• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಣ್ಮನಗಳಿಗೆ ಮುದ ನೀಡುವ ಕ್ರಿಸ್ಮಸ್ ಸಿದ್ಧತೆ ಜೋರೋ ಜೋರು

By Vanitha
|

ಬೆಂಗಳೂರು, ಡಿಸೆಂಬರ್ 24: ಹಳೆ ವರ್ಷ ಕಳುಹಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ವರ್ಷಾಂತ್ಯದ ಆಚರಣೆಯ ಸಿದ್ಧತೆ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದ್ದೆ. ಅದರಲ್ಲೂ ಬೆಂಗಳೂರಲ್ಲಂತೂ ಕೇಳೋದೆ ಬೇಡ ಬಿಡಿ. ಇನ್ನಷ್ಟು ಜೋರೋ ಜೋರು.

ಈಗಾಗಲೇ ಬೆಂಗಳೂರಿನ ಒರಾಯನ್ ಮಾಲ್, ಗೋಪಾಲನ್ ಮಾಲ್, ಮಂತ್ರಿ ಮಾಲ್, ಗರುಡ ಮಾಲ್ ಸೇರಿದಂತೆ ಎಲ್ಲಾ ಮಾಲ್ ಗಳಲ್ಲಿ ಕ್ರಿಸ್ಮಸ್ ಹಾಗೂ ಹೊಸವರ್ಷಕ್ಕೆ ವೈವಿಧ್ಯಮಯವಾಗಿಯೇ ಸಜ್ಜುಗೊಳ್ಳುತ್ತಿದ್ದು, ನೋಡುಗರನ್ನು ತನ್ನತ್ತ ಸೆಳೆಯಲು ಎಲ್ಲಾ ಕಸರತ್ತು, ಅಲಂಕಾರ, ಲೈಟಿಂಗ್ ಸಖತ್ತಾಗಿಯೇ ನಡೆಯುತ್ತಿದೆ.

ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬ ಆಚರಣೆಯು ಒರಾಯನ್ ಮಾಲ್ ನಲ್ಲಿ ಎಲ್ಲಾ ಮಾಲ್ ಗಳಿಗಿಂತ ವಿಭಿನ್ನ, ವಿಶೇಷವಾಗಿದ್ದು, ಹಬ್ಬದ ಉತ್ಸಾಹದಲ್ಲಿ ಒರಾಯನ್ ಮಾಲ್ ಕಂಗೊಳಿಸುತ್ತಿದೆ. ಕ್ರಿಸ್ ಮಸ್ ಟ್ರೀ, ವೈವಿಧ್ಯಮಯ ಕೇಕ್, ಮಕ್ಕಳೊಂದಿಗೆ ಆಟವಾಡಲು ಕ್ರಿಸ್ಮಸ್ ಸಂತ, ಜಗಮಗದ ಲೈಟಿಂಗ್, ಆಕಾಶದಿಂದ ಧರೆಗಿಳಿದಂತೆ ಕಾಣುವ ಹ್ಯಾಗಿಂಗ್ ನಕ್ಷತ್ರಗಳು....ಅಬ್ಬಬ್ಬಾ...[ಕ್ರಿಸ್ಮಸ್, ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು]

ಒರಾಯನ್ ಮಾಲ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಭರ್ಜರಿ ತಯಾರಿಯನ್ನು ಕೇವಲ ಮಾತುಗಳಲ್ಲಿ ಕೇಳಿದರೆ ಏನು ಪ್ರಯೋಜನವಿಲ್ಲ. ನಾವು ತೋರಿಸ್ತೀವಿ ಒರಾಯನ್ ಮಾಲ್ ನ ಭರ್ಜರಿ ಸಿದ್ದತೆಯನ್ನು. ಸಿದ್ದತೆ ನೋಡಿಕೊಂಡು ಒರಾಯನ್ ಮಾಲ್ ಗೆ ಒಂದು ವಿಸಿಟ್ ಹಾಕಿ ಬನ್ನಿ.....

ಕಣ್ಮನ ಸೆಳೆಯುವ ಕ್ರಿಸ್ಮಸ್ ಟ್ರೀ

ಕಣ್ಮನ ಸೆಳೆಯುವ ಕ್ರಿಸ್ಮಸ್ ಟ್ರೀ

ಕ್ರಿಸ್ಮಸ್ ಟ್ರೀ ಇಲ್ಲದೆ ಕ್ರಿಸ್ಮಸ್ ಹಬ್ಬ ಕಳಗಟ್ಟುವುದೇ ಇಲ್ಲ. ನೋಡಿ ಒರಾಯನ್ ಮಾಲ್ ನಲ್ಲಿ ನಿರ್ಮಾಣವಾದ ಕ್ರಿಸ್ಮಸ್ ಟ್ರೀ ಎಷ್ಟು ದೊಡ್ಡದಾಗಿದೆ. ಅದರಲ್ಲಿರುವ ಪುಟ್ಟ ಪುಟ್ಟ ನಕ್ಷತ್ರಗಳು, ಲೈಟಿಂಗ್ ಸೂಪರೋ ಸೂಪರ್.

ನಿಮ್ಮನ್ನು ಬರಮಾಡಿಕೊಳ್ಳುತ್ತದೆ ಜಗಮಗಿಸುವ ಲೈಟಿಂಗ್

ನಿಮ್ಮನ್ನು ಬರಮಾಡಿಕೊಳ್ಳುತ್ತದೆ ಜಗಮಗಿಸುವ ಲೈಟಿಂಗ್

ನೀವು ಒರಾಯನ್ ಮಾಲ್ ಬಳಿ ಹೋದರೆ ಸಾಕು. ಮುಂಭಾಗದಲ್ಲಿನ ಕಣ್ಮನ ಸೆಳೆಯುವ ಲೈಟಿಂಗ್ ಒಳ ಪ್ರವೇಶಿಸುವಂತೆ ನಮ್ಮನ್ನು ಕೈಬೀಸಿ ಕರೆದಂತೆ ಅನುಭವವಾಗುತ್ತದೆ.

ನಮಗಿಂತಲೂ ಎತ್ತರವಾದ ಉಡುಗೊರೆಗಳ ಪೊಟ್ಟಣ

ನಮಗಿಂತಲೂ ಎತ್ತರವಾದ ಉಡುಗೊರೆಗಳ ಪೊಟ್ಟಣ

ಆಳೆತ್ತರಕ್ಕಿಂತಲೂ ದೊಡ್ಡದಾಗ ಉಡುಗೊರೆಗಳ ಪೊಟ್ಟಣಗಳ ಪ್ರದರ್ಶನವು ಮಾಲ್ ನ ಪ್ರವೇಶದ್ವಾರದಲ್ಲೇ ಸಂದರ್ಶಕರಿಗೆ ಬೆರಗು ಹುಟ್ಟಿಸುತ್ತದೆ

ಆಕಾಶದಿಂದ ಧರೆಗಿಳಿದ ನಕ್ಷತ್ರಗಳು

ಆಕಾಶದಿಂದ ಧರೆಗಿಳಿದ ನಕ್ಷತ್ರಗಳು

ಆಕಾಶದಿಂದ ನೇರವಾಗಿ ನಕ್ಷತ್ರಗಳು ಒರಾಯನ್ ಮಾಲ್ ನಲ್ಲಿಯೇ ಬಂದು ಒಂದು ವಾರ ಉಳಿದುಕೊಳ್ಳುವ ಪ್ಲ್ಯಾನ್ ಹಾಕಿದಂತಿದೆ. ಒಟ್ಟಿನಲ್ಲಿ ಹೊಳೆಯುವ ನಕ್ಷತ್ರಗಳು, ನೇತಾಡುವ ಲೈಟ್ ಗಳು ಒರಾಯನ್ ಮಾಲ್ ನ ಮತ್ತೊಂದು ಆಕರ್ಷಣೆ.

ಸೆಲ್ಫೀ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ

ಸೆಲ್ಫೀ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ

ಸ್ವರ್ಗಲೋಕವನ್ನೇ ನಾಚಿಸುವಂತಹ ಅದ್ದೂರಿ ಅಲಂಕಾರದಿಂದ ಒರಾಯನ್ ಮಾಲ್ ಜಗಮಗಿಸುತ್ತಿದೆ. ಒಟ್ಟಿನಲ್ಲಿ ಫೋಟೋ ಪ್ರಿಯರಿಗೆ, ಸೆಲ್ಫೀ ಪ್ರಿಯರಿಗೆ ಇದು ಬೆಸ್ಟ್ ಪ್ಲೇಸ್.

ಕ್ರಿಸ್ಮಸ್ ಸಂತನ ಜೊತೆ ಆಡಲು ಬನ್ನಿ

ಕ್ರಿಸ್ಮಸ್ ಸಂತನ ಜೊತೆ ಆಡಲು ಬನ್ನಿ

ಮಕ್ಕಳೇ ನೀವು ಕ್ರಿಸ್ಮಸ್ ತಾತನ ಜೊತೆ ಆಟ ಆಡಬೆಕೆ? ಆತ ಕೊಡುವ ಗಿಫ್ಟ್ ಬೇಕೆ, ನೀವು ಅವರೊಂದಿಗೆ ಸೇರಿ ನಲಿದಾಡಬೇಕೆ ಹಾಗಾದರೆ ನೀವು ಖಂಡಿತಾ ಒರಾಯನ್ ಮಾಲ್ ಗೆ ಹೋಗಿಬನ್ನಿ. ನಿಮ್ಮ ಕ್ರಿಸ್ಮಸ್ ಸಂತ ನಿಮಗಾಗಿ ಕಾಯುತ್ತಿದ್ದಾನೆ. ಪುಟಾಣಿಗಳನ್ನು ಮುದಗೊಳಿಸಲು ಅಲ್ಲಿರಲಿದ್ದಾನೆ.

ನಿಮ್ಮ ಮನಸ್ಸನ್ನು ಮುದಗೊಳಿಸಲು ಪಾಪ್ ಸಾಂಗ್

ನಿಮ್ಮ ಮನಸ್ಸನ್ನು ಮುದಗೊಳಿಸಲು ಪಾಪ್ ಸಾಂಗ್

ನೀವು ಮಾಲ್ ಎಲ್ಲಾ ಸುತ್ತಾಡಿ ಆಯಾಸಭರಿತರಾಗಿದ್ದರೆ, ನಿಮ್ಮ ಮನವನ್ನು ಮುದಗೊಳಿಸಲಿದೆ ವೈವಿಧ್ಯಮಯ ಪಾಶ್ಚಾತ್ಯ ಸಂಗೀತ, ಪಾಪ್ ಸಾಂಗ್ ಗಾಯಕರು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಕ್ಯಾರೊಲರ್ ಗಳು ಋತುವಿನ ಪ್ರೀತಿಯ ಹಾಡುಗಳನ್ನು ಹಾಡಿ ಕ್ರಿಸ್ಮಸ್ ಜೋಶ್ ಅನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

ಸಾಲಾಗಿರುವ ಕ್ರಿಸ್ಮಸ್ ಲಾಂಛನಗಳು

ಸಾಲಾಗಿರುವ ಕ್ರಿಸ್ಮಸ್ ಲಾಂಛನಗಳು

ಸಾಲಾಗಿರುವ ಕ್ರಿಸ್ಮಸ್ ಲಾಂಛನಗಳು ಮಾಲ್ ನಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಿವೆ ಮತ್ತು ಮನರಂಜಿಸುತ್ತಿವೆ. ಸ್ನೋಫ್ಲೇಕ್ ಗಳು ಎಲ್ಲೆಡೆ ಮಿಂಚುತ್ತಿವೆ.

ಇಲ್ಲಿದೆ ಟ್ರಿಕ್ಸೀ ಎಲ್ವೆಸ್ ಗುಚ್ಛ

ಇಲ್ಲಿದೆ ಟ್ರಿಕ್ಸೀ ಎಲ್ವೆಸ್ ಗುಚ್ಛ

ನೀವು ಆಟಿಕೆ ಯೋಧರ ಬ್ಯಾಂಡ್ ಮತ್ತು ಸ್ಕೇಟಿಂಗ್ ಮಾಡುತ್ತಿರುವ ಸ್ನೋಮೆನ್ ಅನ್ನು ಕಾಣಲಿದ್ದೀರಿ. ಲಾಂಛನದೊಂದಿಗೆ ನೃತ್ಯಗೈಯುವಾಗ ಮೋಜಿನ ಸಂಗತಿಯಾಗಿ ಟ್ರಿಕ್ಸೀ ಎಲ್ವೆಸ್ ನ ಗುಚ್ಛವು ನಿಮಗೆ ಎದುರಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
End-of-year celebrations are now in full swing at Orion Mall, with the space being wrapped up in the festive spirit of the season. Eye-catching lighting in exquisite forms adorns the facades and snowflakes sparkle everywhere. A jaw-dropping display of larger-than-life gifts welcomes visitors at the mall entrance. The Christmas tree is a spectacle in itself and you’ll certainly want to stop for a selfie here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more