ಬೆಂಗಳೂರು ಮಳೆ ಅವಾಂತರ: ಬಿಬಿಎಂಪಿ ಸಂಪರ್ಕಿಸುವವರ ಗಮನಕ್ಕೆ
ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ ಮಳೆ ಚುರುಕು ಪಡೆದಿದೆ. ಈಗಾಗಲೇ ಸುಮಾರು ಸೋಮವಾರ ಹಾಗೂ ಬುಧವಾರ ಸುರಿದ ಮಳೆಗೆ ಸುಮಾರು 150 ಮರಗಳ ಧರೆಗೆ ಉರುಳಿವೆ. ಅಲ್ಲಲ್ಲಿ ಟ್ರಾಫಿಕ್, ಇನ್ನಿತರ ಸಮಸ್ಯೆ ಉಂಟಾಗಿದೆ. ಜನರಿಗೆ ತ್ವರಿತವಾಗಿ ಸ್ಪಂದಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಕಂಟ್ರೋಲ್ ರೂಂ' ಸ್ಥಾಪಿಸಿದೆ.
ಬೆಂಗಳೂರಿನಲ್ಲಿ ಈ ವಾರದ ತಂಪು ವಾತಾವರಣ ನಿರ್ಮಾಣವಾಗಿದೆ. ಕಾರಣ ದಿಢೀರ್ ಬರುತ್ತಿರುವ ಮಳೆ. ಆದರೆ ಈ ಮಳೆಯಿಂದ ಹಲವೆಡೆ ಅದ್ವಾನಗಳು ನಡೆದಿವೆ. ಇಂತಹ ಸಮಯದಲ್ಲಿ ತ್ವರಿತವಾಗಿ ಸ್ಪಂದಿಸಲು, ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ ತನ್ನ ಎಲ್ಲ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ, ದೂರವಾಣಿ/ಸಹಾಯವಾಣಿ ಸಂಖ್ಯೆ ಪ್ರಕ್ರಿಸಿದೆ. ನಿವಾಸಿಗಳು ಈ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ದೂರು ನೀಡಬಹುದು.

24/7 ಕಾರ್ಯ ನಿರ್ವಹಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಿಪತ್ತು ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೊನ್ನೆಯಷ್ಟೇ ನಗರದಲ್ಲಿ ಮಳೆಗಾಲ ಪೂರ್ವ ಸಿದ್ಧತೆ ನಡೆಸಿರುವ ಮುಖ್ಯ ಆಯುಕ್ತರು ಅಗತ್ಯ ಸೂಚನೆ ನೀಡಿದ್ದರು. ಇದೀಗ 24/7 ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಿದೆ.
ಬಿಬಿಎಂಪಿ ಉಚಿತ ಸಹಾಯವಾಣಿ ಸಂಖ್ಯೆ 1533 ಜೊತೆಗೆ ಮಹಾನಗರದಲ್ಲಿನ ವಿವಿಧ 08 ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ನಿರ್ಮಿಸಿದ್ದು, ಸಿಬ್ಬಂದಿ ನಿಯೋಜಿಸಿದೆ. ಇವರು ಮಳೆಗಾಲದ ಸಮಯದಲ್ಲಿ ದಿನಪೂರ್ತಿ ಜನರ ನೆರವಿಗೆ ಧಾವಿಸಲಿದ್ದಾರೆ ಎಂದು ಬಿಬಿಂಪಿ ಬುಧವಾರ ತಿಳಿಸಿದೆ. ಹಾಗಾದರೆ ವಲಯವಾರು ಕಂಟ್ರೋಲ್ ರೂಂ ದೂರವಾಣಿ, ಮೊಬೈಲ್ ಸಂಖ್ಯೆ ಇಲ್ಲಿ ತಿಳಿಯಿರಿ.
08 ವಲಯಗಳ ಕಂಟ್ರೋಲ್ ರೂಂ ಸಂಖ್ಯೆ
* ಪೂರ್ವ ವಲಯ: 080-22975803, 9480685702
* ಮಹದೇವಪುರ ವಲಯ: 080-28512300, 9480685706
* ಬೊಮ್ಮನಹಳ್ಳಿ ವಲಯ: 080-25732447, 25735642, 9480685707
* ದಾಸರಹಳ್ಳಿ ವಲಯ : 080-28394909, 9480685709
* ರಾಜರಾಜೇಶ್ವರಿ ನಗರ ವಲಯ: 080-28601851, 9480685708
* ದಕ್ಷಿಣ ವಲಯ : 9480685704, 8026566362, 8022975703
* ಪಶ್ಚಿಮ ವಲಯ : 080-23463366, 23561692, 9480685703
* ಯಲಹಂಕ ವಲಯ: 080-23636671 22975936, 9480685705
ಈ ಮೇಲಿನ ಸಂಖ್ಯೆಗೆ ಬೆಂಗಳೂರು ಬಿಬಿಂಪಿ ವ್ಯಾಪ್ತಿಯ ನಿವಾಸಿಗಳು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಕೋರಿದೆ.












Click it and Unblock the Notifications