Bengaluru Rain: ಇಂದು ದಿಢೀರ್ ಭಾರೀ ಮಳೆ ಸುರಿಯುವ ಸಾಧ್ಯತೆ: ಮೇ 29ರವರೆಗೆ ಮುನ್ಸೂಚನೆ

ಬೆಂಗಳೂರು, ಮೇ 26: ಉದ್ಯಾನ ನಗರಿ ಬೆಂಗಳೂರಿನಲ್ಲಿ ಒಂದೆರಡು ದಿನಗಳಿಂದ ಮಳೆ ವಾತಾವರಣದಲ್ಲಿ ಇಳಿಕೆ ಆಗಿದೆ. ಆದರೆ ಮೊದಲಿನ ಅಬ್ಬರದ ಮಳೆ ಕೆಲವು ದಿನಗಳಲ್ಲಿ ಕಂಡು ಬರದಿದ್ದರೂ ಇಂದು ಭಾನುವಾರ ಸಂಜೆಗೆ ಗುಡುಗು ಸಹಿತ ಧಾರಾಕಾರವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಆಗುವ ಮುನ್ಸೂಚನೆ ಇದೆ. ಈ ಪೈಕಿ ಭಾನುವಾರ ಮಧ್ಯಾಹ್ನದ ನಂತರ ಇಲ್ಲವೇ ರಾತ್ರಿ ಜೋರು ಮಳೆ ಆರ್ಭಟ ಕಂಡು ಬರಲಿದೆ. ವಾತಾವರಣದಲ್ಲಿ ತೀವ್ರತರಹದ ಬದಲಾವಣೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

Bengaluru Rain Heavy Rain Will Expcted Today in City by Cyclone Remal Effect Forecast

ನಗರದ ಹಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆದರೆ, ಇನ್ನೂ ಕೆಲವೆಡೆ ವ್ಯಾಪಕವಾಗಿ ಮಳೆಯಾಗುವ ಸಂಭವವಿದೆ. ಮುಂದಿನ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಮೇ 29ರವರೆಗೂ ಹಗುರದಿಂದ ಸಾಧಾರಣವಾಗಿ ಸುರಿಯಲಿದೆ.

ನಗರದಲ್ಲಿ ಮೇ 30ರವರೆಗೆ ಮಳೆ ಸಾಧ್ಯತೆ

ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಆಗಾಗ ಬಿಸಿಲಿನ ದರ್ಶನವಾದರೂ ಸಹಿತ ಏಕಾಎಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ. ಮೇ 30ರವರೆಗೆ ಮಳೆ ಆಗಲಿದ್ದು, ನಂತರ ಬಿಸಲಿನ ವಾತಾವರಣ ಕಂಡು ಬರಲಿದೆ.

ಸದ್ಯ ಬೆಂಗಳೂರಿನಲ್ಲಿ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮುಂದಿನ ಮೂರು ದಿನ ಈ ತಾಪಮಾನದಲ್ಲಿ ವ್ಯತ್ಯಾಸ ಆಗಲಿದ್ದು, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಮುನ್ಸೂಚನಾ ವರದಿ ತಿಳಿಸಿದೆ.

Bengaluru Rain Heavy Rain Will Expcted Today in City by Cyclone Remal Effect Forecast

ವಾಯುಭಾರ ಕುಸಿತದ ಪ್ರಭಾವ: ದಿಢೀರ್ ಮಳೆ

ಮುಂಗಾರು ಆಗಮನ ಮುನ್ನವೇ ಪೂರ್ವ ಮುಂಗಾರು ಮಳೆ ಆರ್ಭಟಿಸುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿ ರಾಜ್ಯಗಳಿಗೆ ಮಳೆ ಆಗುತ್ತದೆ. ಇದರ ಪ್ರಭಾವದಿಂದ ತಂಪು ಗಾಳಿ ಬೀಸುವಿಕೆ ಅನುಭವ ಆಗುತ್ತಿದೆ. ಇದರ ಕಾರಣದಿಂದ ಆಗಾಗ ದಿಢೀರ್ ಮಳೆ ಆಗುತ್ತಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಬೆಂಗಳೂರು ಮತ್ತು ಬಂಗಾಳಕೊಲ್ಲಿ ಕರಾವಳಿ ಭಾಗದ ರಾಜ್ಯಗಳು ಮಾತ್ರವಲ್ಲದೇ, ಇತರ ರಾಜ್ಯಗಳು, ಕರ್ನಾಟಕದ ಉತ್ತರ ಒಳನಾಡಿನಲ್ಲೂ ತಂಪು ವಾತಾವರಣ, ಈಗಲೇ, ಆಗಲೋ ಮಳೆ ಆಗಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ದಿನ ಬಿಟ್ಟು ದಿನ ಕೆಲವು ಕಡೆಗಳಲ್ಲು ಹಗುರದಿಂದ ಸಾಧಾರಣ ಮಳೆ ಆಗುತ್ತಿದೆ.

ಮುಂದಿನ ಕೆಲವು ದಿನಗಳ ಕಾಳ ಈ ಮಳೆಯ ವಾತಾವರಣ ಹೀಗೆ ಮುಂದುವರಿಯಲಿದೆ. ಹಿಂಗಾರು ಮಳೆ ಅಂತ್ಯವಾಗುತ್ತಿದ್ದಂತೆ ಮತ್ತು ಮುಂಗಾರು ಮಳೆ ಜೋರಾಗಿ ಸುರಿಯವ ಸಾಧ್ಯತೆಗಳು ದಟ್ಟವಾಗಿ. ಜೂನ್ ಒಂದರಿಂದ ಮುಂಗಾರು ಭಾರತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+