ಆಗಿದೆ. ಹೀಗಿದ್ದಾಗಲೇ ಇಂಟರ್ನೆಟ್ ಪೂರ್ತಿ ಬೆಂಗಳೂರು ಮಳೆಯ ಬಗ್ಗೆಯೇ ಭಾರಿ ಸದ್ದು ಮೊಳಗಿದೆ. ಅದರಲ್ಲೂ ಬೆಂಗಳೂರಿನ ಬಹುತೇಕ ಕಡೆ ಇಂದು ಆಲಿಕಲ್ಲು ಮಳೆಯ ಆಗಮನ ಆಗಿದ್ದು, ಜನರು ತಮ್ಮ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಆಲಿಕಲ್ಲು ಮಳೆಯ ವಿಡಿಯೋ ರೆಕಾರ್ಡ್ ಮಾಡಿ, ಸೋಷಿಯಲ್ ಮೀಡಿಯಾಗಳಿಗೆ ಅಪ್‌ಲೋಡ್ ಮಾಡಿದ್ದಾರೆ. ಆ ವಿಡಿಯೋಗಳನ್ನು ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.
ಮಳೆ ಬೀಳುತ್ತಿಲ್ಲ ಅಂತಾ ಕನ್ನಡಿಗರು ಪರದಾಡುತ್ತಿರುವ ಸಮಯದಲ್ಲಿ ಭರ್ಜರಿ ಮಳೆ ಬರ್ತಿದೆ. 5 ತಿಂಗಳಿಂದಲೂ ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ ಮತ್ತು ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣಕ್ಕೆ ಜನರು ನಲುಗಿದ್ದಾರೆ. ಅದರಲ್ಲೂ, ನಮ್ಮ ಬೆಂಗಳೂರು ಮಳೆಯೇ ಇಲ್ಲದೆ ನಲುಗಿ ಹೋಗಿತ್ತು. ಹೀಗಿದ್ದಾಗಲೇ ಭರ್ಜರಿ ಮಳೆ ಆಗಮನ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಮಳೆಯ ಮ್ಯಾಟರ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಬೆಂಗಳೂರು ಆಲಿಕಲ್ಲು ಮಳೆ ವಿಡಿಯೋ!
ಬೆಂಗಳೂರಿನ ನಾಯಂಡ ಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು, ಈ ವಿಡಿಯೋನ ಪ್ರದೀಪ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 'ಆಲಿಕಲ್ಲು' ಮಳೆ ಭರ್ಜರಿಯಾಗಿ ಸುರಿದಿದ್ದು, ಆ ವಿಡಿಯೋ ನೋಡುವುದೇ ಒಂದು ಚಂದ ಅಂತಿದ್ದಾರೆ ನೆಟ್ಟಿಗರು.
ನಾಯಂಡಹಳ್ಳಿಯಲ್ಲಿ ಆಲಿಕಲ್ಲು ಮಳೆ#BengaluruRains pic.twitter.com/qSbUDpOjGQ
— Pradeep Krishnamurthy (@pradeep_c_k) May 6, 2024
ಮಲ್ಲೇಶ್ವರ ಮಳೆಗೆ ಜನರು ಖುಷ್!
ಹಾಗೇ ಬೆಂಗಳೂರಿನ ಮಲ್ಲೇಶ್ವರ ಏರಿಯಾ ಕೂಡ ಭರ್ಜರಿ ಮಳೆಗೆ ಖುಷಿಯಾಗಿದೆ. ಇಲ್ಲೂ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು, ರಸ್ತೆಗಳಲ್ಲಿ ಮಂಡಿ ಎತ್ತರಕ್ಕೆ ನೀರು ನಿಂತಿತ್ತು. ಅಲ್ಲದೆ ಮಳೆ ಬಿದ್ದ ಖುಷಿಗೆ ಜನ ಕುಣಿದಾಡಿದರು. ಸಂದೇಶ ಎಂಬ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.
ವರ್ಷ ದ ಅತಿ ದೊಡ್ಡ ಮಳೆ ಇವತ್ತು ಅನ್ಸುತ್ತೆ. ಮಲ್ಲೇಶ್ವರ 17th Cross 😬#BengaluruRains pic.twitter.com/Pvkm6wL0Dm
— ಸಂದೇಶ (@software_sisya) May 6, 2024
ಮಳೆ ಬಂತು ಮಳೆ.. ಮಳೆ ಬಂತು ಮಳೆ..
ಹಾಗೇ ಮತ್ತೊಂದು ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಬೆಂಗಳೂರಿನ ಏರಿಯಾ ಒಂದರಲ್ಲಿ ಮಳೆ ಧೋ.. ಅಂತಾ ಸುರಿದಿದೆ. ಗಿರೀಶ್ ಎಂಬುವವರು ತಮ್ಮ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಇದು ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಬೆಂಗಳೂರಿನಲ್ಲಿ ಇಷ್ಟು ಚಂದವಾಗಿ ಮಳೆ ಬಿದ್ದಿರುವುದನ್ನು ನೋಡಿ ಜನರು ಕೂಡ ಖುಷ್ ಆಗಿದ್ದಾರೆ.
ಮಳೆ ಬಂತು
— ಗಿರೀಶ್ (@apthamitra) May 6, 2024
ಮಳೆ
ಮಳೆ
ಮಳೆ#BengaluruRains pic.twitter.com/H0YKlxlIXW
ಮೇ ತಿಂಗಳ 15ನೇ ತಾರೀಖಿನ ತನಕ ಅಂದ್ರೆ ಈ ತಿಂಗಳಲ್ಲಿ ಮುಂದಿನ 2 ವಾರ ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಜಿಲ್ಲೆಗಳಿಗೆ ಗುಡುಗು ಸಹಿತ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು. ಇದರ ಜೊತೆಗೆ ಕೊಡಗು ಮತ್ತು ಮೈಸೂರು, ಚಾಮರಾಜನಗರ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಗುಡುಗು ಸಹಿತ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ.
ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...
ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.












Click it and Unblock the Notifications