Get Updates
Get notified of breaking news, exclusive insights, and must-see stories!

ಸೂಲಿಬೆಲೆ: ಚಲಿಸುತ್ತಿದ್ದ ಮಿನಿ ಬಸ್ ನಲ್ಲೇ ಅತ್ಯಾಚಾರ

ಬೆಂಗಳೂರು, ನವೆಂಬರ್. 06: ಬೆಂಗಳೂರು ಹೊರವಲಯದಲ್ಲಿ ಗುರುವಾರ ಚಲಿಸುತ್ತಿರುವ ಮಿನಿ ಬಸ್ ನಲ್ಲಿಯೇ 19 ವರ್ಷದ ಯುವತಿ ಮೇಲೆ ಅತ್ಯಾಚಾರವಾಗಿದೆ.

ಅತ್ಯಾಚಾರ ಆರೋಪಿಗಳಾದ ಶಿವಮೊಗ್ಗ ಮೂಲದ ರವಿ (26) ಮತ್ತು ಆತನಿಗೆ ಸಹಕರಿಸಿದ ಕ್ಲೀನರ್‌ ಚಿಂತಾಮಣಿ ಮೂಲದ ಮಂಜು (23) ಎಂಬುವರನ್ನು ಬಂಧಿಸಲಾಗಿದೆ.[ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]

rape

ಖಾಸಗಿ ಕಾರ್ಖಾನೆಯೊಂದಕ್ಕೆ ಸೇರಿದ ಆಂಧ್ರ ಪ್ರದೇಶ ಪಾಸಿಂಗ್ ಹೊಂದಿರುವ ಬಸ್‌ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಚಲಿಸುತ್ತಿರುವ ಬಸ್ ನಲ್ಲಿಯೇ ಕೆಲಸಕ್ಕೆಂದು ತೆರಳುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ.

ಬಸ್‌ಗಾಗಿ ಕಾಯುತ್ತಿದ್ದ 19 ವರ್ಷದ ಯುವತಿಯನ್ನು ಬಸ್‌ ಗೆ ಹತ್ತಿಸಿಕೊಂಡ ಚಾಲಕ ಆ ಬಳಿಕ ಕ್ಲೀನರ್‌ಗೆ ವಾಹನ ಚಲಾಯಿಸುವಂತೆ ಹೇಳಿ ಬಸ್‌ನ ಎಲ್ಲಾ ಕಿಟಕಿ ಗಾಜುಗಳನ್ನು ಮುಚ್ಚಿ ಕೃತ್ಯ ಎಸಗಿದ್ದಾನೆ. ಬಳಿಕ ಯುವತಿಯನ್ನು ಲಕೊಂಡ ಕ್ರಾಸ್‌ ಬಳಿ ಬಸ್‌ನಿಂದ ಕೆಳಕ್ಕೆ ಹಾಕಿ ಪರಾರಿಯಾಗಿದ್ದಾರೆ. [ಕಾಮುಕರ ಪುರುಷತ್ವ ಹರಣ ಮಾಡಿ: ಮದ್ರಾಸ್ ಹೈಕೋರ್ಟ್]

ನರ್ಸಿಂಗ್‌ ಹೋಮ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ವೈದ್ಯರ ಬಳಿ ಎಲ್ಲ ಮಾಹಿತಿ ತಿಳಿಸಿದ್ದಾರೆ. ಇದಾದ ನಂತರ ಘಟನೆಯ ವಿವರವನ್ನು ಪೊಲೀಸರಿಗೆ ನೀಡಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.[ಅತ್ಯಾಚಾರ ತಡೆಗೆ ನೀವು ಸಹಿ ಮಾಡಿ]

ಅತ್ಯಾಚಾರದ ನಂತರ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಚೇತರಿಸಿಕೊಂಡಿದ್ದಾಳೆ. ನವದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಈ ಬಗೆಯ ಅತ್ಯಾಚಾರಗಳು ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+