ಬೆಂಗಳೂರು: 1ನೇ ತರಗತಿ ವಾರ್ಷಿಕ ಶುಲ್ಕ ಒಂದಲ್ಲ ಎರಡಲ್ಲ.. ಬರೋಬ್ಬರಿ 7.35 ಲಕ್ಷ ರೂಪಾಯಿ: ರಸೀದಿ ಭಾರೀ ವೈರಲ್
School Admission Fee: ರಾಜ್ಯದಲ್ಲಿನ ಕೆಲವೊಂದು ಖಾಸಗಿ ಶಾಲೆಗಳಲ್ಲಿ ದುಬಾರಿ ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಲಿವೆ. ಈ ನಡುವೆಯೇ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ ಶಾಲೆಯೊಂದರಲ್ಲಿ 1ನೇ ತರಗತಿ ವಿದ್ಯಾರ್ಥಿಯ ವಾರ್ಷಿಕ ಶುಲ್ಕ 7.5 ಲಕ್ಷ ರೂಪಾಯಿ ಆಗಿದ್ದು, ಈ ರಸೀದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿದೆ.
ಹೌದು.. ಬೆಂಗಳೂರಿನ ಶಾಲೆಯೊಂದರಲ್ಲಿ ಒಂದನೇ ತರಗತಿ ವಿದ್ಯಾರ್ಥಿಯ ವಾರ್ಷಿಕ ಶುಲ್ಕ 7.5 ಲಕ್ಷ ರೂಪಾಯಿ ಆಗಿದ್ದು, ಶುಲ್ಕದ ರಸೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರಸೀದಿಯ ಫೋಟೋವನ್ನು ಪೋಷಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಶಾಲಾ ಆಡಳಿತ ಮಂಡಳಿ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಶಾಲೆಯ ವಾರ್ಷಿಕ ಶುಲ್ಕದ ರಸೀದಿಯ ಫೋಟೊವನ್ನು D.Muthukrishnan ಎಂಬ ಹೆಸರಿನವರು ತಮ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದನೇ ತರಗತಿಗೆ 7.5 ಲಕ್ಷ ರೂಪಾಯಿ ಆದರೆ ಹಂತ-ಹಂತವಾಗಿ ಹೆಚ್ಚಳವಾಗಿ 10ನೇ ತರಗತಿಗೆ ಶುಲ್ಕ ಎಷ್ಟಿದೆ ಎಂದು ಇಲ್ಲಿ ಹಂಚಿಕೊಳ್ಳಲಾಗಿರುವ ರಸೀದಿಯಲ್ಲಿ ಗಮನಿಸಿ.
ವಾರ್ಷಿಕ ಶುಲ್ಕದ ಲೆಕ್ಕ ಇದಾದರೆ, ಮಕ್ಕಳ ಪುಸ್ತಕ, ಸಾರಿಗೆ ವೆಚ್ಚ, ಸಮವಸ್ತ್ರ, ಇತರೆ ಕಲಾ ಚಟುವಟಿಕೆ ಸೇರಿದಂತೆ ಒಂದನೇ ತರಗತಿಯ ವಿದ್ಯಾರ್ಥಿಯ ಶುಲ್ಕ 8 ಲಕ್ಷ ರೂಪಾಯಿಗೂ ಹೆಚ್ಚಳ ಆದಂತಾಗಲಿದೆ. ಶಿಕ್ಷಣ ಎನ್ನುವುದು ಮುಕ್ತ ಮಾರುಕಟ್ಟೆ ಆಗಿದ್ದು, ಶುಲ್ಕ ನಿಗದಿಪಡಿಸಲು ಮಾನದಂಡಗಳೇ ಇಲ್ಲದಂತಾಗಿದೆ.
ಇದೀಗ ಭಾರೀ ಸುದ್ದಿಯಲ್ಲಿರುವ ಬೆಂಗಳೂರಿನ ಈ ಶಾಲೆಯಲ್ಲಿ ಉತ್ತಮವಾಗಿದೆ. ಆದರೆ, ಶುಲ್ಕ ಮಾತ್ರ ಇತಿಮಿತಿ ಇಲ್ಲದಂತೆ ನಿಗದಿಪಡಿಸಿದ್ದಾರೆ. ಇದನ್ನು ಗಮನಿಸಿದರೆ, ಐಟಿ ಉದ್ಯೋಗಿಗಳು ವಾರ್ಷಿಕ ಸಂಪಾದನೆ ಮಾಡುವ 50 ಲಕ್ಷ ರೂಪಾಯಿಯಲ್ಲಿ ಅರ್ಧಕರ್ಧ ತಮ್ಮ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಬೆಂಗಳೂರಿನ ಈ ಶಾಲೆಯ ಶುಲ್ಕದ ವಿರುದ್ಧ ನೆಟ್ಟಿಗರು ಸೇರಿದಂತೆ ಹಲವು ಶಿಕ್ಷಣ ಶಿಕ್ಷಣ ತಜ್ಞರು ಆಕ್ರೋಶ ಹೊರಹಾಕುತ್ತಿದ್ದಾರೆ.
It's a free market. Pricing is upto individuals. It's customer choice to pick what they want. All is right in this theory, like most of the theories.
— D.Muthukrishnan (@dmuthuk) August 31, 2025
Look at the fee structure of one of the good schools in Bengaluru. This is unaffordable even for an IT couple earning a combined… pic.twitter.com/1AvDEQRMyz
ಈ ಶಾಲೆ ಶುಲ್ಕ ಕಟ್ಟಿಸಿಕೊಳ್ಳಲೆಂದೇ ಇದೆಯಾ ಅಥವಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತದೆಯೋ ಗೊತ್ತಿಲ್ಲ. ಇದಕ್ಕೆ ಸಂಬಂಶಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿ ಈ ಶುಲ್ಕದ ಹೊರೆಯನ್ನು ಇಳಿಸಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಲ್ಲದೆ, ಇದು ಶಿಕ್ಷಣ ಸಂಸ್ಥೆಯೋ ಅಥವಾ ಬರೀ ಹಣ ಮಾಡುವ ಸಂಸ್ಥೆಯೋ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ರಸೀದಿ ನೋಡಿದರೆ, ಎಂಥವರಿಗೂ ಕೋಪ ಬರುವುದಂತೂ ಸಹಜ. ಆ ಪರಿ ಶುಲ್ಕವನ್ನು ನಿಗದಿಪಡಿಸಿದ್ದಾರೆ. ಹೀಗೆ ಆದರೆ, ಸಾಮಾನ್ಯ ಜನರ ಮಕ್ಕಳ ವಿದ್ಯಾಭ್ಯಾಸದ ಕಥೆ ಏನು. ಇಂತಹ ಶಿಕ್ಷಣ ಸಂಸ್ಥೆಗಳು ಏರುವ ಶುಲ್ಕದ ಹೊರೆಯಿಂದ ತಪ್ಪಿಸಿಕೊಳ್ಳಲು ಕೆಲವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವರು ಸಾಲ ಮಾಡಿಯಾದರೂ ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಇಂತಹ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ, ಇಂತಹ ಶಾಲೆಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಶುಲ್ಕವನ್ನು ಕಡಿತಗೊಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎನ್ನುವುದು ನೆಟ್ಟಿಗರ ಆಗ್ರಹವಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications