ಶಾಲಾ ವಾಹನ; ಪೋಷಕರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್
ಬೆಂಗಳೂರು, ಜನವರಿ 29: ಕಾನೂನುಗಳನ್ನು ಉಲ್ಲಂಘನೆ ಮಾಡಿ, ಶಾಲಾ ವಾಹನಗಳು ಮಕ್ಕಳನ್ನು ತುಂಬಿಕೊಂಡು ಹೋಗುವುದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೋಷಕರ ಮೇಲೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ್ದಾರೆ.
ಶಾಲಾ ವಾಹನವೊಂದು ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದನ್ನು ಫೋಟೊ ಹಾಕಿ ಟ್ವೀಟ್ ಮಾಡಿರುವ ಅವರು, ''ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಏನಾದರೂ ಆದರೆ ಸಾರ್ವಜನಿಕರು ಕೇವಲ ಪೊಲೀಸರ ಮೇಲೆ ಗೂಬೆ ಕೂರಿಸುವುದಲ್ಲ. ಇದಕ್ಕೆ ವಾಹನ ಚಾಲಕನಂತೆ ಪೋಷಕರೂ ಕಾರಣರಾಗುತ್ತಾರೆ'' ಎಂದು ಶಾಲಾ ಮಕ್ಕಳ ಪೋಷಕರನ್ನು ಎಚ್ಚರಿಸಿದ್ದಾರೆ.
ಯಾವ ವಾಹನಗಳಿಗೆ ಎಷ್ಟು ಮಕ್ಕಳನ್ನು ಹತ್ತಿಸಿಕೊಳ್ಳಲು ಅನುಮತಿ ನೀಡಿದೆಯೋ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇದನ್ನು ಪೋಷಕರೂ ಸಹ ತಿಳಿದುಕೊಳ್ಳಬೇಕು. ಹೆಚ್ಚು ಮಕ್ಕಳನ್ನು ವ್ಯಾನ್‌ಗಳಲ್ಲಿ ತುಂಬಿ ಕಳುಹಿಸದಂತೆ ಭಾಸ್ಕರ್ ರಾವ್ ಅವರು ಈ ಮೂಲಕ ಪೋಷಕರನ್ನು ಎಚ್ಚರಿಸಿದ್ದಾರೆ.

ಬೆಂಗಳೂರಿನ ಅಪರಾಧ ಹಾಗೂ ಟ್ರಾಫಿಕ್ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಟ್ವಿಟ್ಟರ್‌ನಲ್ಲಿ ವಿಭಿನ್ನವಾಗಿ ಗಮನ ಸೆಳೆದು ಕಾನೂನುಗಳನ್ನು ಉಲ್ಲಂಘನೆ ಮಾಡಬೇಡಿ ಎಂದು ಬೆಂಗಳೂರಿಗರಿಗೆ ತಿಳಿ ಹೇಳುವುದರಲ್ಲಿ ಸಿದ್ದಹಸ್ತರಾಗಿದ್ದಾರೆ.












Click it and Unblock the Notifications