ಯುವತಿಯರ ಗುಪ್ತಾಂಗ ಸ್ಪರ್ಶಿಸಿ ಪರಾರಿಯಾಗುತ್ತಿದ್ದವನ ಬಂಧನ

ಬೆಂಗಳೂರು, ಮಾರ್ಚ್ 3: ನಿರ್ಜನ ಪ್ರದೇಶದಲ್ಲಿ ಒಂಟಿ ಯುವತಿಯರು, ಮಹಿಳೆಯರು ಹೋಗುತ್ತಿದ್ದರೇ, ಹಿಂದಿನಿಂದ ಹೋಗಿ ಅವರ ಗುಪ್ತಾಂಗಗಳನ್ನು ಸ್ಪರ್ಶಿಸಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸ್ ಬಂಧಿಸಿದ್ದಾರೆ.

ಹೊಸಕೋಟೆ ತಾಲೂಕಿನ ನೆಲ್ಲೂರಪುರದ ಮಹೇಶ್ (32) ಬಂಧಿತ ಆರೋಪಿ. ಫೆ 26ರಂದು ಸಂಜೆ ಗುಪ್ತಾಂಗ ಸ್ಪರ್ಶಿಸಿ ಪರಾರಿಯಾಗಿದ್ದ ಎಂದು ಯುವತಿಯೊಬ್ಬರು ದೂರು ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

"ನೆಲ್ಲೂರಪುರದಲ್ಲಿ ಕುಡಿಯುವ ನೀರು ತರಲೆಂದು ಯುವತಿ ಮನೆಯಿಂದ ಹೊರಗೆ ಬಂದಿದ್ದೆ. ನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಮನೆಯತ್ತ ಹೊರಟಿದ್ದ ವೇಳೆ ಬಂದಿದ್ದ ಮಹೇಶ್ ಎನ್ನುವ, ನನ್ನ ಬಟ್ಟೆಯನ್ನು ಎಳೆದಾಡಿ ಗುಪ್ತಾಂಗ ಮುಟ್ಟಿದ್ದ. ನಾನು ಕಿರುಚಾಡುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದಾನೆ' ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದರು

Bengaluru Police Arrested A Man To Fleeing Womens Private Part

ಈ ಕೃತ್ಯಕ್ಕೂ ಕೆಲ ದಿನಗಳ ಮುಂಚಿ ನಿಂದಲೇ ಯುವತಿಯನ್ನು ಆರೋಪಿ ಹಿಂಬಾಲಿಸುತ್ತಿದ್ದ ಎಚ್ಚರಿಕೆ ನೀಡಿದರೂ ತನ್ನ ಚಾಳಿ ಮುಂದುವರಿಸಿದ್ದ. ಆರೋಪಿ ಎಚ್‌ಎಎಲ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೇ ರೀತಿ ಅನೇಕ ಮಹಿಳೆಯರಿಗೆ ಚುಡಾಯಿಸಿ, ಅಸಭ್ಯವಾಗಿ ನಡೆದುಕೊಂಡಿರುವ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+