ಬೆಂಗಳೂರು: ಕನ್ನಡೇತರರಿಗೆ ಕನ್ನಡ ಕಲಿಸಲು ಪೊಲೀಸರಿಂದ ಹೊಸ ಉಪಕ್ರಮ ಪರಿಚಯ
ಬೆಂಗಳೂರು, ನವೆಂಬರ್ 02: ರಾಜ್ಯದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವದ ಬಹುವಿಜೃಂಭಣೆಯಿಂದ ಆಚರಿಸಲಾಗಿದೆ. ಇದೇ ವಿಶೇಷ ದಿನದಂದು ಕನ್ನಡ ಮಾತನಾಡುವುದನ್ನು ಉತ್ತೇಜಿಸಲು ಬೆಂಗಳೂರು ನಗರ ಪೊಲೀಸರು ಹೊಸ ಉಪಕ್ರಮ ಪರಿಚಯಿಸಿದ್ದಾರೆ. ಇದರಿಂದ ಕನ್ನಡೇತರರು ಕನ್ನಡ ಕಲಿಯಲು ಬಹಳ ಸುಲಭವಾಗುವಂತೆ 'ಕನ್ನಡ ಚಾಟ್' ಕಾರ್ಡ್ ಅಳವಡಿಸಲಾಗಿದೆ.
ಹೌದು, ಬೆಂಗಳೂರು ಪೊಲೀಸರು ನಗರಾದ್ಯಂತ ಎಲ್ಲ ಆಟೋ ರಿಕ್ಷಾ ಚಾಲಕರಿಗೆ ಕನ್ನಡೇತರರು ಇಲ್ಲಿ ಕನ್ನಡ ಕಲಿಕೆಗೆ ಅನುಕೂಲವಾಗುವ ಲ್ಯಾಮಿನೇಷನ್ ಮಾಡಿದ ಈ ಚಾಟ್ ಕಾರ್ಡ್ ಗಳನ್ನು ನೀಡುತ್ತಿದ್ದಾರೆ. ಚಾಲಕರು ಹಾಗೂ ಪ್ರಯಾಣಿಕರ ಮಧ್ಯ ಈ ಚಾಟ್ ಬೋಡ್ ಮೂಲಕ ಸರಳವಾಗಿ ಕನ್ನಡದಲ್ಲೇ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡಲಾಗಿದೆ.

ಈ ಚಾರ್ಟ್ ಕಾರ್ಡ್ ನಲ್ಲಿ ಇಂಗ್ಲಿಷ್ ಪದಗಳನ್ನು ಭಾಷಾಂತರ ಮಾಡಲಾಗಿದೆ. ಅಂದರೆ ಇಂಗ್ಲಿಷ್ ಅಕ್ಷರಗಳಲ್ಲಿಯೇ ಚಾಟ್ ರೀತಿಯಲ್ಲಿ ಕನ್ನಡದಲ್ಲಿ ಹೇಳುವಂತೆ ಕಾರ್ಡ್ ಸಿದ್ದಪಡಿಸಲಾಗಿದೆ. ಇದು ಕನ್ನಡೇತರ ಪ್ರಯಾಣಿಕರು ಚಾಲಕರ ಜೊತೆಗೆ ಕನ್ನಡದಲ್ಲಿ ಸಂಭಾಷಣೆ ಮಾಡಲು, ಕನ್ನಡ ಕಲಿಯಲು ಸಾಧ್ಯವಾಗಿಸುತ್ತದೆ. ಈ ಕಾರ್ಡ್ ಕನ್ನಡ ನುಡಿಗಟ್ಟು ಸಹ ಒಳಗೊಂಡಿದೆ.
ಒಂದು ತಿಂಗಳು ಕಾರ್ಡ್ ವಿತರಣೆ
ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಡ್‌ಗಳನ್ನು ನಾವು ನಗರದ ಎಲ್ಲ ಆಟೋಗಳಿಗೂ ವಿತರಿಸುತ್ತಿದ್ದೇವೆ. ಈ ವಿತರಣೆಯು ಮುಂದಿನ ಒಂದು ತಿಂಗಳ ವರೆಗೂ ನಡೆಯಲಿದೆ. ಕನ್ನಡದಲ್ಲಿಯೇ ಪ್ರಯಾಣಿಕರು ಮತ್ತು ಚಾಲಕರ ಮಧ್ಯೆ ಸಂವಾದ ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅದಷ್ಟೇ ಅಲ್ಲದೇ ಆಟೋದಲ್ಲಿ ಅಳವಡಿಸಿರುವ ಕಾರ್ಡ್ ನಲ್ಲಿ ಸ್ಕ್ಯಾನ್ ಆಯ್ಕೆ ಕೊಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ವೀಡಿಯೊ ಪ್ರದರ್ಶನದ ಲಿಂಕ್ ಲಭ್ಯಾಗುತ್ತದೆ. ಇದರ ವೆಚ್ಚ ಪೊಲೀಸ್ ಇಲಾಖೆಯು ಭರಿಸಲಿದೆ. ಇದು ಕನ್ನಡಿಗೆ ಆಟೋ ರೀಕ್ಷಾ ಚಾಲಕ (@autokannadiga0779) ಅಜ್ಮಲ್ ಸುಲ್ತಾನ್ ಅವರಿಂದ ಸ್ಫೂರ್ತಿ ಪಡೆದು ಹೀಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳು, ಹಿಂದಿ ಭಾಷಿಗರು ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದಂದು ನಗರದ ಪೊಲೀಸರು ಕನ್ನಡ ಬಳಕೆ, ಉಳಿಕೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಸದ್ಯ ನಗರಾದಲ್ಲಿ 5,000 ಆಟೋಗಳಲ್ಲಿ ಈ ಕಾರ್ಡ್ ವಿತರಿಸಿದ್ದಾರೆ.












Click it and Unblock the Notifications