Bengaluru Real Estate: ಬೆಂಗಳೂರಿನ ಸಮೀಪದ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್!
Bengaluru Real Estate: ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಇದ್ದು ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ಬಂಪರ್ ಅವಕಾಶ ಸಿಕ್ಕಿದೆ. ಹೌದು ಬೆಂಗಳೂರಿನ ಕನಕಪುರದಲ್ಲಿ ಆಸ್ತಿಗೆ ಬಂಪರ್ ಬಂದಿದೆ. ಹೀಗಾಗಿ ಇದೀಗ ಜನ ಕನಕಪುರದಲ್ಲಿ ಆಸ್ತಿ ಖರೀದಿ ಮಾಡುವುದಕ್ಕೆ ಮುಂದಾಗಿದ್ದಾರೆ. ಕನಕಪುರ ಹಾಗೂ ಕನಕಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಸ್ತಿ ಬೆಲೆ ಹೆಚ್ಚಳವಾಗುವುದಕ್ಕೆ ಹಲವು ಕಾರಣ ಇದೆ. ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಭಾಗದಲ್ಲಿ ಜಮೀನು ಮಾರಾಟ ಮಾಡಬೇಡಿ. ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರಲಿದೆ ಅಂತ ಹೇಳಿದ ಮೇಲಂತೂ ಈ ಭಾಗದಲ್ಲಿ ಆಸ್ತಿಗೆ ಒಳ್ಳೆ ಬೆಲೆ ಬರ್ತಿದೆ. ಯಾವೆಲ್ಲ ಕಾರಣಕ್ಕೆ ಈ ಭಾಗದಲ್ಲಿ ಜಾಗದ ಬೆಲೆ ಹೆಚ್ಚಾಗುತ್ತಿದೆ ಹಾಗೂ ಜಾಗದ ಬೆಲೆ ಎಲ್ಲೆಲ್ಲಿ ಹೆಚ್ಚಾಗಿದೆ. ರಿಯಲ್ ಎಸ್ಟೇಟ್‌ಗೆ ಎಲ್ಲಿ ಧಮಾಕ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ಒಂದಿಲ್ಲೊಂದು ಕಾರಣಕ್ಕೆ ರಿಯಲ್ ಎಸ್ಟೇಟ್ ಧಮಾಕ ಶುರುವಾಗಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವು ದಕ್ಷಿಣ ಕರ್ನಾಟಕದಲ್ಲಿ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಯಾವ ಭಾಗದಲ್ಲಿ ನಿರ್ಮಾಣವಾಗಲಿದೆ ಎನ್ನುವುದು ಮಾತ್ರ ಈಗ ಉಳಿದಿರುವ ಕುತೂಹಲವಾಗಿದೆ. ಇನ್ನು ಕನಕಪುರದಲ್ಲಿ ರಿಯಲ್ ಎಸ್ಟೇಟ್‌ಗೆ ದಿಢೀರ್ ಧಮಾಕ ಶುರುವಾಗಿದೆ.

ಕನಕಪುರ ರಸ್ತೆಯಲ್ಲಿ ಆಸ್ತಿ ಖರೀದಿಗೆ ಒಳ್ಳೆಯ ಅವಕಾಶ ಎದುರಾಗಿದೆ. ಕನಕಪುರಕ್ಕೆ ಬೆಂಗಳೂರು ಹಾಗೂ ಮೈಸೂರಿನಿಂದ ಕನೆಕ್ಟಿವಿಟಿ ಶುರುವಾಗಿದೆ. ಕನಕಪುರದಲ್ಲಿ ಕನೆಕ್ಟಿವಿಟಿ ಶುರುವಾಗಿರುವುದು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಲ್ಲಿನ ಜನರಿಗೆ ಭೂಮಿ ಮಾರಾಟ ಮಾಡಬೇಡಿ ಅಂತ ಪದೇ ಪದೇ ಹೇಳುತ್ತಿರುವುದು ಸಹ ಭೂಮಿಗೆ ಬಂಗಾರ ಬೆಲೆ ಬರುವುದಕ್ಕೆ ಕಾರಣವಾಗಿದೆ. ಈಚೆಗಷ್ಟೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ಬೆಂಗಳೂರು ದಕ್ಷಿಣ ಎಂದು ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದರು.
ಇನ್ನು ಕನಕಪುರ ರಸ್ತೆ ಮಾರ್ಗದ ಅಂಜನಾಪುರದ ಭಾಗಕ್ಕೆ ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ವಿಸ್ತರಣೆ ಮಾಡುವುದು. ಇನ್ನು ನಮ್ಮ ಮೆಟ್ರೋವನ್ನು ಕನಕಪುರಕ್ಕೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸೇರಿದಂತೆ ವಿವಿಧ ಯೋಜನೆಗಳು ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರುವಂತೆ ಮಾಡಿದೆ. ಮುಂದೆ ಭಾರೀ ಯೋಜನೆಗಳು ಇಲ್ಲಿ ಜಾರಿಯಾಗಲಿದೆ ಎನ್ನುವ ನಿರೀಕ್ಷೆ ಸಹ ಭೂಮಿಗೆ ಒಳ್ಳೆಯ ಬೆಲೆ ಬರುವುದಕ್ಕೆ ಕಾರಣವಾಗಿದೆ. ಇನ್ನು ಮುಖ್ಯವಾಗಿ ಬೆಂಗಳೂರು - ಮೈಸೂರು ಸಂಪರ್ಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಈ ಎರಡು ನಗರಗಳ ನಡುವಿನ ಕಾರಿಡಾರ್ (ಬಿಎಂಐಸಿ) ಹಾಗೂ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಜಾರಿಯ ವಿಷಯಗಳು ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಕೊಟ್ಟಿವೆ.
ಇನ್ನು ಬೆಂಗಳೂರಿನಲ್ಲಿ ಹಲವು ಕಡೆ ರಿಯಲ್ ಎಸ್ಟೇಟ್ ಬೆಲೆ ಭಾರೀ ಹೆಚ್ಚಳವಾಗಿದೆ. ಹೀಗಾಗಿ ಜನ ಬೆಂಗಳೂರಿನ ಸುತ್ತಮುತ್ತಲಿನ ಜಾಗದಲ್ಲೂ ಆಸ್ತಿ ಖರೀದಿ ಮಾಡುವುದಕ್ಕೆ ಮುಗಿಬೀಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬೆಂಗಳೂರಿನ ಕೇಂದ್ರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ. ಕನಕಪುರ ರಸ್ತೆ ಹಾಗೂ ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗಳ ಬೆಲೆ ಈಗ ಕಡಿಮೆಯೂ ಇದೆ ಅಂತ ಹೇಳಲಾಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ವಿಲ್ಲಾ ಹಾಗೂ ಫ್ಲಾಟ್‌ಗಳ ಅಭಿವೃದ್ಧಿ ಭರ್ಜರಿಯಾಗಿ ಆಗಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ವಿಚಾರದಿಂದಾಗಿ ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಧಮಾಕ ಶುರುವಾಗಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಮಾತ್ರವಲ್ಲದೆ ಹೊಸೂರು ವಿಮಾನ ನಿಲ್ದಾಣದ ವಿಚಾರವೂ ಸಹ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಕೊಟ್ಟಿದೆ.












Click it and Unblock the Notifications