Get Updates
Get notified of breaking news, exclusive insights, and must-see stories!

Bengaluru Rain: ಮೊದಲ ಮಳೆಗೆ ನಗರದಲ್ಲಿ ಹಲವು ಅವಾಂತರ; ಬಿಬಿಎಂಪಿ ವಿರುದ್ಧ ಆಕ್ರೋಶ

ಆರು ತಿಂಗಳ ಸುದೀರ್ಘ ಕಾಯುವಿಕೆ ನಂತರ ಅಂತೂ ಇಂತು ಬೆಂಗಳೂರಿನಲ್ಲಿ ಉತ್ತಮವಾಗಿ ಮಳೆಯಾಗಿದೆ. ತೀರಾ ಹೆಚ್ಚು ಮಳೆಯಾಗದಿದ್ದರೂ, ವಾತಾವರಣ ತಂಪಾಗುವಂತೆ ಮಳೆಯಾಗಿದ್ದು, ಜನರಲ್ಲಿ ನೆಮ್ಮದಿ ತರಿಸಿದೆ.

ಆದರೆ ಆರು ತಿಂಗಳು ಮಳೆ ಬಿಡುವು ಕೊಟ್ಟಿದ್ದರೂ ಬಿಬಿಎಂಪಿ ಮಾತ್ರ ನಗರದಲ್ಲಿ ಮಳೆಯಾದರೆ ಆಗುವ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ಸಾಧಾರಣ ಮಳೆಗೆ ನಗರದ ಹಲವು ಕಡೆ ರಸ್ತೆಗಳು ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

Bengaluru Rain Heavy Rain Causes Traffic Jams and Flooded Roads in Bengaluru Public Outrage Against BBMP

ಹಲವು ಕಡೆಗಳಲ್ಲಿ ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇಷ್ಟು ಸಮಯ ಸಿಕ್ಕರೂ ಸಮಸ್ಯೆ ಸರಿಪಡಿಸಲು ಮುಂದಾಗದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಬೆಂಗಳೂರು ವೆದರ್ ಮ್ಯಾನ್ ಎನ್ನುವ ಬಳಕೆದಾರರು ನೀರು ತುಂಬಿಕೊಂಡಿರುವ ಚಿತ್ರವನ್ನು ಹಂಚಿಕೊಂಡು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾವು ಅನುಭವಿಸುತ್ತೇವೆ ನೀವು ಮಲಗಿ

ಪ್ರೀತಿಯ ಬಿಬಿಎಂಪಿ, ಬೆಂಗಳೂರಿನಲ್ಲಿ ಮಳೆ ಇಲ್ಲದೆ ನೀವು 6 ತಿಂಗಳು ಕಳೆದಿದ್ದೀರಿ ಆದರೆ ನೀವು ಎಂದಿನಂತೆ ಕೆಲಸ ಮಾಡುವ ಬದಲು ಮಲಗಿ ಕಾಲ ಕಳೆದಿದ್ದಾರೆ. ಚರಂಡಿಗಳನ್ನು ತೆರವುಗೊಳಿಸಲಿಲ್ಲ, ರಸ್ತೆಗಳನ್ನು ದುರಸ್ತಿ ಮಾಡಲಿಲ್ಲ, ಇದರಿಂದಾಗಿ ಸಾಮಾನ್ಯ ಮಳೆಗೂ ಟ್ರಾಫಿಕ್ ಜಾಮ್ ಮತ್ತು ರಸ್ತೆಗಳು ಜಲಾವೃತಗೊಂಡಿವೆ, ನಾವು ಪ್ರಯಾಣಿಸಲು ನರಕವನ್ನು ಅನುಭವಿಸುತ್ತಿದ್ದೇವೆ, ಇದು ಮಳೆಯ ಸಮಯದಲ್ಲಿ ಸುಂದರವಾದ ಅನುಭವವಾಗಬೇಕಿತ್ತು. ನಿಮಗೆ ಧನ್ಯವಾದಗಳು, ನಾವು ನಾಗರಿಕರು ತೊಂದರೆ ಅನುಭವಿಸುವಾಗ ನಿದ್ದೆ ಮಾಡಿ ಎಂದು ಹೇಳಿದ್ದಾರೆ.

ಮಳೆಯಿಂದ ಎಲ್ಲೆಲ್ಲಿ ಸಮಸ್ಯೆ?

ಕೆ ಆರ್ ಪುರ ತೂಗು ಸೇತುವೆ ಡಿವೈಡರ್ ಮೇಲೆ ಇಟ್ಟಿರುವ ಕುಂಡಗಳು ಮಳೆಯಿಂದಾಗಿ ಒಡೆದು ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಟ್ರಾಫಿಕ್ ಪೊಲೀಸರು ತಕ್ಷಣ ಮಣ್ಣಿನ ಕುಂಡಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹೊರ ವರ್ತೂಲ ರಸ್ತೆಯ ಹೊರಮಾವು ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡು ಸಮಸ್ಯೆ ಉಂಟಾಗಿತ್ತು. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಅಭಿಲಾಷ್ ಮಳೆ ನೀರು ಚರಂಡಿಗೆ ಹೋಗುವಂತೆ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಮಮೂರ್ತಿ ನಗರ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಚರಂಡಿಯಲ್ಲಿ ಮಣ್ಣು ಹಾಗೂ ಕಸ ತುಂಬಿರುವುದರಿಂದ ಅನೇಕ ಕಡೆಗಳಲ್ಲಿ ಚರಂಡಿಗೆ ನೀರು ಹೋಗದೆ, ರಸ್ತೆಯಲ್ಲಿ ನೀರು ನಿಂತ ಕಾರಣ ಹೊರಮಾವು ಕಡೆಯಿಂದ ರಾಮಮೂರ್ತಿನಗರ ಕಡೆಗೆ ವಾಹನಗಳ ಸಂಚಾರ ನಿಧಾನವಾಗಿತ್ತು.

ಬಿನ್ನಿಮಿಲ್ ಜಂಕ್ಷನ್ ಬಳಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+