Get Updates
Get notified of breaking news, exclusive insights, and must-see stories!

Bengaluru Rain: ಬೆಂಗಳೂರಿನಲ್ಲಿ 33 ಮಿಮೀ ಮಳೆ- ಎಲ್ಲೆಲ್ಲಿ ಎಷ್ಟು ಮಳೆ?

ಬೆಂಗಳೂರು ಮೇ 22: ರಾಜ್ಯದಲ್ಲಿ ಕಳೆದ ದಿನ ಸುರಿದ ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗುಡುಗು, ಬಿರುಗಾಳಿ ಸಮೇತ ಸುರಿದ ಆನೆಕಲ್ ಮಳೆಗೆ ರಸ್ತೆಗಳು, ಮನೆಗಳು ಜಲಾವೃತವಾಗಿವೆ. ಕೆಲವಡೆ ಮನೆಗೋಡೆ, ಮರಗಳು, ವಿದ್ಯುತ್ ಕಂಬಗಳು ಕುಸಿದಿವೆ. ಇನ್ನೂ ಹಲವೆಡೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡು ಅವಾಂತರ ಸೃಷ್ಟಿಯಾಗಿದೆ.

ಬೆಂಗಳೂರು 33 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ನಂದಿನ ಲೇಔಟ್ 48 ಮಿಮೀ, ಪುಲಕೇಶಿ ನಗರ 44 ಮಿಮೀ, ರಾಜಾಜಿನಗರ 37 ಮಿಮೀ, ಕುಶಾಲ್ ನಗರ 35 ಮಿಮೀ, ವಿದ್ಯಾರಣ್ಯಪುರ 25, ಕೆ ಆರ್ ಪುರ 36, ಕೊಟ್ಟೆಗಾರಪಾಳ್ಯ 33, ಚಾಮರಾಜಪೇಟೆ 28, ಬಸವನಪುರ 25, ನಾಯಂಡಳ್ಳಿ 20, ವಿವಿ ಪುರ 20, ಆಜನೇಯಪುರ 19 ಮಿಮೀ, ಆರ್ ಆರ್ ನಗರ 18 ಮಿಮಿಮೀ, ಕಾಟನ್‌ಪೇಟೆ 33 ಮಿಮೀ, ಸಂಪಗಿನಗರದಲ್ಲಿ 31ಮಿಮೀ, ವಿಜಯನಗರ 17 ಮಿಮೀ ಮಳೆಯಾಗಿದೆ.

Bengaluru Rain: 33 mm rain in Bengaluru- how much rain everywhere?

ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ವೇಳೆ ಭರ್ಜರಿ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಕಪ್ಪು ಕಾರ್ಮೋಡಗಳು ಕವಿದು ಭರ್ಜರಿ ಮಳೆಯಾದ ಕಾರಣ ವಾಹನ ಸವಾರರು ದಾರಿ ಕಣದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಆಗಿತ್ತು.

ಇನ್ನೂ ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ 55 ಮರಗಳು ಧರಗೆ ಉರುಳಿವೆ. ಆರ್ ಪಿಸಿ ಲೇಔಟ್, ಮಲ್ಲೇಶ್ವರಂ, ಕುಮಾರಸ್ವಾಮಿ ಲೇಔಟ್, ಸಂಪಂಗಿ ನಗರ ಸೇರೆದಂತೆ ಹಲವೆಡೆ ಮರಗಳು ನೆಲಕ್ಕಚ್ಚಿವೆ. ಇನ್ನೂ ಮುಂದಿನ ನಾಲ್ಕು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲ್ಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು ಬಿಬಿಎಂಪಿ ರಕ್ಷಣ ಕಾರ್ಯಕ್ಕೆ ಮುಂದಾಗಿದೆ.

ಇನ್ನೂ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಭಾರೀ ಮಳೆಯಿಂದಾಗಿ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದೆ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ‌ಹಿನ್ನೆಲೆಯಲ್ಲಿ ರಾಜಧಾನಿ ಸೇರಿ ರಾಜ್ಯವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರಿನ ವಿಧಾನಸೌಧ, ಆನಂದ್ ರಾವ್​​, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್ , ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ಮಳೆಯಾಗಿದೆ.

Bengaluru Rain: 33 mm rain in Bengaluru- how much rain everywhere?

ಬೆಂಗಳೂರಿನಲ್ಲಿ ನಿನ್ನೆ ಅಂಡರಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ. ಇದರಿಂದ ಕೆಆರ್ ಪುರ ಅಂಡರ್‌ಪಾಸ್‌ನಲ್ಲಿ ಮಳೆ ನೀರಿಗೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಇದರಿಂದ ಎಚ್ಚತ್ತುಕೊಂಡ ಸರ್ಕಾರ ಅಪಾಯ ತಂದೊಡ್ಡುವ ಅಂಡರ್‌ಪಾಸ್‌ಗಳ ಪಟ್ಟಿಯನ್ನು ಬಿಬಿಎಂಪಿಗೆ ಕೇಳಿದೆ.

ಬೆಂಗಳೂರಿನಲ್ಲಿ ಮಳೆ ಬಂದರೆ ನೂರು ತುಂಬಿಕೊಳ್ಳುವ 20 ಅಂಡರ್‌ಪಾಸ್‌ಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ. ಕೆಆರ್ ಪುರ ಅಂಡರ್‌ಪಾಸ್‌ ನಲ್ಲಿ ದುರಂತ ಸಾವು ಸಂಭವಿಸಿದ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೆಆರ್ ಪುರಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಅವಾಂತರ ಸೃಷ್ಟಿ ಮಾಡಿದೆ. ಮೈಸೂರಿನಲ್ಲಿ ಹುಣಸೂರು ತಾಲೂಕಿನಲ್ಲಿ ರೈತನೊಬ್ಬ ಸಾವನ್ನಪ್ಪಿದ್ದಾನೆ. ಮನೆ ಗೋಡೆ ಕುಸಿದು, ಮೈಸೂರು ಎಲ್ಲೆಡೆ ಮರಗಳು ಧರೆಗುರುಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+