Bengaluru Rain: ಬೆಂಗಳೂರು ಮಳೆ ಎಷ್ಟು ಚಂದ; ಮಳೆ ನೋಡಿ ಸಂಭ್ರಮಿಸಿದ ಜನ

ಯಪ್ಪಾ ಎಷ್ಟು ದಿನ ಆಗಿತ್ತಪ್ಪಾ ಇಂತ ಮಳೆ ನೋಡಿ!, ಸುಮಾರು ಐದು ತಿಂಗಳ ಸುದೀರ್ಘ ಕಾಯುವಿಕೆ ಬಳಿಕ ಮಳೆ ದರ್ಶನ ಮಾಡಿದ ಬೆಂಗಳೂರು ಜನರ ಪ್ರತಿಕ್ರಿಯೆ ಇದು. ಗುರುವಾರ ಸಂಜೆ ನಗರದ ಹಲವು ಕಡೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆ ಆರಂಭವಾಗಿದ್ದು, ಬೆಂಗಳೂರು ಜನರ ಖುಷಿಗೆ ಪಾರವೇ ಇಲ್ಲದಂತಾಗಿದೆ!.

1983ರ ಬಳಿಕ ಬೇಸಿಗೆಯಲ್ಲಿ ಶೂನ್ಯ ಮಳೆ ದಾಖಲಿಸಿದ್ದ ಬೆಂಗಳೂರು ಕೆಟ್ಟ ದಾಖಲೆ ಬರೆದಿತ್ತು. ಅದರಲ್ಲೂ ಹೆಚ್ಚುತ್ತಿರುವ ತಾಪಮಾನ, ಶಾಖದ ಅಲೆ ಬೆಂಗಳೂರು ಜನತೆಯ ನೆಮ್ಮದಿ ಕೆಡಿಸಿತ್ತು. ಸದಾ ಕೂಲ್ ಆಗಿರುತ್ತಿದ್ದ ಬೆಂಗಳೂರು, ಕಾದ ಕಾವಲಿಯಂತಾಗಿತ್ತು.

Bengaluru Rain Know How Social media Is reacting to Bengaluru rain on May 2nd

ಏಪ್ರಿಲ್‌ನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾದರೂ, ಬೆಂಗಳೂರಿನಲ್ಲಿ ಮಾತ್ರ ಒಂದು ದಿನ ಹಗುರ ಮಳೆಯಾಗಿತ್ತು.

ಅದು ಕೆಲವೇ ಪ್ರದೇಶಗಳಲ್ಲಿ ಮಾತ್ರ. ಮೇ 5 ರಿಂದ ನಗರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು, ಆದರೆ ಅಂದುಕೊಂಡಿದ್ದಕ್ಕಿಂತ ಮೊದಲೇ ಮಹಾನಗರಕ್ಕೆ ಮಳೆ ಎಂಟ್ರಿ ಕೊಟ್ಟಿದೆ.

ಮಳೆ ನೋಡಿದ ಜನ ಏನಂದ್ರು?

ನಗರದ ವೈಟ್‌ಫೀಲ್ಡ್, ಐಟಿಪಿಎಲ್, ಮಾರತ್ ಹಳ್ಳಿ, ಜೀವನ್ ಭೀಮಾ ನಗರ, ಮಾರತ್‌ ಹಳ್ಳಿ, ರಮೇಶ್ ನಗರ, ಬೆಳ್ಳಂದೂರು, ಗೊಟ್ಟಿಗೆರೆ, ಹೊರ ವರ್ತುಲ ರಸ್ತೆ, ಕೆಆರ್ ಪುರ, ಯಲಹಂಕ, ರಾಜಾಜಿನಗರ, ಹೆಬ್ಬಾಳ, ವಿದ್ಯಾರಣ್ಯಪುರ, ಆರ್ ಆರ್ ನಗರ, ಬನಶಂಕರಿ, ಕೆಂಗೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುತ್ತಿದೆ.

ಐದು ತಿಂಗಳ ಕಾಯುವಿಕೆ ಬಳಿಕ ಮಳೆ ನೋಡಿದ ಬೆಂಗಳೂರು ಜನರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಎಕ್ಸ್‌ನಲ್ಲಿ ಬೆಂಗಳೂರು ಮಳೆ (#bengalururains) ಟ್ರೆಂಡಿಂಗ್ ಆಗುತ್ತಿದೆ. ಸಾವಿರಾರು ಜನ ಮಳೆ ವಿಡಿಯೋ, ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಅಂತಹ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಇಲ್ಲಿವೆ. ನೀವು ಬೆಂಗಳೂರು ಮಳೆಯನ್ನು ಕಣ್ತುಂಬಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+