ಏರ್‌ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ

ಬೆಂಗಳೂರು, ಫೆಬ್ರವರಿ 23: ಏರೋ ಇಂಡಿಯಾದಲ್ಲಿ ಇಂದು ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ.

ಕಾರು ಮಾಲೀಕರ ಆತಂಕ, ದುಃಖ ಹೇಳತೀರದಾಗಿದೆ. ಆದರೆ ಇವರ ನೆರವಿಗೆ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ನಿಂತಿದ್ದು, ಕಾರು ಕಳೆದುಕೊಂಡವರಿಗಾಗಿ ನಾಲ್ಕು ಹೆಲ್ಪ್‌ ಡೆಸ್ಕ್‌ ಆರಂಭಿಸಿದ್ದಾರೆ.

ಏರ್‌ ಶೋ ಬಳಿಯೇ ವಿಮೆ ಸಂಸ್ಥೆಯ ಕೌಂಟರ್ ತೆರೆಯಲಾಗಿದ್ದು, ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರಿಗೆ ಶೀಘ್ರವಾಗಿ ವಿಮೆ ಹಣ ಸೇರಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ.

Bengaluru police opened help desk for people who lost car in fire accident in Aero India

ಅಲ್ಲದೆ ವಾಹನ ದಾಖಲೆಗಳನ್ನು ಪಡೆಯಲೆಂದು ಆರ್‌ಟಿಓ ಸುತ್ತಬೇಕಾಗಿದ್ದು, ನಾಳೆ ಭಾನುವಾರವಾಗಿದ್ದರೂ ಸಹ ನಗರ ಹಾಗೂ ಸುತ್ತ ಮುತ್ತಲಿನ ಆರ್‌ಟಿಓ ಕಚೇರಿಗಳು ತೆರೆದಿರಲಿವೆ. ಕಾರು ಕಳೆದು ಕೊಂಡ ಮಾಲೀಕರಿಗೆ ಮಾಹಿತಿ ನೀಡಲಿವೆ.

300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದ್ದು, ಹಲವರ ಕಾರಿನ ವಿಮೆ ದಾಖಲೆಗಳು, ಕಾರಿನ ಮೂಲ ದಾಖಲೆಗಳು ಸಹ ಕಾರಿನ ಜೊತೆಗೆ ಸುಟ್ಟು ಕರಕಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+