Bengaluru Property: ಬೆಂಗಳೂರಿನಲ್ಲಿ ಭೂಮಿ, ಪ್ರಾಪರ್ಟಿ ಖರೀದಿ ಮಾಡುವ ಕನಸಿಗೆ ತಣ್ಣೀರು

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆಗಳು ಹೆಚ್ಚಳವಾಗುತ್ತಿದ್ದು, ಹೊಸದಾಗಿ ಪ್ರಾಪರ್ಟಿ ಖರೀದಿ ಮಾಡುವುದು ಕಷ್ಟ ಎನ್ನುವುದು ಸಾಬೀತಾಗುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜಾಗ ಖರೀದಿ ಮಾಡಬೇಕು ಹಾಗೂ ಸಣ್ಣದೊಂದು ಮನೆ ನಿರ್ಮಾಣ ಮಾಡಬೇಕು ಎನ್ನುವುದು ಮಧ್ಯಮ ವರ್ಗದ ಕನಸು. ಲಕ್ಷಾಂತರ ಜನ ಈ ಕನಸಿನ ಹಿಂದೆ ಓಡುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಸಣ್ಣದೊಂದು ಮನೆ ನಿರ್ಮಾಣ ಮಾಡಬೇಕು ಎನ್ನುವುದು ಹಲವರ ಕನಸಾಗಿದೆ. ಆದರೆ ಬೆಂಗಳೂರಿನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆ ಇರಲಿ ಜಾಗ ಖರೀದಿ ಮಾಡುವುದು ಸಹ ಕಷ್ಟವಾಗುತ್ತಿದೆ. ಏನಿದು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಭೂಮಿ ಬೆಲೆ ಹೆಚ್ಚಳ ಹಾಗೂ ಪ್ರಾಪರ್ಟಿ ಬೆಲೆ ಏಕಾಏಕಿ ಹೆಚ್ಚಳವಾಗುತ್ತಿರುವುದರಿಂದ ಜನ ಪ್ರಾಪರ್ಟಿ ಖರೀದಿ ಮಾಡುವ ಕನಸನ್ನೇ ಕೈಬಿಡುತ್ತಿದ್ದಾರೆ. 2025ರಲ್ಲಿ ಬೆಂಗಳೂರಿನ ಮನೆ ಖರೀದಿ ಮಾಡುವುದಕ್ಕೆ ಮುಂದಾದರೂ ಹಣದ ಕೊರತೆಯಿಂದ ಇದು ಸಾಧ್ಯವಾಗಿಲ್ಲ. 1 ಕೋಟಿ ರೂಪಾಯಿಗಿಂತಲೂ ಕಡಿಮೆ ಮೌಲ್ಯದ ಪ್ರಾಪರ್ಟಿ ಖರೀದಿ ಮಾಡುವ ಕನಸು ಕಂಡಿದ್ದ ಶೇ 42ರಷ್ಟು ಜನ ಆಸ್ತಿ ಬೆಲೆಗಳಲ್ಲಿ ತೀವ್ರ ಏರಿಕೆಯಿಂದಾಗಿ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನೋಬ್ರೋಕರ್ ವರದಿ ಮಾಡಿದೆ.

Bengaluru Property Crisis Why Buying Land and House Has Become Nearly Impossible Bengaluru

ಬೆಂಗಳೂರಿನಲ್ಲಿ ವಸತಿ ಪ್ರದೇಶಗಳ ಬೆಲೆಯು ವರ್ಷದಿಂದ ವರ್ಷಕ್ಕೆ ಶೇ. 13ರಷ್ಟು ಏರಿಕೆಯಾಗಿದ್ದು, ಇದರಿಂದ ಪ್ರಾಪರ್ಟಿ ಖರೀದಿ ಮಾಡುವುದು ಜನರಿಗೆ ಕಷ್ಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದು ಸುರಕ್ಷಿತ ಎಂದು ಕಾಣುತ್ತದೆಯೋ ಅದರ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಅದರಲ್ಲಿ ಚಿನ್ನದ ಮೇಲೆ ಹೂಡಿಕೆ ಹಾಗೂ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಭೂಮಿ ಹಾಗೂ ವಿವಿಧ ಪ್ರಾಪರ್ಟಿಗಳ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಪದೇ ಪದೇ ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನ ಸಹ ಪ್ರಾಪರ್ಟಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇರಿಸುತ್ತಿದ್ದಾರೆ.

ಬೆಂಗಳೂರಿನ ಹೊರ ಭಾಗದಲ್ಲಿ ಪ್ರಾಪರ್ಟಿ ಖರೀದಿ

ಇನ್ನು ಬೆಂಗಳೂರಿನ ಒಳ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನ ಬೆಂಗಳೂರಿನಿಂದ ಹೊರ ಭಾಗದಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಬಜೆಟ್ ಹೊಂದಾಣಿಕೆ ಆಗದೆ ಇರುವುದರಿಂದ ಜನ ಬೆಂಗಳೂರಿನ ಸಮೀಪ ಪ್ರದೇಶಗಳು ಹಾಗೂ ಬೆಂಗಳೂರಿನ ಹೊರ ಭಾಗದಲ್ಲಿ ಪ್ರಾಪರ್ಟಿ ಖರೀದಿಸುತ್ತಿದ್ದಾರೆ. ಭವಿಷ್ಯದಲ್ಲಿ ಹೇಗಿದ್ದರೂ ಪ್ರಾಪರ್ಟಿ ಬೆಲೆ ಹೆಚ್ಚಳವಾಗಲಿದೆ ಎನ್ನುವ ಲೆಕ್ಕಾಚಾರ ಪ್ರಾಪರ್ಟಿ ಖರೀದಿ ಮಾಡುವವರು ಇದ್ದಾರೆ.

1 ಕೋಟಿಗಿಂತ ಕಡಿಮೆ ಬೆಲೆಯ ಪ್ರಾಪರ್ಟಿ ಕಡಿಮೆ

ಇನ್ನು ಬೆಂಗಳೂರಿನಲ್ಲಿ 1 ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಯ ಪ್ರಾಪರ್ಟಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ 1 ಕೋಟಿ ರೂಪಾಯಿಯ ಒಳಗೆ ಹಾಗೂ ಅರ್ಧ ಕೋಟಿ ರೂಪಾಯಿ ಮೊತ್ತದಲ್ಲೂ ಸಹ ಪ್ರಾಪರ್ಟಿಗಳು ಸಿಗದೆ ಇರುವುದು ಜನ ಪ್ರಾಪರ್ಟಿ ಖರೀದಿ ಮಾಡುವ ಕನಸನ್ನೇ ಕೈಬಿಡುತ್ತಿದ್ದಾರೆ. ಮುಖ್ಯವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಹೃದಯಭಾಗದಲ್ಲಿ 1 ಕೋಟಿ ರೂಪಾಯಿ ಒಳಗಿನ ಪ್ರಾಪರ್ಟಿಯು ಕನಸಾಗಿ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+