ಸುರೇಶ್ ಪೂಜಾರಿ ಕಸ್ಟಡಿಗೆ ಪಡೆಯಲು ಮುಂದಾದ ಬೆಂಗಳೂರು ಪೊಲೀಸರು
ಬೆಂಗಳೂರು ಸೆಪ್ಟಂಬರ್ 16: ಬೆಂಗಳೂರಿನಲ್ಲಿ 2007ರಲ್ಲಿ ಜೋಡಿ ಕೊಲೆ ಮಾಡಿದ್ದ ಹಾಗೂ ಫಿಲಿಪೈನ್ಸ್‌ನಿಂದ ಗಡಿಪಾರು ಆಗಿರುವ ಮುಂಬೈ ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿಯನ್ನು ಕಸ್ಟಡಿಗೆ ಪಡೆಯಲು ರಾಜಧಾನಿ ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ 2007ರಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಾದ ಶಬ್ನಮ್ ಡೆವಲಪರ್ಸ್ ಕಚೇರಿಯಲ್ಲೇ ಗುಂಡಿನ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಇಬ್ಬರು ಉದ್ಯೋಗಿಗಳಿಗಳು ಸಾವನ್ನಪ್ಪಿದ್ದರು. ಕೃತ್ಯದ ಮಾಸ್ಪರ್ ಮೈಂಡ್ ಸುರೇಶ್ ಪೂಜಾರಿ ಮತ್ತು ರವಿ ಪೂಜಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ವರ್ಷದ ಹಿಂದೆ ರಿಯಲ್ ಎಸ್ಟೇಟ್ ಸಂಸ್ಥೆ ಕಚೇರಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಪೂಜಾರಿ ಫಿಲಿಪೈನ್ಸ್‌ನಿಂದ ಗಡಿಪಾರು ಆಗಿದ್ದರು. ಬೆಂಗಳೂರಿನಲ್ಲಿ ಇಬ್ಬರು ಉದ್ಯೋಗಿಗಳ ಸಾವಿಗೆ ಕಾರಣನಾಗಿದ್ದ ಸುರೇಶ್ ಪೂಜಾರಿ (45)ಯು ಮುಂಬೈನಲ್ಲಿ ಅನೇಕ ಗುಂಡಿನ ದಾಳಿ ಪ್ರಕರಣಗಳಲ್ಲಿ ಹೆಸರು ಕೇಳಿ ಬಂದಿದೆ. ಸದ್ಯ ಆರೋಪಿಯನ್ನು ಬೆಂಗಳೂರು ಕ್ರೈಂ ಬ್ರಾಂಚ್ ಹುಡುಕುತ್ತಿದೆ. ವಿಚಾರಣೆ ಭಾಗವಾಗಿ ಮುಂಬೈ ಜೈಲಿನಲ್ಲಿರುವ ದರೋಡೆಕೋರರನ್ನು ಕಸ್ಟಡಿಗೆ ಪಡೆಯಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಬೆಂಗಳೂರು ನ್ಯಾಯಾಲಯದಿಂದ ವಾರೆಂಟ್ ಸಹ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಂಡಿನ ದಾಳಿಯಲ್ಲಿ ಇಬ್ಬರ ಸಾವು
ಬೆಂಗಳೂರಿನ ಶಬ್ನಮ್ ಡೆವಲಪರ್ಸ್ ಮಾಲೀಕ ಕೆ. ಎಸ್ ಸಮೀವುಲ್ಲಾ ಅವರು ಸ್ಥಳೀಯ ರಾಜಕಾರಣಿಯಾಗಿದ್ದರು. ಸುಲಿಗೆಗೆ ಮುಂದಾಗಿದ್ದ ರವಿ ಪೂಜಾರಿಯ ಯತ್ನಗಳನ್ನು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಂಸ್ಥೆಯ ರವಿ ಮತ್ತು ಶೈಲಜಾ ಉದ್ಯೋಗಿಗಳು ಮೃತಪಟ್ಟಿದ್ದರು.
ಕೃತ್ಯವೆಸಗಿದ ನಂತರ ಸ್ಥಳಿಯ ಖಾಸಗಿ ವಾಹಿನಿಯೊಂದಕ್ಕೆ ಕರೆ ಮಾಡಿದ್ದ ರವಿ ಪೂಜಾರಿ ಎಂಬ ಹೆಸರಿನವರು, ಮುಂಬೈ ದರೋಡೆಕೋರರಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಅವರಿಂದ ಶಬ್ನಮ್ ಡೆವಲಪರ್ಸ್ ಗುಂಡಿನ ದಾಳಿ ನಡೆದಿದೆ ಎಂದಿದ್ದರು. ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದಾರೆ. ಆರೋಪಿಗಳಾದ ಎಸ್.ಆನಂದ್ ಮತ್ತು ಟಿ.ವಿಜಯ್ ಕುಮಾರ್ ರನ್ನು ಬಂಧಿಸಲಾಗಿತ್ತು. ಆರೋಪಿ ಕಿಶೋರ್ ಎಂಬಾತ ವಿಚಾರಣೆಯ ವೇಳೆ ಅಸುನೀಗಿದ್ದ.
2016 ರಲ್ಲಿ 8 ಆರೋಪಿಗಳ ಜತೆಗೆ ಕುಮಾರ್‌ನನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಆನಂದ್, ರವಿ ಪೂಜಾರಿಯನ್ನು ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆ ಮುಂದುವರಿದಿದೆ. ಇದುವರೆಗೆ ಐದು ಚಾರ್ಜ್‌ಶೀಟ್ ಸಲ್ಲಿಕೆ ಆಗಿವೆ.

9 ಆರೋಪಿಗಳು ಖುಲಾಸೆ
ವಿಚಾರಣಾ ನ್ಯಾಯಾಲಯವು 9 ಆರೋಪಿಗಳಾದ ಮೋಹನ್ ರಾಜು, ಕೆ.ಉದಯ್, ವಿಜಯ್ ಕುಮಾರ್, ಶಿವಕುಮಾರ್, ಇಬ್ರಾಹಿಂ, ಮಹೇಶ್, ಸಂತೋಷ್, ನಟರಾಜ್ ಶರ್ಮಾ ಹಾಗೂ ಪ್ರದೀಪ್ ಇವರೆಲ್ಲಿ ರವಿ ಪೂಜಾರಿ ಜತೆ ಸಂಪರ್ಕದಲ್ಲಿದ್ದ ಎಂಬುದಕ್ಕೆ ಸಾಕ್ಷ್ಯಾಧಾರ ಸಲ್ಲಿಕೆಯಲ್ಲಿ ವಿಫಲಗೊಂಡ ಹಿನ್ನಲೆ ಇಷ್ಟು ಜನರನ್ನು ಖುಲಾಸೆಗೊಳಿಸಲಾಗಿತ್ತು.
ಕೇವಲ ಶಬನಂ ಡೆವಲಪರ್ಸ್ ಗುಂಡಿನ ದಾಳಿಯಲ್ಲಷ್ಟೇ ಅಲ್ಲದೇ 2001ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ರವಿ ಹೆಸರು ಕೇಳಿ ಬಂದಿತ್ತು. ಅಲ್ಲದೇ ಸುರೇಶ್ ಪೂಜಾರಿ ಮೇಲೆ ಮಹಾರಾಷ್ಟ್ರದಲ್ಲಿ 24 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ರವಿ ಪೂಜಾರಿಯ ಜತೆ ನಿಕಟ ಸಂಬಂಧ ಹೊಂದಿದ್ದ ಸುರೇಶ್ ದರೋಡೆಯಲ್ಲಿ ಬಲಗೈ ಬಂಟನಂತಿದ್ದ.
2001ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಮುತ್ತಪ್ಪ ರೈ 2004ರಲ್ಲಿ ಖುಲಾಸೆಗೊಂಡಿದ್ದರು. ಶಬನಂ ಗಂಡಿನ ದಾಳಿಯಲ್ಲಿ ಸಂಚು ರೂಪಿಸಿದ್ದ ರವಿ ಪೂಜಾರಿ ಖುಲಾಸೆಯಾದ ನಂತರ 2020ರಲ್ಲಿ ಮೃತಪಟ್ಟ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.












Click it and Unblock the Notifications