Bengaluru Power Cut: ನಾಳೆಯಿಂದ ಜುಲೈ 31ರ ತನಕ ನಾಲ್ಕು ವಿದ್ಯುತ್ ಕಡಿತ, ಯಾವ ಬಡಾವಣೆಗಳಲ್ಲಿ?

ಬೆಂಗಳೂರು, ಜುಲೈ 27: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯಲ್ಲಿ ವಿವಿಧ ತುರ್ತು ಕಾಮಗಾರಿ ಹಾಗೂ ದುರಸ್ತಿ ಕೆಲಸ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ನಾಲ್ಕು ದಿನ ಅಂದರೆ ಜುಲೈ 28ರಿಂದ ಜುಲೈ 31ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಮೊದಲು ಎರಡು ದಿನ ಎನ್ನಲಾಗಿತ್ತು. ಇದೀಗ ನಾಲ್ಕು ದಿನಗಳ ಕಾಲ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಈ ಪೈಕಿ ಭಾನುವಾರದಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

Bengaluru Power cut Power Disruption in Bengaluru on July 28 to July 31 Know Affected Areas

ಹಾಗಾದರೆ ಯಾವ ದಿನ ಯಾವೆಲ್ಲ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಮಯ, ದಿನಾಂಕದ ಮಾಹಿತಿ ಇಲ್ಲಿದೆ. ನಾಳೆ ಭಾನುವಾರ ಮತ್ತು ಸೋಮವಾರ (ಜುಲೈ 28-ಜುಲೈ 29ರಂದು) ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕರೆಂಟ್ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ವಿದ್ಯುತ್ ಕಡಿತದ ಸ್ಥಳ ನೋಡುವುದಾದರೆ, ನಗರದ ಮುನಿರಾಮಯ್ಯ ಬ್ಲಾಕ್, ಕೌಸರ್ ನಗರ, ಚಾಮುಂಡಿನಗರ, ಅಶ್ವಥನಗರ, ದಿನ್ನೂರು ಮೇನ್ ರಸ್ತೆ, ಟಿ ನಗರ, ಹೆಚ್ಎಂಟಿ ಬಡಾವಣೆ, ಡಾಲರ್ಸ್ ಕಾಲೋನಿ, ಗಂಗಾನಗರ, ಡಾಲರ್ಸ್ ಕಾಲೋನಿ ಮುಖ್ಯರಸ್ತೆ, ಕೆಂಪಣ್ಣ ಬಡಾವಣೆ, ಚಿದಾನಂದ ರೆಡ್ಡಿ ಬಡಾವಣೆ, ನೇತಾಜಿ ನಗರ, ಪಾಲಿಕೆಎಲ್ ಲೇಔಟ್, ಗುಡ್ಡದಹಳ್ಳಿ ಸರ್ಕಲ್, ಮೈತ್ರಿ ಬಜಾರ್, ವೇಣುಗೋಳ ಮೇನ್ ರೋಡ್, ಚೋಲನಾಯಕನಹಳ್ಳಿ,

ಚಿನ್ನಮ್ಮ ಬಡಾವಣೆ, ಭೂಪಸಂದ್ರ, ಸೆಂಟ್ರಲ್ ನಗರ, ಗಿಡ್ಡಪ್ಪ ಬ್ಲಾಕ್, ಜಡ್ಜಸ್ ಕಾಲೋನಿ, ವಿನಾಯಕ ಬಡಾವಣೆ 1ನೇ ಹಂತ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಕಡಿತದ ಅಡಚಣೆಗಾಗಿ ಸಾರ್ವಜನಿಕರು ಸಹರಿಸುವಂತೆ ಬೆಸ್ಕಾಂ ಕೋರಿದೆ.

ಬೆಳಗ್ಗೆ 11-03 ಗಂಟೆವರೆಗೆ ವಿದ್ಯುತ್ ಕಟ್

ಇನ್ನೂ ಉಳಿದ ಎರಡು ದಿನ (ಜುಲೈ 30 ಮತ್ತು ಜುಲೈ 31ರಂದು) ಹಲವು ಕಡೆಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೆ ದೇವನಹಳ್ಳಿ, ಕುಂದಾಣ, ಬ್ರಿಗೆಡ್ ಆರ್ಚಡ್ಸ್ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಲಿದೆ. ಬೆಂಗಳೂರು ನಗರ ಮಾತ್ರವಲ್ಲದೇ, ಗ್ರಾಮಾಂತರ, ತುಮಕೂರು ಮತ್ತು ರಾಮನಗರ ವಿದ್ಯುತ್ ಕೇಂದ್ರಗಳಿಂದ ಪೂರೈಕೆ ಆಗುವ ಒಂದಷ್ಟು ಬಡಾವಣೆಗಳಲ್ಲಿ ಸಹ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ.

ಒಂದು ವೇಳೆ ನಿಗದಿತ ಸಮಯದ ಬಳಿಕವ ವಿದ್ಯುತ್ ಬರದಿದ್ದರೆ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿ 1912 ಸಹಾಯವಾಣಿಗೆ ಕರೆ ಮಾಡಬಹುದು. ಬೆಸ್ಕಾಂ ಸಿಬ್ಬಿಂದ ದಿನದ 24 ಗಂಟೆ ಸಹ ನಿಮಗೆ ಮಾಹಿತಿ ನೀಡಲಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+