Get Updates
Get notified of breaking news, exclusive insights, and must-see stories!

White Tapping Work: ಬೆಂಗಳೂರಿನ ಈ ರಸ್ತೆಯಲ್ಲಿ ಆಗಸ್ಟ್‌ 30ರವರೆಗೂ ವಾಹನ ಸಂಚಾರ ನಿರ್ಬಂಧ: ಪಾರ್ಯಯ ಮಾರ್ಗಗಳ ವಿವರ

White Tapping Work: ಸಾಮಾನ್ಯವಾಗಿ ಕಾಮಗಾರಿ ನಡೆಯುವಂತಹ ಮಾರ್ಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಹಾಗೆಯೇ ಇದೀಗ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಂಡ ಹಿನ್ನೆಲೆ ಬೆಂಗಳೂರಿನ ಈ ರಸ್ತೆಗಳಲ್ಲಿ ಆಗಸ್ಟ್‌ 30ರವರೆಗೂ ವಾಹನ ಸಂಚಾರವನ್ನ ನಿರ್ಬಂಧಿಸಲಾಗಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು ಅಂದ್ರೆ ಮೊದಲಿಗೆ ಜನರ ಬಾಯಲ್ಲಿ ಕೇಳಿಬರುವ ಶಬ್ಧವೇ ಟ್ರಾಫಿಕ್‌ ನಗರ ಅಂತಾ. ನಗರದಲ್ಲಿ ಪ್ರತಿನಿತ್ಯ ವಾಹನ ಸವಾರರು ಟ್ರಾಫಿಕ್‌ನಿಂದ ಪರದಾಡುತ್ತಲಿರುತ್ತಾರೆ. ಅದರಲ್ಲೂ ಗುಂಡಿ ಬಿದ್ದ ರಸ್ತೆಗಳ ಭಾಗಗಳಂತೂ ಟ್ರಾಫಿಕ್‌ ನಡುವೆಯೂ ವಾಹನ ಚಲಾಯಿಸುವುದೇ ಸವಾಲಾಗಿಬಿಟ್ಟಿದೆ. ಈ ನಡುವೆಯೇ ಕೆಲವೆಡೆ ರಸ್ತೆ ನಿರ್ಮಾಣ ಕಾಮಗಾರಿ, ವೈಟ್‌ ಟಾಪಿಂಗ್‌ ಕೆಲಸಗಳು ನಡೆಯುತ್ತಿವೆ.

Bengaluru Police Alert Vehicle Restrictions on JC Road Till August 30 for White Topping Work

ನಗರದ ಹೃದಯ ಭಾಗದಲ್ಲಿ ಇರುವ ಜೆ.ಸಿ ರಸ್ತೆಯಲ್ಲಿ ಕಳೆದ ಕೆಲ ತಿಂಗಳಿನಿಂದಲೂ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿಯತ್ತು. ಇದೀಗ ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಆಗಸ್ಟ್‌ 25ರಿಂದ 30ರ ವರೆಗೆ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದು, ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಜೆ.ಸಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ವಾಹನ ಸವಾರರಿಗೆ ಅನುಕೂಲ ಆಗುವಂತೆ ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿಯನ್ನು ಸಹ ನೀಡಿದ್ದಾರೆ.

ಯಾವ ವಾಹನಗಳಿಗೆ ನಿರ್ಬಂಧ?: ಜೆಸಿ ರಸ್ತೆ, ಮಿನರ್ವಾ ಸರ್ಕಲ್ ಕಡೆಗೆ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್‌ಗಳಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಪರ್ಯಾಯ ಮಾರ್ಗಗಳ ಬಗ್ಗೆ ನೋಡುವುದಾದ್ರೆ, ರಾಮ ಕೃಷ್ಣ ಆಶ್ರಮ, ಬುಲ್ ಟೆಂಪಲ್ ರಸ್ತೆ, ಚಾಮರಾಜ ಪೇಟೆ, ಗೂಡ್ ಶೆಡ್ ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವುದು.

ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಕೆಆರ್ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್, ಅಶೋಕ ಪಿಲ್ಲರ್ ಸಿದ್ಧಾರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ಸೇರುವುದು. ಹೊಸೂರು ರಸ್ತೆಯಿಂದ ಡಬಲ್ ರಸ್ತೆ ರಿಚ್ಮಂಡ್ ಸರ್ಕಲ್, ಹಡ್ನನ್ ಸರ್ಕಲ್, ಕೆ.ಜಿ. ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಚಾರ ಮಾಡಬಹುದು.

ಪ್ರತಿನಿತ್ಯ ಜೆ.ಸಿ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಈ ಹಿನ್ನೆಲೆ ಕಾಮಗಾರಿ ವಿಳಂಬ ಆಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ಇಲ್ಲಿನ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಬೇಸತ್ತಿದ್ದಾರೆ. ಆದ್ದರಿಂದ ಕಾಮಗಾರಿಗೆ ವೇಗ ಕೊಟ್ಟು ಬೇಗ ಮುಗಿಸಿ ಎನ್ನುವುದು ವಾಹನ ಸವಾರರ ಆಗ್ರಹವಾಗಿದೆ. ಹೀಗೆ ಬೆಂಗಳೂರಿನಲ್ಲಿ ಯಾವುದಾದರೂ ಒಂದು ರಸ್ತೆಯಲ್ಲಿ ಕಾಮಗಾರಿ ಆರಂಭಿಸಿದರೆ, ವಾಹನ ಸವಾರರಿಗೆ ಪರದಾಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್‌ ಆಗಿ ವಾಹನ ಸವಾರರು ಪೇಚಾಡಿಕೊಂಡು ಮನೆಗೆ ತಲುಪುವಂತಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+