Get Updates
Get notified of breaking news, exclusive insights, and must-see stories!

Bengaluru: ಕೆಆರ್ ಪುರಂನಲ್ಲಿ ಸರಿಯಾಗಿರುವ ಕಾಂಕ್ರಿಟ್‌ ರಸ್ತೆಗಳಿಗೆ ಮರು ಡಾಂಬರೀಕರಣ, ಸಾರ್ವಜನಿಕರ ಹಣ ಪೋಲು

ಬೆಂಗಳೂರು, ಏಪ್ರಿಲ್‌, 04: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ರಸ್ತೆಗಳು ಸರಿಯಾಗಿದ್ದರೂ ಕೂಡ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಡಾಂಬರೀಕರಣ ಮಾಡಲು ಹೊರಟಿದ್ದಾರೆ. ಅದು ಜನರ ಹಣದಲ್ಲಿಯೇ ಸರಿಯಾಗಿರುವ ರಸ್ತೆಗಳನ್ನೇ ಒಡೆದು ತಾವೇ ಅಭಿವೃದ್ಧಿ ಮಾಡಿರುವುದಾಗಿ ರಾಜಕಾರಣಿಗಳು ಕೊಚ್ಚಿಕೊಳ್ಳುವುದು ಹಲವು ಕಡೆ ನಡೆಯುತ್ತಿದೆ. ಹೀಗೆ ಅಭಿವೃದ್ಧಿ ಹೆಸರಿನಲ್ಲಿ ಜನರ ಹಣವನ್ನು ಪೋಲು ಮಾಡುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಕೆ.ಆರ್‌.ಪುರಂನ ಜಗದೀಶ್‌ ನಗರದಲ್ಲಿನ ಮೂರು ಕಾಂಕ್ರಿಟ್‌ ರಸ್ತೆಗಳು ಸುಸ್ಥಿತಿಯಲ್ಲಿವೆ. ಆದರೂ ಕೂಡ ಬಿಬಿಎಂಪಿ ಚೆನ್ನಾಗಿರುವ ಈ ಮೂರು ರಸ್ತೆಗಳನ್ನು ಕಿತ್ತು ಮರು ಡಾಂಬರೀಕರಣ ಮಾಡಲು ಹೊರಟಿದ್ದು, ಇದು ಸ್ಥಳೀಯ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 Bengaluru: Public money squandered on re work fine concrete roads in KR Puram

ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ

ಜಗದೀಶ್‌ ನಗರದಲ್ಲಿನ ಸರಿಯಾಗಿರುವ 4ನೇ ಮುಖ್ಯ ರಸ್ತೆಯನ್ನು ಬಿಬಿಎಂಪಿ ಒಡೆಯುವ ಮೂಲಕ ನೂತನ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿದೆ. ಇದಕ್ಕೆ ಇಲ್ಲಿನ ನಿವಾಸಿಗಳು ಪ್ರತಿಕ್ರಿಯಿಸಿದ್ದು, ಸರಿಯಾಗಿರುವ ರಸ್ತೆಯನ್ನು ಹೊಡೆದು ನಮ್ಮ ಹಣವನ್ನು ಸುಮ್ಮನೆ ಪೋಲು ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳಿಗೆ ಕ್ಲಾಸ್‌

ಬಿಬಿಎಂಪಿಯು ಸುಮಾರು ಒಂದು ಕಿಲೋ ಮೀಟರ್‌ಗೂ ಹೆಚ್ಚು ವ್ಯಾಪ್ತಿಯ ರಸ್ತೆಯನ್ನು ಒಡೆಯಲು ಯೋಜನೆಯನ್ನು ರೂಪಿಸಿದೆ. ಮತ್ತೊಂದೆಡೆ ಕೆಲವೊಂದು ಪ್ರದೇಶದಲ್ಲಿನ ಹದಗೆಟ್ಟಿರುವ ರಸ್ತೆಗಳನ್ನು ಮಾತ್ರ ದುರಸ್ಥಿಗೊಳಿಸಿಲ್ಲ. ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವಂತೆ ಜನರು ಮನವಿ ಸಲ್ಲಿಸಿದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿರಲಿಲ್ಲ. ಆದರೆ ಇದೀಗ ಜಗದೀಶ್‌ ನಗರದಲ್ಲಿ ಸರಿಯಾಗಿರುವ ರಸ್ತೆಯನ್ನೇ ದುರಸ್ಥಿ ಮಾಡಲು ಹೊರಟಿರುವ ಬಿಬಿಎಂಪಿ ಅಧಿಕಾರಿಗಳಿಗೆ ಜನರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಡಿಎಚ್‌ ಅವರು ಜಗದೀಶ್‌ ನಗರದ ಉಸ್ತುವಾರಿ ಎಂಜಿನಿಯರ್‌ಗಳನ್ನು ಸಂಪರ್ಕಿಸಿದಾಗ ಈ ವೇಳೆ ಅವರು ಇಲ್ಲಸಲ್ಲದ ಕಾರಣ ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ. ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಜಯ್‌ ಕುಮಾರ್ ಪ್ರತಿಕ್ರಿಯಿಸಿ, ಈ ಪ್ರದೇಶದಲ್ಲಿ ರಸ್ತೆಯನ್ನು ಅಗೆಯುವ ಕಾಮಗಾರಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಆದರೆ ಈ ರಸ್ತೆಗಳಲ್ಲಿ ಅಂತಹ ಕಾಮಗಾರಿಯನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ.

 Bengaluru: Public money squandered on re work fine concrete roads in KR Puram

ನಂತರ ಕಾಂಕ್ರಿಟ್‌ ಹಾಕಲು ರಸ್ತೆಯನ್ನು ಅಗೆಯಲಾಗುತ್ತಿದೆ ಎಂದು ಸಹಾಯಕ ಇಂಜಿನಿಯರ್‌ ಕೆಶವಮೂರ್ತಿ ಡಿಎಚ್‌ಒಗೆ ತಿಳಿಸಿದ್ದಾರೆ. ಹೀಗೆ ಸಾರ್ವಜನಿಕರ ಹಣ ಪೋಲು ಮಾಡುತ್ತಿರುವ ಸ್ಥಳೀಯ ಇಂಜಿನಿಯರ್‌ಗಳ ವಿರುದ್ಧ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಈ ಮೂರು ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ. ಆದರೂ ಇಂಜಿನಿಯರ್‌ಗಳು ಅವುಗಳನ್ನು ಒಡೆಯುತ್ತಿದ್ದಾರೆ. ಹೀಗೆ ಸಂಪೂರ್ಣವಾಗಿ ಜನರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಲ್ಲದೆ ಇದರಿಂದ ನಮಗೆ ತೊಂದರೆಯೂ ಆಗುತ್ತಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+