ಬೆಂಗಳೂರು ಪೊಲೀಸರ ಬಲಗೆ ಬಿದ್ದ ನಕಲಿ ಜ್ಯೋತಿಷಿ
ಬೆಂಗಳೂರು, ನ.7 : ನಿಮ್ಮ ಬಳಿ ಇರುವ ಬಂಗಾರ ವೃದ್ಧಿಯಾಗುತ್ತದೆ, ಆಸ್ತಿ ಹೆಚ್ಚಳವಾಗುತ್ತದೆ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಅದಕ್ಕೆ ನೀವು ಮಾಡಬೇಕಾದ್ದು ಇಷ್ಟೇ, ನಿಮ್ಮ ಬಳಿ ಇರುವ ಆಭರಣ ನೀಡಿ, ಅದಕ್ಕೆ 'ಸ್ವರ್ಣ ರಕ್ಷಾ ಪೂಜೆ' ಮಾಡುತ್ತೇನೆ ಎಂದು ಜನರನ್ನು ಪರಿಪರಿಯಾಗಿ ನಂಬಿಸಿ ಜನರಿಂದ ಚಿನ್ನಾಭರಣ ದೋಚುತ್ತಿದ್ದ ಜ್ಯೋತಿಷಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು ಪಶ್ಚಿಮ ವಿಭಾಗದ ವಿಜಯನಗರ ಠಾಣೆ ಪೊಲೀಸರು ಆರೋಪಿ ಹಂಪಿನಗರ ನಿವಾಸಿ ಶಶಾಂಕ್ ಪುರೋಹಿತ್(46) ಎಂಬಾತನನ್ನು ಬಂಧಿಸಿದ್ದಾರೆ.[ಜ್ಯೋತಿಷಿ ರಾಮಸ್ವಾಮಿ ದೇವಿಶ್ರೀ ರಾಸಲೀಲೆ ಬಹಿರಂಗ]

ಬಂಧಿತ ಶಶಾಂಕ್ ನಿಂದ 12.5 ಲಕ್ಷ ರೂ. ಮೌಲ್ಯದ ಅರ್ಧ ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವರ್ಣ ರಕ್ಷಾ ಪೂಜೆ' ಮಾಡುತ್ತೇನೆ, ನಿಮ್ಮ ಬಳಿ ಇರುವ ಚಿನ್ನ ನೀಡಿ ಎಂದು ಜನರಿಂದ ಆಭರಣಗಳನ್ನು ಪಡೆಯುತ್ತಿದ್ದ ಶಶಾಂಕ್ ಆಮೇಲೆ ಪಲಾಯನ ಮಾಡುತ್ತಿದ್ದ. ಈತನ ಬಂಧನದಿಂದ ಒಟ್ಟು ಹತ್ತು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.[ಚಂದ್ರಶೇಖರ ಸ್ವಾಮಿಗೆ ದುಬೈ ಮಹಿಳೆಯ ನಂಟು]
ಕಾರ್ಯಾಚರಣೆಯಲ್ಲಿ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಎಸ್.ರಾಘವೇಂದ್ರ, ಪಿಎಸ್‍ಐ ಜಿ.ಕೆ.ರುದ್ರಮ್ಮ, ಎಎಸ್‍ಐ ಕೆ.ಎಸ್.ಶ್ರೀನಿವಾಸ, ಸಿಬ್ಬಂದಿ ಕೃಷ್ಣ ಪವಾರ್, ವಿರೂಪಾಕ್ಷಪ್ಪ, ನೀಲಂಗೆ ಮತ್ತು ಸಂತೋಷ್ ಪಾಲ್ಗೊಂಡಿದ್ದರು.












Click it and Unblock the Notifications