ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ7 ಹಳ್ಳಿಗಳಿಗೆ ಕಾವೇರಿ ನೀರು!

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳ ಪೈಕಿ 7 ಹಳ್ಳಿಗಳಿಗೆ ಮಾರ್ಚ್ ಮೊದಲ ವಾರದಲ್ಲಿ ಕಾವೇರಿ ನೀರು ಪೂರೈಕೆಯಾಗಲಿದೆ.

ಮೊದಲ ಹಂತದಲ್ಲಿ 10 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಜಲಮಂಡಳಿ ಸಿದ್ಧತೆ ನಡೆಸಿದ್ದು, ಈ ಪೈಕಿ 7 ಹಳ್ಳಿಗಳ ಕಾಮಗಾರಿ ಮುಕ್ತಾಯಗೊಂಡಿದೆ. ಮಾರ್ಚ್ ಮೊದಲ ವಾರದಲ್ಲಿ ನೀರು ಪೂರೈಕೆ ಆರಂಭಗೊಳ್ಳಲಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರೈತರ ವಿರೋಧಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರೈತರ ವಿರೋಧ

110 ಹಳ್ಳಿಗಳಿಗೆ ನೀರು ಒದಗಿಸುವ ಕಾಮಗಾರಿಯನ್ನು 1,886 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಮಹದೇವಪುರ, ಆರ್ ಆರ್ ನಗರ, ಬ್ಯಟರಾಯನಪುರ, ಬೊಮ್ಮನಹಳ್ಳಿ ಹಾಗೂ ದಾಸರಹಳ್ಳಿ ವಲಗಳಲ್ಲಿ ಕಾಮಗಾರಿ ನಡೆಯುತ್ತಿದೆ. 2019ರ ವೇಳೆಗೆ ಪೈಪ್ ಲೈನ್ ಜೋಡಣೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 7 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕುರಿತಾದ ಮಾಹಿತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಸಂಪರ್ಕಿಸುವಂತೆ ಜಲಮಂಡಳಿ ಕೋರಿದೆ.

ಕಾವೇರಿ ತೀರ್ಪು: ಬೆಂಗಳೂರಿಗರ ಮೊಗದಲ್ಲಿ ಹರ್ಷದ ಬುಗ್ಗೆಕಾವೇರಿ ತೀರ್ಪು: ಬೆಂಗಳೂರಿಗರ ಮೊಗದಲ್ಲಿ ಹರ್ಷದ ಬುಗ್ಗೆ

Bengaluru outskirt villages may get Cuavery water in March

ಆನ್ ಲೈನ್ ಅರ್ಜಿ: ಹೊಸ ಸಂಪರ್ಕ ಪಡೆಯಲು ಸಾರ್ವಜನಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆಗೆ ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ವೆಬ್ ಸೈಟ್-www.bwssb.gov.in

English summary
Out of 110 vilages in Bengaluru out skirts, seven of them will get Cauvery driniking water by first week of march. The BWSSB has taken initiation to complete work as soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X