ಸಂಕ್ರಾಂತಿ ಬೆಳಗ್ಗೆ ಬೆಂಗಳೂರನ್ನು ಬೆಚ್ಚಿಸಿದ ಬಾಂಬ್ ವದಂತಿ!
ಬೆಂಗಳೂರು, ಜನವರಿ, 15: ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಕಾವೇರಿ ಜಂಕ್ಷನ್ ಬಳಿ ಶುಕ್ರವಾರ ಬೆಳಗ್ಗೆ ನಿಗೂಢ ಬಾಕ್ಸ್‌ವೊಂದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಇದರಲ್ಲಿ ಯಾವ ಬಗೆಯ ಸ್ಫೊಟಕವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏರ್‌ಪೋರ್ಟ್ ರಸ್ತೆಯಲ್ಲಿರುವ ಕಾವೇರಿ ಜಂಕ್ಷನ್ ಬಳಿ ಈ ಬಾಕ್ಸ್ ಪತ್ತೆಯಾಗಿದ್ದು ಬಾಕ್ಸ್‌ನಲ್ಲಿ ಅರೇಬಿಕ್ ಭಾಷೆಯ ಬರಹಗಳು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿತ್ತು. ವಿಷಯ ತಿಳಿದ ಕೂಡಲೇ ವೈಯಾಲಿ ಕಾವಲ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು.[ಆಟಂ ಬಾಂಬಿಗಿಂತ ಹೈಡ್ರೋಜನ್ ಬಾಂಬ್ ಭಯಂಕರ ಏಕೆ?]

ಸ್ಥಳೀಯರ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ್ದೇವೆ. ಇದರಲ್ಲಿ ಇರುವುದು ಲಿಕ್ವಿಡ್ ಮಾತ್ರ,. ಬಾಂಬ್ ಇಲ್ಲ. ನಗರದ ಜನ ಆತಂಕ ಪಡಬೇಕಾಗಿಲ್ಲ ಎಂದು ಪೊಲೀಸ್ ಆಯುಕ್ತ ಮೇಘರಿಕ್ ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲು ಸಂಚಾರ ಬಂದ್ ಮಾಡಲಾಗಿತ್ತು. ಪೊಲೀಸರು ತಕ್ಷಣ ಮರಳು ಮೂಟೆಗಳನ್ನು ತಂದು ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದರು.












Click it and Unblock the Notifications