Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆಗಸ್ಟ್‌ 19ರ ಬುಧವಾರ ವಿದ್ಯುತ್ ವ್ಯತ್ಯಯ

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಆಗಸ್ಟ್‌ 19ರ ಬುಧವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನಗರದ ನಂದಿನಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-7 ಉಪ ವಿಭಾಗದ ಹಲವೆಡೆ ಬುಧವಾರ (ಆಗಸ್ಟ್‌ 19) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Bengaluru Power Cut Power Outage in These Areas on August 19 2026 Monday Know complete details

ಬುಧವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?

ಸುಬ್ರಹ್ಮಣ್ಯನಗರ, ಎ, ಬಿ, ಸಿ ಮತ್ತು ಡಿ ಬ್ಲಾಕ್ (ಮಿಲ್ಕ್‌ ಕಾಲೋನಿ), ಗಾಯತ್ರಿ ನಗರ, ಕೃಷ್ಣಾನಂದ ನಗರ, ಆರ್‌ಎಂಸಿ ಯಾರ್ಡ್‌, ಮರಪ್ಪನಪಾಳ್ಯ, ಯಶವಂತ‌ಪುರ ಕೈಗಾರಿಕಾ ಪ್ರದೇಶ, ಶಂಕರನಗರ, ಶ್ರೀಕಾಂತೇಶ್ವರ ನಗರ, ಸೋಮೇಶ್ವರ ನಗರ, ಎಪಿಎಂಸಿ ಯಾರ್ಡ್‌, ಮಹಾಲಕ್ಷ್ಮಿ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ ರಸ್ತೆ, ಸರಸ್ವತಿ ಪುರಂ, ಎಜಿಬಿ ಲೇಔಟ್, ಪರಿಮಳ ನಗರ, ಶ್ರೀನಿವಾಸ ನಗರ, ಜೈಮಾರುತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ರವಿ ಬಡಾವಣೆ, ಸಾಕಮ್ಮ ಬಡಾವಣೆ, ಜೆ.ಎಸ್.ನಗರ, ಜೆ.ಸಿ. ನಗರ, ಕುರುಬರಹಳ್ಳಿ, 60 ಅಡಿ ರಸ್ತೆ, 9ನೇ, 10ನೇ, 11, 12, 13, 14 ಮತ್ತು 15ನೇ ಮುಖ್ಯ ರಸ್ತೆ, ಪಿಡಬ್ಲ್ಯೂಡಿ, ಇಡಬ್ಲ್ಯೂಎಸ್‌, ಎಎಂಆರ್, ಕ್ವಾರ್ಟಸ್, ರಾಜ್‌ಕುಮಾರ್‌ ಸಮಾಧಿ ರಸ್ತೆ, ಗೆಳೆಯರ ಬಳಗ ಸುತ್ತಮುತ್ತಲಿ ಪ್ರದೇಶಗಳು, ಶ್ರೀರಾಮ ನಗರ, ಮುನೇಶ್ವರ ಬ್ಲಾಕ್, ಜೆ.ಸಿ. ನಗರ 1ನೇ ಮುಖ್ಯ ರಸ್ತೆ, ಸತ್ಯನಾರಾಯಣ ಲೇಔಟ್, ಮೈಕೋ ಲೇಔಟ್, ಹ್ಯಾಪಿ ಹೋಮ್‌ಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆ 66/11 ಕೆ.ವಿ.ಯಲಹಂಕ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಮಂಗಳವಾರ (ಆಗಸ್ಟ್‌ 18) ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಎಂಎಫ್, ಯಲಹಂಕ ನ್ಯೂ ಟೌನ್ 208, 407,'ಬಿ' ಸೆಕ್ಟರ್, ಸಿಬಿ ಸಂದ್ರ, ಅಲ್ಲಾಳಸಂದ್ರ, ಶಾರದನಗರ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ, ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಅಸ್ಟ್ರಾಜನಿಕಾ, ಪಿಎಡಿಎಂಎಸ್ ಕಾಲೇಜು, ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್, ಕಟ್ಟಿಗೇನಹಳ್ಳಿ, ಪಾಲನಹಳ್ಳಿ, ದ್ವಾರಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಸ್ಕಾಂನಿಂದ ಮಹತ್ವದ ಸಲಹೆ

ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಗಿದರೆ, ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಸಾರ್ವಜನಿಕರು ಮೊಬೈಲ್, ಬ್ಯಾಟರಿ, ಲ್ಯಾಪ್‌ಟಾಪ್‌ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಉಪಕರಣಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ. ಸಾರ್ವಜನಿಕರು ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+