'40 ಕುಡುಕರ ಮಧ್ಯೆ ನಾನೊಬ್ಬಳು ದುರ್ದೈವಿ'
ಬೆಂಗಳೂರು, ಡಿಸೆಂಬರ್, 11: ಅಲ್ಲೊಂದು ಹೆಣ್ಣು ಜೀವ ಇದೆ ಎಂಬ ಸಂಗತಿ ಬಹುತೇಕರಿಗೆ ಗೊತ್ತಾಗಲೂ ಸಾಧ್ಯವಿರಲಿಲ್ಲ. ಗೊತ್ತಾದರೂ ಮಾಡುವುದಾದರರೂ ಏನು? 40 ಜನ ಪುರುಷರ ಮಧ್ಯೆ ಆಕೆ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾಳೆ.
40 ಕುಡುಕರ ಮಧ್ಯೆ ಇವಳೊಬ್ಬಳೆ. ರಾತ್ರಿ ಆಕೆ ಮಲುಗುವುದಕಲ್ಕೂ ಭದ್ರತೆಯಿಲ್ಲ. ಏನಾದರೂ ಸಂಕಷ್ಟ ತೊಡಿಕೊಂಡರೆ, ಕಿರುಚಾಡಿದರೆ ಬೀಳುತ್ತೆ ಬೆತ್ತದ ಹೊಡೆತ ಬೀಳುತ್ತದೆ.[ಟ್ವೀಟ್ ಮಾಡಿ ಕಾಮುಕನಿಂದ ಮುಕ್ತಿ ಪಡೆದ ಮಹಿಳೆ]

ಇದೆಲ್ಲಾ ದೂರದ ಬಿಹಾರದಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ನಡೆಯುತ್ತಿದ್ದ ಘಟನೆಯಲ್ಲ. ನಮ್ಮದೇ ಬೆಂಗಳೂರಿನ ಯಲಹಂಕದ ಅನಧಿಕೃತ ಡಿ ಅಡಿಕ್ಷನ್ ಸೆಂಟರ್ ನಲ್ಲಿ ಕಂಡು ಬಂದ ಕರಾಳ ಮುಖ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]
ಸ್ಥಳೀಯರ ದೂರಿನ ಮೇರೆಗೆ ಮಾನವ ಹಕ್ಕುಗಳ ಸಂಘಟನೆಯೊಂದು ಸ್ಥಳಕ್ಕೆ ಭೇಟಿ ಕೊಟ್ಟಾಗ ನರಳುತ್ತಿರುವ ಹೆಣ್ಣು ಮಗಳ ಕರಾಳ ಜೀವನ ಕಣ್ಣಿಗೆ ಬಿದ್ದಿದೆ. ಈ ದುರ್ದೈವಿ ಹೆಣ್ಣು ಮಗಳ ಹೆಸರು ಫೌಜಿಯಾ. ಆಗಾಗ ರೂಮಿನತ್ತ ಸುಳಿಯುವ ಗಂಡಸರ ನೆರಳು, ಮಾನಸಿಕ ದೈಹಿಕ ಹಿಂಸೆ ಇದು ಆಕೆಯ ಪ್ರತಿದಿನದ ಬದುಕು.
ತಂದೆ ತಾಯಿ ಇಲ್ಲದ ಅನಾಥೆ ಫೌಜಿಯಾಳನ್ನು ಆಸ್ತಿ ವಿವಾದವೊಂದು ಸುತ್ತಿಕೊಮಡಿದೆ. ಆಕೆಯ ಮಾವಂದಿರಿಗೆ ಸಿಕ್ಕಿದ್ದು ಈ ಡಿ ಅಡಿಕ್ಷನ್ ಸೆಂಟರ್. ಎರಡು ಮೂರು ತಿಂಗಳಿಂದ ಈಕೆಗೆ ಹೊರ ಜಗತ್ತಿನ ಸಂಪರ್ಕ ಇಲ್ಲ.
ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮಾಧ್ಯಗಳ ಎದುರು ಫೌಜಿಯಾ ಅಳಲು ತೋಡಿಕೊಂಡರು. ಯಲಹಂಕ ವ್ಯಾಪ್ತಿಯಲ್ಲಿ ಇಂಥಹ ಅನಧಿಕೃತ ಸೆಂಟರ್ ಗಳು ಸಾಕಷ್ಟಿವೆ. ಮಹಿಳೆಯರ ಪರ ಎಂದು ಸದಾ ಬೊಬ್ಬಿಡುವ ಸರ್ಕಾರ ಮತ್ತು ಮಹಿಳಾ ಸಂಘಟನೆಗಳಿಗೆ ಇಂಥ ಕರ್ಮಕಾಂಡ ಮಾತ್ರ ಕಾಣದಿರುವುದು ವಿಪರ್ಯಾಸ.












Click it and Unblock the Notifications