Bengaluru Power Cut Today: ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ, ವಿವರ
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಬೆಸ್ಕಾಂ ವ್ಯಾಪ್ತಿಯ ಕೆಲವೆಡೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳಲಿದೆ. ಈ ಕಾರಣದಿಂದ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಂಗಳವಾರ (ಡಿಸೆಂಬರ್ 24) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯ 66/11KV ಬ್ಯಾಟರಾಯನಪುರ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯಲಿದೆ. ಹೀಗಾಗಿ ಹೆಬ್ಬಾಳ ಸಿ8 ಉಪವಿಭಾಗ ವ್ಯಾಪ್ತಿಯ ಹಲವೆಡೆ ಇಂದು ಬೆಳಗ್ಗೆ 11ಗಂಟೆಯಿಂದಲೇ ಕರೆಂಟ್ ಕಟ್ ಆಗಲಿದ್ದು, ಸಂಜೆ 5ಗಂಟೆ ಬಳಿಕ ಎಂದಿನಂತೆ ವಿದ್ಯುತ್ ಪೂರೈಕೆ ಆಗಲಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ವ್ಯತ್ಯಯಗೊಳ್ಳುವ ಪ್ರದೇಶಗಳ ವಿವರ ಇಲ್ಲಿದೆ.

ವಿದ್ಯುತ್ ಕಡಿತದ ಏರಿಯಾಗಳ ಪಟ್ಟಿ
ಇಂದು ಬೆಳಗ್ಗೆ ಯಶೋಧನಗರ, ಜಕ್ಕೂರು ಪ್ಲಾಂಟೇಶನ್, ಬ್ಯಾಟರಾಯನಪುರದ ಸೆಂಚುರಿ ಅಪಾರ್ಟ್‌ಮೆಂಟ್, ಎಲ್ ಆಂಡ್ ಟಿ ವಸತಿ ಸಮುಚ್ಚಯ, ಸ್ಪಾರ್ಕಲ್ ಒನ್ ಮಾಲ್, ಶಬರಿನಗರ, ಕೆನರಾ ಬ್ಯಾಂಕ್ ಬಡಾವಣೆ, ಧನಲಕ್ಷ್ಮಿ ಬಡಾವಣೆ, ಅಮೃತಹಳ್ಳಿ, ಸಹಕಾರನಗರ ಜಿ.ಬ್ಲಾಕ್, ತಿಂಡ್ಲು ಮುಖ್ಯರಸ್ತೆ, ಸರ್ ಎಂವಿ ಲೇಔಟ್ ಪಾರ್ಕ್, ವೆಂಕಟಸ್ವಾಮಪ್ಪ ಲೇಔಟ್, ತಿಂಡ್ಲು ಗ್ರಾಮ ಬಡಂಗ ಸಪ್ತಗಿರಿ ಬಡಾವಣೆ, ಜ್ಞಾನೇಶ್ವರಿ ಬಡಾವಣೆ, ಗುರುದರ್ಶನ ಬಡಾವಣೆ, ನಂಜಪ್ಪ ವೃತ್ತ ಹಾಗು ಸುತ್ತಮುತ್ತಲಿನ ಪ್ರದೇಶಗಳು.
ಈ ಬಡಾವಣೆಗಳು ವಿದ್ಯುತ್ ಸರಬರಾಜು ನೋಡಿಕೊಂಡು ಇಂದಿನ ಚಟುವಟಿಕೆಗಳನ್ನು ಹೊಂದಿಸಿಕೊಳ್ಳಬೇಕು. ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಅನನುಕೂಲಕ್ಕೆ ಬೆಸ್ಕಾಂ ವಿಷಾಧಿಸುತ್ತದೆ. ಸಾರ್ವಜನಿಕರಿಗೆ ಸಹಕರಿಸುವಂತೆ ಕೋರಿದೆ.
ಡಿಸೆಂಬರ್ 23ರಂದು ಸೋಮವಾರ ಸಹ ಇಸ್ರೋ ಲೇಔಟ್ ಕೈಗಾರಿಕಾ ಪ್ರದೇಶ, ಕುಮಾರಸ್ವಾಮಿ ಬಡಾವಣೆ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಪ್ರತಿಭಾ ಕೈಗಾರಿಕಾ ಪ್ರದೇಶ, ಸುಪ್ರೀಂ ಲೆದರ್ ಗಾರ್ಮೆಂಟ್ಸ್, ಚಂದ್ರನಗರ, ಕಾಶಿ ನಗರ, ವಿಕ್ರಮ್ ನಗರ ನಂಜಪ್ಪ ಲೇಔಟ್, ಟೀಚರ್ಸ್ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಕಡಿತಗೊಂಡಿತ್ತು.











Click it and Unblock the Notifications